Dailyhunt Logo
  • Light mode
    Follow system
    Dark mode
    • Play Story
    • App Story
ಮುಂಬೈ: ಎನ್‌ಸಿಬಿ ಕಚೇರಿಗೆ ಭೇಟಿ ನೀಡಿದ ಶಾರೂಕ್‌ ಖಾನ್‌ ಮ್ಯಾನೇಜರ್‌

ಮುಂಬೈ: ಎನ್‌ಸಿಬಿ ಕಚೇರಿಗೆ ಭೇಟಿ ನೀಡಿದ ಶಾರೂಕ್‌ ಖಾನ್‌ ಮ್ಯಾನೇಜರ್‌

ಮುಂಬೈ: ಬಾಲಿವುಡ್‌ ನಟ ಶಾರೂಕ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಶನಿವಾರ ಬೆಳಿಗ್ಗೆ ಇಲ್ಲಿನ ಮಾದಕ ವಸ್ತುಗಳ ನಿಯಂತ್ರಣ ಸಂಸ್ಥೆ(ಎನ್‌ಸಿಬಿ) ಕಚೆರಿಗೆ ಭೇಟಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ದಡ್ಲಾನಿ ಅವರು ಬೆಳಿಗ್ಗೆ ಸುಮಾರು 10 ಗಂಟೆ ಸಮಯದಲ್ಲಿ ಲಕೋಟೆಯೊಂದನ್ನು ಕೈಯಲ್ಲಿ ಹಿಡಿದು ದಕ್ಷಿಣ ಮುಂಬೈನಲ್ಲಿರುವ ಬಲ್ಲಾರ್ಡ್‌ ಎಸ್ಟೇಟ್‌ನಲ್ಲಿರುವ ಎನ್‌ಸಿಬಿ ಕಚೇರಿಗೆ ತೆರಳಿದರು ಎಂದು ಮೂಲಗಳು ತಿಳಿಸಿವೆ.

ಒಂದು ಗಂಟೆಯ ನಂತರ ಎನ್‌ಸಿಬಿ ಕಚೇರಿಯಿಂದ ಹೊರ ಬಂದ ದದ್ಲಾನಿ ಅವರನ್ನು ಪ್ರತಿಕ್ರಿಯೆಗಾಗಿ ಮಾಧ್ಯಮದವರು ಪ್ರಯತ್ನಿಸಿದರು. ಆದರೆ ಅವರು ಯಾವುದೇ ಪ್ರತಿಕ್ರಿಯೆ ನೀಡದೇ ಅಲ್ಲಿಂದ ತೆರಳಿದರು.

ಮುಂಬೈನ ಕರಾವಳಿಯಲ್ಲಿ ಐಷಾರಾಮಿ ಹಡಗಿನಲ್ಲಿ ನಡೆದ ಡ್ರಗ್ಸ್‌ ಪಾರ್ಟಿಗೆ ಸಂಬಂಧಿಸಿದಂತೆ ಅಕ್ಟೋಬರ್ 3ರಂದು ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್(23) ಅವರನ್ನು ಎನ್‌ಸಿಬಿಯವರು ಬಂಧಿಸಿದ್ದರು.

ಇದೇ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಎನ್‌ಸಿಬಿ ತಂಡ, ಮುಂಬೈನ ಬಾಂದ್ರಾ ಉಪನಗರದಲ್ಲಿರುವ ನಟ ಶಾರೂಕ್ ಖಾನ್ ಅವರ ಮನೆಗೆ ತೆರಳಿ ಶೋಧಕಾರ್ಯ ನಡೆಸಿತ್ತು. ಈ ವೇಳೆ ಕೆಲವೊಂದು ದಾಖಲೆಗಳನ್ನು ವಶಪಡಿಸಿ ಕೊಂಡಿತ್ತು. ಶುಕ್ರವಾರ ಸಂಜೆ ಶಾರೂಕ್‌ ಖಾನ್ ಅವರ ಅಂಗ ರಕ್ಷಕರು ಎನ್‌ಸಿಬಿ ಕಚೇರಿಗೆ ತೆರಳಿ, ಮುಚ್ಚಿದ ಲಕೋಟೆ ಯಲ್ಲಿ ಕೆಲವೊಂದು ದಾಖಲೆಗಳನ್ನು ಸಲ್ಲಿಸಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Prajavani