Dailyhunt Logo
  • Light mode
    Follow system
    Dark mode
    • Play Story
    • App Story
ನವೋದ್ಯಮಕ್ಕೆ ಬ್ಯಾಂಕಿನಿಂದ ಆರ್ಥಿಕ ನೆರವು, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ನವೋದ್ಯಮಕ್ಕೆ ಬ್ಯಾಂಕಿನಿಂದ ಆರ್ಥಿಕ ನೆರವು, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಜೇಂದ್ರಗಡ: 'ನಮ್ಮ ಬ್ಯಾಂಕ್‌ನಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಉನ್ನತ ವ್ಯಾಸಂಗಕ್ಕೆ ಲ್ಯಾಪ್‌ಟಾಪ್‌, ಮಹಿಳಾ ಸಬಲೀಕರಣ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬ್ಯಾಂಕಿನ ಸದಸ್ಯರ ಮಕ್ಕಳು ವ್ಯಾಪಾರ, ನವೋದ್ಯಮ ಮಾಡುವ ಉದ್ದೇಶ ಹೊಂದಿದ್ದರೆ ಅವರಿಗೆ ಆರ್ಥಿಕ ನೆರವು ನೀಡುವ ಉದ್ದೇಶವಿದೆ' ಎಂದು ದಿ.ಲಕ್ಷ್ಮೀ ಅರ್ಬನ್‌ ಕೋ- ಆಪರೇಟಿವ್‌ ಬ್ಯಾಂಕ್‌ ಅಧ್ಯಕ್ಷ ಎಸ್.ಕೆ.ಚನ್ನಿ ಹೇಳಿದರು.

ಪಟ್ಟಣದ ಬಂಡಿ ಗಾರ್ಡನ್‌ನಲ್ಲಿ ಭಾನುವಾರ ನಡೆದ ದಿ.ಲಕ್ಷ್ಮೀ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ 113ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು

'ನಮ್ಮ ಬ್ಯಾಂಕ್‌ ಈ ವರ್ಷ ₹90.58 ಲಕ್ಷ ನಿವ್ವಳ ಲಾಭ ಗಳಿಸಿದೆ. ಮುಂದಿನ ವರ್ಷ ಅದನ್ನು ಒಂದು ಕೋಟಿ ತಲುಪಿಸುವ ಯೋಜನೆ ರೂಪಿಸಲಿದ್ದೇವೆ. ಅಲ್ಲದೆ ಉನ್ನತ ಶಿಕ್ಷಣ ಮಾಡುವ ಬ್ಯಾಂಕಿನ ಸದಸ್ಯರ ಮಕ್ಕಳಿಗೆ ಕಡಿಮೆ ಬಡ್ಡಿ ದರದಲ್ಲಿ ಎಜುಕೇಷನ್ ಲೋನ್, ಸದಸ್ಯರಿಗೆ ಅಪಘಾತ ವಿಮೆ ಹೆಚ್ಚಿಸುವ ಹಾಗೂ ಸಹಜವಾಗಿ ಮೃತಪಟ್ಟ ಸದಸ್ಯರ ಕುಟುಂಬಕ್ಕೆ ಧನ ಸಹಾಯ ಮಾಡುವ ಉದ್ದೇಶ ಹೊಂದಿದ್ದೇವೆ. ಈ ವರ್ಷ ಶೇರುದಾರರಿಗೆ 12% ಡಿವಿಡೆಂಟ್ ಕೊಡುತ್ತಿದ್ದೇವೆ' ಎಂದರು.

ಬ್ಯಾಂಕಿನ ಉಪಾಧ್ಯಕ್ಷ ಸಿದ್ದಪ್ಪ ಬಂಡಿ ಮಾತನಾಡಿ, 'ದಿ.ಲಕ್ಷ್ಮೀ ಅರ್ಬನ್‌ ಕೋ- ಆಪರೇಟಿವ್‌ ಬ್ಯಾಂಕ್‌ ಸದಸ್ಯರು, ಶೇರುದಾರರ ಸಹಕಾರದಿಂದ ಸುದೀರ್ಘವಾಗಿ ಧೃಡವಾಗಿ ನಿಂತಿದೆ' ಎಂದರು.

ಡಾ.ಬಿ.ವಿ.ಕಂಬಳ್ಯಾಳ ಮಾತನಾಡಿ, 'ವಿದ್ಯಾರ್ಥಿಗಳು ಬೇರೆ ಬೇರೆ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಸಾಧನೆ ಮಾಡಬೇಕು' ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಧಾರವಾಡ ಆಕಾಶವಾಣಿ ನಿವೃತ್ತ ನಿರ್ದೇಶಕ ಶರಣಬಸವ ಚೋಳಿನ ಮಾತನಾಡಿ, 'ಒಂದು ಆರ್ಥಿಕ ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆಯಲು ಎಲ್ಲ ಸದಸ್ಯರು, ಶೇರುದಾರರ ಸಹಕಾರ ಮುಖ್ಯ' ಎಂದರು. ಬ್ಯಾಂಕಿನ ವ್ಯವಸ್ಥಾಪಕ ರಾಜಶೇಖರ ಹೊಸಂಗಡಿ ವಾರ್ಷಿಕ ವರದಿ ವಾಚಿಸಿದರು. ಎಪಿಎಂಸಿ ಶಾಖೆಯ ವ್ಯವಸ್ಥಾಪಕ ಪ್ರದೀಪ ಮ್ಯಾಗೇರಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ 63 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಲ್ಲದೆ ಡಾ.ಪಾರ್ವತಿಬಾಯಿ ಚವಡಿ (ಬಾಂಡಗೆ) ಹಾಗೂ ಶರಣಬಸವ ಚೋಳಿನ ಅವರನ್ನು ಸನ್ಮಾನಿಸಲಾಯಿತು.

ಬ್ಯಾಂಕಿನ ನಿರ್ದೇಶಕರಾದ ಪಾವಡೆಪ್ಪ ಮ್ಯಾಗೇರಿ, ಪಿ.ಎಸ್.ಕಡ್ಡಿ, ವೀರೇಶ ನಂದಿಹಾಳ, ರಾಮಣ್ಣ ನಿಡಗುಂದಿ, ಪಿ.ವಾಯ್.ತಳವಾರ, ಸಿಬ್ಬಂದಿಗಳಾದ ಎಂ.ಎಸ್.ಇಂಡಿ, ಎನ್.ಕೆ.ಹೊಸಂಗಡಿ, ವಿ.ಬಿ.ಕರಬಾಶೆಟ್ಟರ, ಸಿದ್ದಲಿಂಗೇಶ ಕೋಟಿ, ವಿನಾಯಕ ಕೆಂಬಾವಿ ಸೇರಿದಂತೆ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260706-23-653405665

Dailyhunt
Disclaimer: This content has not been generated, created or edited by Dailyhunt. Publisher: Prajavani