ಹುಬ್ಬಳ್ಳಿ: 'ವೈದ್ಯಕೀಯ ಕ್ಷೇತ್ರದಲ್ಲಿ ಐದು ದಶಕಗಳಿಗೂ ಹೆಚ್ಚು ಅವಧಿ ಸೇವೆ ಸಲ್ಲಿಸಿರುವ ನಗರದ ವೈದ್ಯ ವಿ.ಜಿ. ನಾಡಗೌಡ ಅವರು ಅಂತರರಾಷ್ಟ್ರೀಯ ಫೆಲೋ ಆಫ್ ದಿ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಆಯಂಡ್ ಸರ್ಜನ್ಸ್ ಆಫ್ ಗ್ಲಾಸ್ಗೋ (ಎಫ್‌ಆರ್‌ಸಿಪಿ) ಗೌರವಕ್ಕೆ ಪಾತ್ರರಾಗಿದ್ದಾರೆ' ಎಂದು ಡಾ.
ಕೆ.ಆರ್. ಕುಲಕರ್ಣಿ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಸ್ಕಾಟ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಆಯಂಡ್ ಸರ್ಜನ್ಸ್ ಆಫ್ ಗ್ಲಾಸ್ಗೋ ಸಂಸ್ಥೆ ನೀಡುವ ಈ ಪ್ರಶಸ್ತಿ ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ಡಾ. ನಾಡಗೌಡ ಅವರಿಗೆ ಅದು ದೊರೆತಿದ್ದು ಹೆಮ್ಮೆಯ ಸಂಗತಿಯಾಗಿದೆ. ಅವರ ಸೇವೆ, ವೃತ್ತಿಪರ ಸಾಧನೆ ಹಾಗೂ ವಿಶೇಷ ಕೊಡುಗೆಗಳನ್ನು ಪರಿಗಣಿಸಿ ಫಿಸಿಶಿಯನ್ ಫೆಲೋಶಿಪ್‌ಗೆ ಆಯ್ಕೆ ಮಾಡಿದೆ' ಎಂದು ತಿಳಿಸಿದರು.
'2027ರ ಜನವರಿ ಅಥವಾ ಏಪ್ರಿಲ್‌ನಲ್ಲಿ ಸ್ಕಾಟ್ಲೆಂಡ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಡಾ. ನಾಡಗೌಡ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ' ಎಂದರು.
ಡಾ. ಶ್ರೀಕೃಷ್ಣ ನಾಡಗೌಡ, ಡಾ. ಕಿಶೋರ ಬಾಗಲಕೋಟೆ, ಡಾ. ಪ್ರಭುರಾಜ ಅಪರಂಜಿ, ಡಾ. ಈಶ್ವರ ಲದ್ದಡ, ಡಾ. ಪಾಂಡುರಂಗ ಗಂಡಮಾಲಿ, ಮನೋಹರ ಕುಲಕರ್ಣಿ, ಮನೋಹರ ಪರ್ವತಿ ಇದ್ದರು.
261104-24-1267428522

