Wednesday, 02 Dec, 6.08 pm ಪ್ರಜಾವಾಣಿ

ಮನೋರಂಜನೆ
ನಟ ಸನ್ನಿ ಡಿಯೋಲ್‌ಗೆ ಕೊರೊನಾ ಪಾಸಿಟಿವ್‌

ಬಾಲಿವುಡ್ ನಟ, ಗುರುದಾಸ್‌ಪುರ ಸಂಸದ ಸನ್ನಿ ಡಿಯೋಲ್‌ಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಬಗ್ಗೆ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ ಸನ್ನಿ ಡಿಯೋಲ್‌.

'ನಾನು ಕೋವಿಡ್‌ ಪರೀಕ್ಷೆ ಮಾಡಿಸಿದ್ದೆ, ನನಗೆ ಪಾಸಿಟಿವ್ ಬಂದಿದೆ. ನಾನು ಈಗ ಮನೆಯಲ್ಲೇ ಇದ್ದೇನೆ. ಆರಾಮಗಿದ್ದೇನೆ. ಸ್ವಲ್ಪ ದಿನಗಳಿಂದೀಚೆಗೆ ನನ್ನೊಂದಿಗೆ ಸಂಪರ್ಕಕ್ಕೆ ಬಂದಿರುವವರು ಪರೀಕ್ಷೆ ಮಾಡಿಸಿಕೊಳ್ಳಿ ಹಾಗೂ ಗೃಹಬಂಧನದಲ್ಲಿರಿ' ಎಂದು ಬರೆದುಕೊಂಡಿದ್ದಾರೆ.

ಸನ್ನಿ ಡಿಯೋಲ್‌ ಇತ್ತೀಚೆಗೆ ಮುಂಬೈನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ನಂತರ ಅವರು ಮನಾಲಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ಚೇತರಿಸಿಕೊಳ್ಳುತ್ತಿದ್ದರು. ಮುಂಬೈಗೆ ಹಿಂದಿರುಗುವ ಮೊದಲು ಮನಾಲಿಯಲ್ಲಿ ಪರೀಕ್ಷೆಗೆ ಒಳಗಾಗಿದ್ದರು. ಆಗ ಪಾಸಿಟಿವ್ ಇರುವುದು ಗೊತ್ತಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top