Dailyhunt Logo
  • Light mode
    Follow system
    Dark mode
    • Play Story
    • App Story
ನಟ ಚಿಕ್ಕಣ್ಣ ಮದುವೆ ಸಡಗರ: ಅರಿಸಿನ ಶಾಸ್ತ್ರದಲ್ಲಿ ಮಿಂದೆದ್ದ ಭಾವಿ ಪತ್ನಿ ಪಾವನಾ

ನಟ ಚಿಕ್ಕಣ್ಣ ಮದುವೆ ಸಡಗರ: ಅರಿಸಿನ ಶಾಸ್ತ್ರದಲ್ಲಿ ಮಿಂದೆದ್ದ ಭಾವಿ ಪತ್ನಿ ಪಾವನಾ

ಕನ್ನಡದ ಹಾಸ್ಯ ನಟ ಚಿಕ್ಕಣ್ಣ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಆಗಸ್ಟ್ 29, 30ರಂದು ಪಾವನಾ ಗೌಡ ಅವರೊಂದಿಗೆ ಮದುವೆಯಾಗುತ್ತಿದ್ದಾರೆ.

ಈಗಾಗಲೇ ನಟ ಚಿಕ್ಕಣ್ಣ ಅವರು ತಮ್ಮ ಮದುವೆಗೆ ಚಿತ್ರರಂಗದ ಗಣ್ಯರನ್ನು, ರಾಜಕೀಯ ನಾಯಕರು ಸೇರಿದಂತೆ ಹಲವರನ್ನು ಆಹ್ವಾನಿಸಿದ್ದಾರೆ.

ನಟ ಚಿಕ್ಕಣ್ಣ ಅವರನ್ನು ಮದುವೆಯಾಗುತ್ತಿರುವ ಭಾವಿ ಪತ್ನಿ ಪಾವನಾ ಗೌಡ ಇದೀಗ ಅರಿಸಿನ ಶಾಸ್ತ್ರದಲ್ಲಿ ಮಿಂದೆದ್ದಿದ್ದಾರೆ.

ಮದುವೆ ಸಂಭ್ರಮದಲ್ಲಿರುವ ನಟ ಚಿಕ್ಕಣ್ಣ ಭಾವಿ ಪತ್ನಿ ಅವರು ಅರಿಸಿನ ಶಾಸ್ತ್ರದಲ್ಲಿ ಬಿಳಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ.

ಅರಿಸಿನ ಶಾಸ್ತ್ರದ ಫೋಟೊಗಳನ್ನು ಪಾವನಾ ಗೌಡ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದೇ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಇತ್ತೀಚೆಗೆ ನಡೆದಿದ್ದ ಸಂದರ್ಶನದಲ್ಲಿ ಚಿಕ್ಕಣ್ಣ ಅವರು ಭಾವಿ ಪತ್ನಿ ಪಾವನಾ ಗೌಡ ಅವರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.

ಪಾವನಾ ಗೌಡ ಅವರು 'ಪರಿಸರ ಸ್ನೇಹಿ ವಸ್ತುಗಳನ್ನು ತಯಾರಿಸುವ ಉದ್ಯಮ ಮಾಡುತ್ತಿದ್ದಾರೆ. ಇಂತಹ ಸಂಗಾತಿ ಸಿಕ್ಕಿರುವುದು ನನ್ನ ಅದೃಷ್ಟ' ಎಂದು ಹೇಳಿಕೊಂಡಿದ್ದರು.

ಹಿರಿಯರು ನಿಶ್ಚಯಿಸಿದ ಮದುವೆ ಇದಾಗಿದ್ದು, ಪಾವನಾರನ್ನು ನೋಡಿದ ಮೇಲೆ ಪ್ರೀತಿಯಾಗಿದೆ ಎಂದು ಚಿಕ್ಕಣ್ಣ ಹೇಳಿದ್ದರು.

ಸದ್ಯ ಚಿಕ್ಕಣ್ಣ ಹಾಗೂ ಪಾವನಾ ಗೌಡ ಅವರ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಈ ಜೋಡಿ ಮದುವೆಗೆ ಚಂದನವನದ ತಾರೆಯರು ಬರುವ ನಿರೀಕ್ಷೆಯಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani