Dailyhunt Logo
  • Light mode
    Follow system
    Dark mode
    • Play Story
    • App Story
ಮೂಡಲಗಿ ಪ್ರಿಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿ ಇಂದಿನಿಂದ

ಮೂಡಲಗಿ ಪ್ರಿಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿ ಇಂದಿನಿಂದ

ಮೂಡಲಗಿ: 4ನೇ ವರ್ಷದ ಮೂಡಲಗಿ ಪ್ರಿಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿಯು ನ.4ರಿಂದ ನ.8ರ ವರೆಗೆ ಸ್ಥಳೀಯ ಎಸ್‌ಎಸ್‌ಆರ್‌ ಕಾಲೇಜು ಮೈದಾನದಲ್ಲಿ ಜರುಗಲಿದ್ದು ಪ್ರಚಾರ ಪತ್ರಿಕೆಯನ್ನು ಸಂಘಟಕರು ಮಂಗಳವಾರ ಬಿಡುಗಡೆ ಮಾಡಿದರು.

ಪ್ರಥಮ ಬಹುಮಾನ ₹50,001, ದ್ವಿತೀಯ ₹30,001, ತೃತೀಯ ₹20,001 ನಗದು ಬಹುಮಾನ ಹಾಗೂ ಟ್ರೋಫಿಗಳನ್ನು ವಿಜೇತರಿಗೆ ನೀಡಲಿದ್ದಾರೆ.

ನ.4ರಂದು ಬೆಳಿಗ್ಗೆ 9ಕ್ಕೆ ಟೂರ್ನಿಯ ಉದ್ಘಾಟನೆ ಜರುಗಲಿದ್ದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಉಪಾಧ್ಯಕ್ಷ ಆರ್.ಪಿ. ಸೋನವಾಲಕರ, ನಿರ್ದೇಶಕರಾದ ಬಿ.ಎಚ್. ಸೋನವಾಲಕರ, ವಿಜಯಕುಮಾರ ಸೋನವಾಲಕರ, ಉದ್ಯಮಿ ಪ್ರಕಾಶ ಸೋನವಾಲಕರ, ಎನ್.ಟಿ. ಪಿರೋಜಿ, ಮಲ್ಲಿಕಾರ್ಜುನ ಢವಳೇಶ್ವರ, ಶ್ರೀಶೈಲ್ ಮದಗನ್ನವರ, ಹನಮಂತ ಗುಡ್ಲಮನಿ, ಈರಣ್ಣ ಕೊಣ್ಣೂರ, ರಾಮಣ್ಣ ಹಂದಿಗುಂದ, ಶಿವಪ್ಪ ಭುಜನ್ನವರ, ದೀಪಕ ಜುಂಜರವಾಡ, ಸನೀತ ಸೋನವಾಲಕರ, ಮಲ್ಲಪ್ಪ ಮದಗುಣಕಿ, ಬಾಲಶೇಖರ ಬಂದಿ, ಸಂಜಯ ಮೋಕಾಶಿ, ಡಾ. ಎಸ್.ಎಸ್. ಪಾಟೀಲ, ಸುಪ್ರಿತ ಸೋನವಾಲಕರ, ಪ್ರಶಾಂತ ನಿಡಗುಂದಿ, ರವೀಂದ್ರ ಸಣ್ಣಕ್ಕಿ, ಸಂಗಪ್ಪ ಅಂಗಡಿ ಭಾಗವಹಿಸುವರು.

ಎಸ್‌ಬಿಇ, ಮೂಡಲಗಿ ಸೂಪರ್‌ ಕಿಂಗ್ಸ್, ಮೂಡಲಗಿ ರಾಯಲ್ಸ್, ಮೂಡಲಗಿ ರಾಯಲ್ ಚಾಲಂಜರ್ಸ್, ವಿಶ್ವನಾಥ ಬೆಲ್ಲದ, ಮಹೇಶ ಕಡಕಬಾವಿ ತಂಡಗಳ ನಡುವೆ ಸ್ಪರ್ಧೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಟೂರ್ನಿಯ ಪ್ರಚಾರ ಪತ್ರಿಕೆಯನ್ನು ಶಿವಾನಂದ ಗಾಡವಿ, ವಿಶ್ವನಾಥ ಬೆಲ್ಲದ, ಕಾಶಪ್ಪ ಸಣ್ಣಕ್ಕಿ, ಸಾನ್ವೆಲ್‌ ಮೇತ್ರಿ, ಹಸನ್‌ ಸಾನೆವಾಲೆ ಅವರು ಬಿಡುಗಡೆ ಮಾಡಿದರು.

261104-21-634150383

Dailyhunt
Disclaimer: This content has not been generated, created or edited by Dailyhunt. Publisher: Prajavani