ಹುಬ್ಬಳ್ಳಿ: ಧಾರವಾಡದ ಪ್ರಕಾಶ ಭಾವಿಕಟ್ಟಿ ಅವರ ವಾಟ್ಸ್‌ಆಯಪ್ ನಂಬರ್‌ಗೆಸಂದೇಶ ಕಳುಹಿಸಿ ಮೊಬೈಲ್ ಹ್ಯಾಕ್ ಮಾಡಿದ ವ್ಯಕ್ತಿ, ಬ್ಯಾಂಕ್ ಖಾತೆಯಿಂದ ₹1.63 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕಾಶ ಅವರು ವಾಟ್ಸ್‌ಆಯಪ್ ನಂಬರ್‌ಗೆ ಬಂದ ಸಂದೇಶ ತೆರೆದಾಗ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಸ್ವಲ್ಪ ಸಮಯದ ನಂತರ ಯುಕೋ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿರುವ ಬಗ್ಗೆ ಮೊಬೈಲ್‌ಗೆ ಸಂದೇಶಗಳು ಬಂದಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
₹2.85 ಲಕ್ಷ ವಂಚನೆ: ಹಳೇಹುಬ್ಬಳ್ಳಿಯ ಎಸ್.ಎಂ. ಕೃಷ್ಣನಗರದ ಆಟೊ ಚಾಲಕ ಮಹ್ಮದ್‌ಹನೀಫ್ ಅವರ ಬ್ಯಾಂಕ್ ಖಾತೆಯಲ್ಲಿದ್ದ ₹2.85 ಲಕ್ಷ ಅವರ ಗಮನಕ್ಕೆ ಬರದೆ ಅಕ್ರಮವಾಗಿ ವರ್ಗಾವಣೆಯಾಗಿದೆ. ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
261104-24-1885892111

