Dailyhunt
ಮೌಂಟ್‌ ಮನಸ್ಲು ವಿಶ್ವದ 8ನೇ ಅತಿ ಎತ್ತರದ ಶಿಖರ; ಐಟಿಬಿಪಿ ಅಧಿಕಾರಿಗಳಿಂದ ಅಳತೆ

ಮೌಂಟ್‌ ಮನಸ್ಲು ವಿಶ್ವದ 8ನೇ ಅತಿ ಎತ್ತರದ ಶಿಖರ; ಐಟಿಬಿಪಿ ಅಧಿಕಾರಿಗಳಿಂದ ಅಳತೆ

ಪಿಥೋರಗಡ (ಉತ್ತರಾಖಂಡ): ಇಂಡೋ-ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌ (ಐಟಿಬಿಪಿ) ಪಡೆಯ ಇಬ್ಬರು ಅಧಿಕಾರಿಗಳು ನೇಪಾಳದಲ್ಲಿನ ಮೌಂಟ್‌ ಮನಸ್ಲು ಪರ್ವತವನ್ನು ಅಳತೆ ಮಾಡಿದ್ದಾರೆ. ಇದು ಪ್ರಪಂಚದ ಎಂಟನೇ ಅತಿ ಎತ್ತರದ ಶಿಖರವಾಗಿದೆ.

ಐಟಿಬಿಪಿಯ ಕಮಾಂಡೆಂಟ್‌ ರತನ್‌ ಸಿಂಗ್‌ ಸೋನಲ್‌ ಅವರು ಈ ಯೋಜನೆಯ ನೇತೃತ್ವ ವಹಿಸಿದ್ದರು.

ಅವರೊಂದಿಗೆ ಉಪ ಕಮಾಂಡೆಂಟ್‌ ಅನೂಪ್‌ ನೇಗಿ ಇದ್ದರು ಎಂದು ಐಟಿಬಿಪಿ ಡಿಐಜಿ ಎಪಿಎಸ್‌ ನಿಂಬಾಡಿಯಾ ಹೇಳಿದ್ದಾರೆ.

ಸೆಪ್ಟೆಂಬರ್‌ 7 ರಂದು ಶಿಖರ ಏರಲು ಆರಂಭಿಸಿದ್ದ ಇಬ್ಬರು ಅಧಿಕಾರಿಗಳು, ಸೆಪ್ಟೆಂಬರ್‌ 25ರಂದು ಶಿಖರದ ಎತ್ತರದ ಅಳತೆ ಪೂರ್ಣಗೊಳಿಸಿದ್ದಾರೆ. ಮನಸ್ಲು ಪರ್ವತವು 8,163 ಮೀಟರ್ ಎತ್ತರವಿದೆ ಎಂದು ಮಾಹಿತಿ ನೀಡಿದ್ದಾರೆ.

ಸೋನಲ್‌ ಅವರು ಮೌಂಟ್‌ ಎವರೆಸ್ಟ್‌, ನಂದಾದೇವಿ ಈಸ್ಟ್‌, ಸತೋಪಂಥ್‌ ಮತ್ತು ಮುಕುಟ್‌ ಸೇರಿದಂತೆ ಹಲವು ಶಿಖರಗಳನ್ನು ಏರಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani