Dailyhunt Logo
  • Light mode
    Follow system
    Dark mode
    • Play Story
    • App Story
ನಾನು ಮೋದಿಯ ದೊಡ್ಡ ಅಭಿಮಾನಿ...ಭಾರತೀಯರು ಶೇ 100ರಷ್ಟು ನಂಬಬಹುದು: ಟ್ರಂಪ್‌

ನಾನು ಮೋದಿಯ ದೊಡ್ಡ ಅಭಿಮಾನಿ...ಭಾರತೀಯರು ಶೇ 100ರಷ್ಟು ನಂಬಬಹುದು: ಟ್ರಂಪ್‌

ವದೆಹಲಿ: 'ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ದೊಡ್ಡ ಅಭಿಮಾನಿ. ಭಾರತವು ನನ್ನ ಮೇಲೆ ಶೇಕಡ 100ರಷ್ಟು ನಂಬಿಕೆ ಇಡಬಹುದು' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.

ಅಮೆರಿಕ ಸ್ವಾತಂತ್ರ್ಯ ದಿನದ 250ನೇ ವರ್ಷಾಚರಣೆ ಅಂಗವಾಗಿ ನವದೆಹಲಿಯ ಭಾರತ್‌ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದ ವೇಳೆ ಭಾರತದ ಅಮೆರಿಕ ರಾಯಭಾರಿ ಸರ್ಗಿಯೊ ಗೊರ್‌ ಅವರಿಗೆ ದೂರವಾಣಿ ಕರೆಮಾಡಿ ಈ ವಿಷಯ ತಿಳಿಸಿದ್ದಾರೆ.

'ನಾನು ಎಲ್ಲರಿಗೂ ಶುಭಾಶಯ ಹೇಳಲು ಬಯಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಅತ್ಯುತ್ತಮ ಸ್ನೇಹಿತ. ಎಲ್ಲರಿಗೂ ಶುಭ ಸಂಜೆಯ ಸಂದೇಶಗಳನ್ನು ನೀಡುತ್ತಿದ್ದೇನೆ' ಎಂದು ಟ್ರಂಪ್ ತಿಳಿಸಿದ್ದಾರೆ.

'ನಾವು ಭಾರತಕ್ಕೆ ಎಂದಿಗೂ ಹತ್ತಿರವಾಗಿರಲಿಲ್ಲ. ಭಾರತದವರಿಗೆ ಯಾವುದೇ ಸಹಾಯ ಬೇಕಿದ್ದರೆ, ಎಲ್ಲಿಗೆ ಕರೆ ಮಾಡಬೇಕು ಎಂದು ತಿಳಿದಿದೆ. ಅವರು ಇಲ್ಲಿಗೆ ಕರೆ ಮಾಡುತ್ತಾರೆ' ಎಂದು ಹೇಳಿದ್ದಾರೆ.

'ಅಮೆರಿಕದ ಆರ್ಥಿಕತೆ ಚೆನ್ನಾಗಿದೆ. ನಾವು ದಾಖಲೆಗಳನ್ನು ನಿರ್ಮಿಸುತ್ತಿದ್ದೇವೆ. ನಾವು ದಾಖಲೆಯ ಆರ್ಥಿಕತೆ, ದಾಖಲೆಯ ಷೇರು ಮಾರುಕಟ್ಟೆ ಹೊಂದಿದ್ದೇವೆ' ಎಂದು ತಿಳಿಸಿದ್ದಾರೆ.

ಟ್ರಂಪ್‌ ಜೊತೆಗೆ ದೂರವಾಣಿ ಸಂಭಾಷಣೆಗಳನ್ನು ಪ್ರೇಕ್ಷಕರಿಗೂ ಕೇಳುವಂತೆ ಸರ್ಗಿಯೊ ಗೊರ್ ಅವರು ತಮ್ಮ ಮೊಬೈಲ್‌ ಫೋನ್‌ ಅನ್ನು ಮೈಕ್ರೊಫೋನ್‌ ಬಳಿ ಹಿಡಿದಿದ್ದರು.

ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಅವರು 'ದಿಲ್‌ಸೇ','ಮಾ ತುಜೇ ಸಲಾಂ, 'ತೇರೆ ಬಿನಾ' ಅವರ ಹಾಡುಗಳು ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಗಮನಸೆಳೆಯಿತು.

Dailyhunt
Disclaimer: This content has not been generated, created or edited by Dailyhunt. Publisher: Prajavani