Dailyhunt Logo
  • Light mode
    Follow system
    Dark mode
    • Play Story
    • App Story
ನೇಪಾಳ: ಬಾಲೇಂದ್ರ ಶಾ ಪ್ರಮಾಣ

ನೇಪಾಳ: ಬಾಲೇಂದ್ರ ಶಾ ಪ್ರಮಾಣ

ಠ್ಮಂಡು (ಪಿಟಿಐ): ರಾಷ್ಟ್ರೀಯ ಸ್ವತಂತ್ರ ಪಕ್ಷದ (ಆರ್‌ಎಸ್‌ಪಿ) ನಾಯಕ ಬಾಲೇಂದ್ರ ಶಾ ಅವರು ನೇಪಾಳದ 47ನೇ ಪ್ರಧಾನ ಮಂತ್ರಿಯಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಪ್ರಧಾನಿಯಾಗಿ ಇವರು ಇತಿಹಾಸ ನಿರ್ಮಿಸಿದ್ದಾರೆ.

ಅಧ್ಯಕ್ಷ ರಾಮಚಂದ್ರ ಪೌಡೆಲ್‌ ಅವರು ಬಾಲೇಂದ್ರ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಕಾರ್ಯಕ್ರಮವು ಮಧ್ಯಾಹ್ನ 12.34ರ ಮುಹೂರ್ತದಲ್ಲಿ ನೆರವೇರಿತು. ಸಮಾರಂಭವು ಹಿಂದೂ ಹಾಗೂ ಬೌದ್ಧ ಧರ್ಮಗಳ ಸಂಪ್ರದಾಯ ಗಳಿಗೆ ಸಾಕ್ಷಿಯಾಯಿತು. ಬಾಲೇಂದ್ರ ಅವರೊಂದಿಗೆ ಎಲ್ಲ ಸಚಿವರೂ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.

ರಾಜಾ ಮಹೇಂದ್ರ ಶಾ ಅವರು 1963ರಲ್ಲಿ ತುಳಸಿ ಗಿರಿ ಎಂಬುವರನ್ನು ಸಚಿವ ಸಂಪುಟದ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಈ ಅಧ್ಯಕ್ಷ ಸ್ಥಾನವು ಪ್ರಧಾನಿ ಹುದ್ದೆಗೆ ಸಮವಾಗಿತ್ತು. ಆಗ ತುಳಸಿ ಗಿರಿ ಅವರ ವಯಸ್ಸು 37. ಈಗ ಬಾಲೇಂದ್ರ ಶಾ ಅವರು ಪ್ರಧಾನಿಯಾಗಿ ಜನರಿಂದಲೇ ಆಯ್ಕೆಯಾಗಿದ್ದಾರೆ. ಇವರ ವಯಸ್ಸು 35.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-51-1688664822

Dailyhunt
Disclaimer: This content has not been generated, created or edited by Dailyhunt. Publisher: Prajavani