ವಾಣಿಜ್ಯ ಸುದ್ದಿ
ಮೂರನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ

ನವದೆಹಲಿ/ಬೆಂಗಳೂರು: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸತತ ಮೂರನೇ ದಿನವೂ ದೇಶದಾದ್ಯಂತ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿವೆ.
ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರಿಗೆ 8 ಪೈಸೆ ಹೆಚ್ಚಾಗಿ ₹ 81.46ಕ್ಕೆ ಏರಿಕೆಯಾಗಿದೆ. ಡೀಸೆಲ್ ದರ ಲೀಟರಿಗೆ 19 ಪೈಸೆ ಹೆಚ್ಚಾಗಿ ₹ 71.07ಕ್ಕೆ ಏರಿಕೆಯಾಗಿದೆ. ಮೂರು ದಿನಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 40 ಪೈಸೆಗಳಷ್ಟು ಹಾಗೂ ಡೀಸೆಲ್ ದರ 71 ಪೈಸೆಗಳಷ್ಟು ಏರಿಕೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರಿಗೆ 8 ಪೈಸೆ ಹೆಚ್ಚಾಗಿ ₹ 84.18ರಂತೆ ಹಾಗೂ ಡೀಸೆಲ್ ದರ ₹ 20 ಪೈಸೆ ಹೆಚ್ಚಾಗಿ ₹ 75.34ರಂತೆ ಮಾರಾಟವಾಗಿದೆ. ಮೂರು ದಿನಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹ 42 ಪೈಸೆ ಹಾಗೂ ಡೀಸೆಲ್ ದರ 65 ಪೈಸೆ ಹೆಚ್ಚಾಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಆಗಿರುವ ಏರಿಕೆಯಿಂದಾಗಿ ದೇಶಿ ಮಾರುಕಟ್ಟೆಯಲ್ಲಿ ಇಂಧನ ದರದಲ್ಲಿ ಹೆಚ್ಚಳ ಮಾಡಲಾಗಿದೆ.
Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
related stories
-
ದೇಶ - ವಿದೇಶ ಜನ ಹಣದುಬ್ಬರದಿಂದ ಬಳಲುತ್ತಿದ್ದರೆ, ಮೋದಿ ಸರಕಾರ ತೆರಿಗೆ ಸಂಗ್ರಹದಲ್ಲಿ ಬ್ಯುಸಿಯಾಗಿದೆ:...
-
ಬ್ರೇಕಿಂಗ್ ಸುದ್ದಿ 'ಜಿಡಿಪಿ'ಯಲ್ಲಿ ಭಾರಿ ಬೆಳವಣಿಗೆ ಕಂಡಿದೆ : ರಾಹುಲ್ ಟೀಕೆ
-
ಪ್ರಮುಖ ಸುದ್ದಿ ಮತ್ತೆ ಪೆಟ್ರೋಲ್, ಡೀಸೆಲ್ ದರ ಜ.24ರಷ್ಟು ಎಲ್ಲೆಲ್ಲಿ ಎಷ್ಟು?