ನವದೆಹಲಿ (ಪಿಟಿಐ): ದೇಶದಲ್ಲಿ 2025-26ನೇ ಸಾಲಿನಲ್ಲಿ ಮಹಾರಾಷ್ಟ್ರದ ನವಿ ಮುಂಬೈ ಅತ್ಯಂತ ಸ್ವಚ್ಛ ನಗರವಾಗಿ ಹೊರಹೊಮ್ಮಿದೆ.
ಗುಜರಾತ್‌ನ ಸೂರತ್ ಮತ್ತು ಆಂಧ್ರ ಪ್ರದೇಶದ ವಿಜಯವಾಡ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡಿವೆ.
ಕೇಂದ್ರ ಸರ್ಕಾರ ಪ್ರತಿ ವರ್ಷ ಕೈಗೊಳ್ಳುವ ಸ್ವಚ್ಛ ನಗರಗಳ ಸಮೀಕ್ಷೆಯಲ್ಲಿ ಈ ಫಲಿತಾಂಶ ಬಂದಿದೆ.
ಕಳೆದ 8 ವರ್ಷಗಳಿಂದ ಮಧ್ಯ ಪ್ರದೇಶದ ಇಂದೋರ್ ನಗರವು ಅತ್ಯಂತ ಸ್ವಚ್ಛ ನಗರ ಸಮೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುತ್ತಿದೆ. ಆದರೆ, ಈ ಬಾರಿ ಟಾಪ್ ಪಟ್ಟಿಯಲ್ಲಿ ಈ ನಗರವಿಲ್ಲ.
ಇಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ವಿಜೇತರಿಗೆ ಪ್ರಶಸ್ತಿ ನೀಡಿದರು.
3ರಿಂದ 1 ಲಕ್ಷ ಜನಸಂಖ್ಯೆ
1. ಮಧ್ಯ ಪ್ರದೇಶದ ಉಜ್ಜಯಿನಿ
2. ಚಂಡೀಗಢ
3. ಆಂಧ್ರ ಪ್ರದೇಶದ ಗುಂಟೂರು
ನದಿ ತಟದಲ್ಲಿರುವ ನಗರಗಳು
1. ಮಧ್ಯ ಪ್ರದೇಶದ ರೇವಾ
2. ಹಿಮಾಚಲ ಪ್ರದೇಶದ ಬಿಲಾಸಪುರ
3. ಉತ್ತರ ಪ್ರದೇಶದ ವಾರಾಣಸಿ
10 ಲಕ್ಷ ಜನಸಂಖ್ಯೆಯ ನಗರಗಳು
1. ಆಂಧ್ರ ಪ್ರದೇಶದ ವಿಶಾಖಪಟ್ಟಣ
2. ಮಧ್ಯ ಪ್ರದೇಶದ ಜಬಲ್‌ಪುರ
3. ಉತ್ತರ ಪ್ರದೇಶದ ಲಖನೌ
ಕರಾವಳಿ ಪ್ರದೇಶದ ನಗರಗಳು
1. ಒಡಿಶಾದ ಪುರಿ
2. ಕೇರಳದ ಆಲಪ್ಪುಳ
3. ಮಹಾರಾಷ್ಟ್ರದ ರತ್ನಗಿರಿ
ಹಿಮಾಲಯದ ತಪ್ಪಲಲ್ಲಿನ ನಗರಗಳು
1. ಉತ್ತರಾಖಂಡದ ರುದ್ರಪುರ
2. ಜಮ್ಮು ಮತ್ತು ಕಾಶ್ಮೀರದ ಜಮ್ಮು

