ರಾಯಚೂರು: ಪ್ರಾದೇಶಿಕ ಆರೋಗ್ಯ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನವೋದಯ ವೈದ್ಯಕೀಯ ಮಹಾವಿದ್ಯಾಲಯವು ₹81.67 ಲಕ್ಷಕ್ಕೂ ಅಧಿಕ ಬಾಹ್ಯ ಮತ್ತು ಆಂತರಿಕ ಸಂಶೋಧನಾ ಅನುದಾನ ಪಡೆದುಕೊಂಡಿದೆ.
ಚೇತನಾ: ಸ್ಮೃತಿ ಇಂಡಿಯಾ ಯೋಜನೆಯಡಿ ₹76,67,112 ಬಾಹ್ಯ ಅನುದಾನ ಲಭಿಸಿದೆ.
ಈ ಯೋಜನೆಯಲ್ಲಿ ಡಾ. ಕೆ. ಮೊಹಮ್ಮದ್ ಶೋಯೇಬ್, ಡಾ. ರೂಪಕಲಾ ಎನ್., ಡಾ. ಸುನೀಲ್ ಕುಮಾರ್ ಮತ್ತು ಡಾ. ವಿ. ರಾಮ ಮೋಹನ್ ಗುಪ್ತಾ ಸಂಶೋಧಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದಲ್ಲದೆ, ಐಸಿಎಂಆರ್-ಎಂಆರ್‌ಎಚ್‌ಆರ್‌ಯು, ಶಿರವಾರದಿಂದ ₹5 ಲಕ್ಷ ಆಂತರಿಕ ಅನುದಾನ ದೊರೆತಿದೆ. ಪ್ಯಾಥಾಲಜಿ ವಿಭಾಗದ ಪ್ರಾಧ್ಯಾಪಕಿ ಡಾ. ಮಾಧವಿ ಕುಲಕರ್ಣಿ ನೇತೃತ್ವದಲ್ಲಿ ಜಿಲ್ಲೆಯ ಅಧಿಕ ರಕ್ತದೊತ್ತಡ ರೋಗಿಗಳ ಮೇಲೆ ಸ್ಥಳೀಯ ಫ್ಲೋರೈಡ್‌ನಿಂದ ಉಂಟಾಗುವ ಪರಿಣಾಮಗಳ ಕುರಿತು ಸಂಶೋಧನೆ ನಡೆಯಲಿದೆ.
ಸಂಸ್ಥೆಯ ಸಾಧನೆಯನ್ನು ನವೋದಯ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎಸ್.ಆರ್. ರೆಡ್ಡಿ, ಕುಲಸಚಿವ ಡಾ. ಟಿ. ಶ್ರೀನಿವಾಸ್, ಕಾರ್ಯಾಚರಣೆಗಳ ನಿರ್ದೇಶಕ ಡಾ. ಅಮೃತ್ ರೆಡ್ಡಿ ಹಾಗೂ ಕಾಲೇಜಿನ ಡೀನ್ ಡಾ. ಗುರುದತ್ತ ಎಸ್. ಪವಾರ್ ಶ್ಲಾಘಿಸಿದ್ದಾರೆ. ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಂಶೋಧನೆಗೆ ಸಂಸ್ಥೆ ಪ್ರೋತ್ಸಾಹ ನೀಡಲಿದೆ ಎಂದು ತಿಳಿಸಿದ್ದಾರೆ.
261104-32-262718369

