Dailyhunt Logo
  • Light mode
    Follow system
    Dark mode
    • Play Story
    • App Story
ಮುಂದಿನ ವಾರ ನ್ಯೂಜಿಲೆಂಡ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಮುಂದಿನ ವಾರ ನ್ಯೂಜಿಲೆಂಡ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ವೆಲ್ಲಿಂಗ್ಟನ್: ಮುಂದಿನ ವಾರ ನ್ಯೂಜಿಲೆಂಡ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಲಿದ್ದಾರೆ ಎಂದು ಅಲ್ಲಿನ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ಶುಕ್ರವಾರ ಹೇಳಿದ್ದಾರೆ.

ಆದರೆ, ಭೇಟಿಯ ನಿಖರ ದಿನಾಂಕವನ್ನು ಅವರು ಬಹಿರಂಗಪಡಿಸಿಲ್ಲ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರ ನ್ಯೂಜಿಲೆಂಡ್‌ಗೆ ತಮ್ಮ ಮೊದಲ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ಪ್ರಕಟಿಸಲು ನನಗೆ ಸಂತೋಷವಾಗುತ್ತಿದೆ' ಎಂದು ಬರೆದುಕೊಂಡಿದ್ದಾರೆ.

ಭಾರತವು ವಿಶ್ವದ ಅತಿ ದೊಡ್ಡ ಮತ್ತು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಕರೆದಿರುವ ಲಕ್ಸನ್, ನ್ಯೂಜಿಲೆಂಡ್‌ನ ಆರ್ಥಿಕ ಸಮೃದ್ಧಿಗೆ ಭಾರತವು ಸಹಕಾರಿಯಾಗಿದೆ ಎಂದು ಹೇಳಿದ್ದಾರೆ.

'ಮುಕ್ತ ವ್ಯಾಪಾರ ಒಪ್ಪಂದದೊಂದಿಗೆ ಭಾರತ ಮತ್ತು ನ್ಯೂಜಿಲೆಂಡ್‌ ಉಭಯ ದೇಶಗಳ ಬಾಂಧವ್ಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದ್ದೇವೆ. ಇದು ನ್ಯೂಜಿಲೆಂಡ್‌ಗೆ ಹೆಚ್ಚಿನ ಉದ್ಯೋಗಗಳು, ಹೆಚ್ಚಿನ ರಫ್ತುಗಳು ಮತ್ತು ಬಲವಾದ ಆರ್ಥಿಕ ಬೆಳವಣಿಗೆಯನ್ನು ನೀಡಲಿದೆ' ಎಂದು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani