Thursday, 04 Mar, 9.10 am ಪ್ರಜಾವಾಣಿ

ಬೆಂಗಳೂರು ಗ್ರಾಮಾಂತರ
ಮೋದಿ 'ಅಚ್ಛೇ ದಿನ್‌' ಜನರಿಗೆ ಶಾಪ: ಸಿದ್ದರಾಮಯ್ಯ

ದೇವನಹಳ್ಳಿ: ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ನೀಡಿದ್ದ ಭರವಸೆ ಈಡೇರಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಬೆಂಗಳೂರಿನಿಂದ ಬುಧವರ ನೇರವಾಗಿ ಇಲ್ಲಿಗೆ ಬಂದ ಕಾಂಗ್ರೆಸ್‌ 'ಜನಧ್ವನಿ' ಜಾಥಾದಲ್ಲಿ ಮಾತನಾಡಿದ ಅವರು, ಐದು ವರ್ಷದಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಸಬೇಕಿದ್ದ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಸುವ ಬದಲು ಜನರ ಉದ್ಯೋಗಳನ್ನು ಕಿತ್ತುಕೊಂಡಿದೆ. ಗುಡಿ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದ ಲಕ್ಷಾಂತರ ಕುಶಲಕರ್ಮಿಗಳು, ಜನರು ನೋಟು ರದ್ದತಿಯ ನಂತರ ಕೆಲಸ ಕಳೆದುಕೊಂಡಿದ್ದಾರೆ ಎಂದರು.

ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ₹ 344 ಸಿಗುತ್ತಿದ್ದ ಅಡುಗೆ ಅನಿಲ ಸಿಲಿಂಡರ್ ಬೆಲೆ‌ ₹ 850ರಿಂದ ₹ 900 ತಲುಪಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ₹ 50 ರಿಂದ ₹ 60 ಸಿಗುತ್ತಿದ್ದ ಲೀಟರ್‌ ಪೆಟ್ರೋಲ್ ಬೆಲೆ ನೂರು ರೂಪಾಯಿಗೆ ಬಂದು ತಲುಪಿದೆ. ಇವೇ ಪ್ರಧಾನಿ ನರೇಂದ್ರ ಮೋದಿ ಅವರ 'ಅಚ್ಛೇ ದಿನ್‌' ಎಂದು ಲೇವಡಿ ಮಾಡಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top