Dailyhunt Logo
  • Light mode
    Follow system
    Dark mode
    • Play Story
    • App Story
ನಿಕೋಟಿನ್‌ ಹೊಂದಿದ ಗುಟ್ಕಾ ನಿಷೇಧ,ಕರ್ನಾಟಕದ ತಂಬಾಕು ಕೃಷಿ ಮೇಲೆ ಹೇಗಿದೆ ಪರಿಣಾಮ

ನಿಕೋಟಿನ್‌ ಹೊಂದಿದ ಗುಟ್ಕಾ ನಿಷೇಧ,ಕರ್ನಾಟಕದ ತಂಬಾಕು ಕೃಷಿ ಮೇಲೆ ಹೇಗಿದೆ ಪರಿಣಾಮ

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ನಿಕೋಟಿನ್‌ ಹೊಂದಿದ ಗುಟ್ಕಾ ನಿಷೇಧ, ಕರ್ನಾಟಕದ ತಂಬಾಕು ಕೃಷಿ ಮೇಲೆ ಪರಿಣಾಮ ಹೇಗೆ

ಒಂದು ಸಾಲಿನಲ್ಲಿಕರ್ನಾಟಕದಲ್ಲಿ ನಿಕೋಟಿನ್ ಹೊಂದಿದ ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧದಿಂದ ತಂಬಾಕು ಕೃಷಿಯ ಮೇಲೆ ನೇರ ಪರಿಣಾಮ ಬೀರುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪ್ರಮುಖ ಪ್ರಶ್ನೋತ್ತರ


ಈ ನಿಷೇಧವು ತಂಬಾಕು ಕೃಷಿಕರ ಮೇಲೆ ನೇರ ಪರಿಣಾಮ ಬೀರುತ್ತದೆಯೇ?

ಇಲ್ಲ, ಈ ಆದೇಶವು ತಂಬಾಕು ಉತ್ಪನ್ನಗಳ ಮಾರಾಟದ ಮೇಲೆ ಮಾತ್ರ ಇರುವುದರಿಂದ, ಕೃಷಿ ಚಟುವಟಿಕೆಗಳ ಮೇಲೆ ಯಾವುದೇ ನೇರ ಪರಿಣಾಮ ಬೀರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಸರ್ಕಾರ ಈ ನಿರ್ಧಾರವನ್ನು ಏಕೆ ಕೈಗೊಂಡಿದೆ?

ಸಾರ್ವಜನಿಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿಯಲ್ಲಿ ನಿಕೋಟಿನ್ ಮತ್ತು ತಂಬಾಕು ಇರುವ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ.


ಕರ್ನಾಟಕದ ತಂಬಾಕು ಉತ್ಪಾದನೆ ಮತ್ತು ಬೇಡಿಕೆ ಹೇಗಿದೆ?

ಕರ್ನಾಟಕದಲ್ಲಿ ಬೆಳೆಯುವ ವರ್ಜಿನಿಯಾ ತಂಬಾಕಿಗೆ ರಫ್ತು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಉತ್ಪಾದನೆಯ ಶೇ 80ರಷ್ಟು ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ.


ತಂಬಾಕು ಕೃಷಿಯ ನಿಷೇಧ ಅವಧಿಯನ್ನು ವಿಸ್ತರಿಸಲಾಗಿದೆಯೇ?

ಹೌದು, ತಂಬಾಕು ಕೃಷಿಯನ್ನು ಹಂತ ಹಂತವಾಗಿ ಕಡಿಮೆ ಮಾಡುವ ಉದ್ದೇಶದಿಂದ ವಿಶ್ವ ಬ್ಯಾಂಕ್ ಸೂಚನೆಯಂತೆ ನಿಷೇಧದ ಅವಧಿಯನ್ನು 2040ರವರೆಗೆ ವಿಸ್ತರಿಸಲಾಗಿದೆ.


ಪ್ರಸ್ತುತ ತಂಬಾಕು ಮಾರುಕಟ್ಟೆಯ ಪರಿಸ್ಥಿತಿ ಏನು?

ಜಾಗತಿಕವಾಗಿ ಇತರ ದೇಶಗಳಲ್ಲಿ ತಂಬಾಕು ಉತ್ಪಾದನೆ ಹೆಚ್ಚಾಗಿರುವುದರಿಂದ, ಭಾರತದ ತಂಬಾಕಿಗೆ ಬೇಡಿಕೆ ಕುಸಿಯುವ ಮತ್ತು ಬೆಲೆ ಕಡಿಮೆಯಾಗುವ ಆತಂಕವಿದೆ.

ಪ್ರಮುಖ ಅಂಕಿಅಂಶಗಳು

66 ಸಾವಿರ ಹೆಕ್ಟೇರ್ಕರ್ನಾಟಕದಲ್ಲಿ ತಂಬಾಕು ಬೆಳೆಯುವ ಪ್ರದೇಶ87.97 ಮಿಲಿಯನ್ ಕೆಜಿ2026-27ರ ತಂಬಾಕು ಉತ್ಪಾದನಾ ಗುರಿ₹1200 ಕೋಟಿಕರ್ನಾಟಕದ ವಾರ್ಷಿಕ ತಂಬಾಕು ವಹಿವಾಟು60,000ತಂಬಾಕು ಕೃಷಿಯಲ್ಲಿ ತೊಡಗಿರುವ ರೈತರು (ಕರ್ನಾಟಕ)

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಬೆಂಗಳೂರು: ಕರ್ನಾಟಕದಲ್ಲಿ ಆಹಾರ ಸುರಕ್ಷತಾ ಇಲಾಖೆಯು ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್‌ ಮಸಾಲವನ್ನು ರಾಜ್ಯಾದ್ಯಂತ ನಿಷೇಧಿಸಿ ಆಹಾರ ಸುರಕ್ಷತೆ ಇಲಾಖೆ ಆದೇಶ ಹೊರಡಿಸಿದ್ದು, ಇದರಿಂದ ಕರ್ನಾಟಕದ ಐದಾರು ಜಿಲ್ಲೆಗಳಲ್ಲಿರುವ ತಂಬಾಕು ಕೃಷಿ ಮೇಲೆ ಪರಿಣಾಮ ಬೀರಬಹುದೇ?

ಕರ್ನಾಟಕ ಸರ್ಕಾರದಿಂದ ಇಂತಹದೊಂದು ಆದೇಶ ಹೊರ ಬಿದ್ದಿರುವುದು ಸಹಜವಾಗಿಯೇ ತಂಬಾಕು ಕೃಷಿ ವಲಯದಲ್ಲಿ ಮಾತ್ರವಲ್ಲದೇ ಉದ್ಯಮ ವಲಯವನ್ನೂ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಸರ್ಕಾರ ಈ ಹಿಂದೆಯೂ ತಂಬಾಕು ಹೊಂದಿನ ಗುಟ್ಕಾವನ್ನು ನಿಷೇಧಿಸಿತ್ತು. ಹೊಸದಾಗಿ ಕಳೆದ ವಾರ ಹೊರಡಿಸಲಾದ ಆದೇಶ ಒಂದು ವರ್ಷದ ಅವಧಿಗೆ ಜಾರಿಯಲ್ಲಿರಲಿದೆ. ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ಸಾಗಣೆ, ವಿತರಣೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿ ಈ ಕ್ರಮ ಕೈಗೊಳ್ಳಲಾಗಿದೆ.ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಮತ್ತು ಪಾನ್ ಮಸಾಲಾವನ್ನು ಸ್ಯಾಶೆ, ಪೌಚ್‌, ಪೊಟ್ಟಣ ಹಾಗೂ ಕಂಟೇನರ್‌ ಸೇರಿ ಯಾವುದೇ ವಿಧಾನಗಳಲ್ಲಿ ಸಂಗ್ರಹ ಮತ್ತು ಮಾರಾಟಕ್ಕೆ ಅವಕಾಶವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಆದೇಶದ ಪರಿಣಾಮಗಳ ಕುರಿತು ಮಾತನಾಡಿದ ತಂಬಾಕು ಮಂಡಳಿ ಮೈಸೂರು ಹಾಗೂ ಪಿರಿಯಾಪಟ್ಟಣ ಮಾರುಕಟ್ಟೆಗಳ ಪ್ರಾದೇಶಿಕ ಅಧಿಕಾರಿ ಎಚ್‌.ಕೆ.ಗೋಪಾಲ್‌, 'ತಂಬಾಕು ಉತ್ಪನ್ನಗಳ ಮಾರಾಟ ನಿಷೇಧದ ಆದೇಶ ಜಾರಿಯಾಗಿದೆ. ಉಪ ಉತ್ಪನ್ನಗಳಲ್ಲಿ ಕೆಲ ವಸ್ತುಗಳ ಬಳಕೆ ನಿಷೇಧಿಸಲಾಗಿದೆ. ಆದರೆ, ಇದು ತಂಬಾಕು ಉತ್ಪಾದನೆ ಮೇಲೆ ಅಲ್ಲ. ನಮ್ಮಲ್ಲಿ ಬೆಳೆಯುವ ವರ್ಜಿನಿಯಾ( ಎಫ್‌ಸಿವಿ) ತಂಬಾಕು ಹೆಚ್ಚು ರಫ್ತು ಆಗಲಿದೆ. ಶೇ 80ರಷ್ಟು ಹೊರ ದೇಶಗಳಿಗೆ ಹೋದರೆ, ಶೇ 20ರಷ್ಟು ಇಲ್ಲಿ ಬಳಕೆಯಾಗುತ್ತದೆ. ಇದರಿಂದ ಈ ಆದೇಶ ನಮಗೆ ಅನ್ವಯಿಸುವುದಿಲ್ಲ. ರೈತರ ಮೇಲೂ ಪರಿಣಾಮ ಬೀರುವುದಿಲ್ಲ' ಎಂದು ಸ್ಪಷ್ಟಪಡಿಸಿದರು.

ಬೆಳೆ ಪ್ರಮಾಣ ಹೇಗೆ

ಕರ್ನಾಟಕ ಹಾಗೂ ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯದಲ್ಲಿ ಹೆಚ್ಚು ತಂಬಾಕನ್ನು ಬೆಳೆಯಲಾಗುತ್ತಿದೆ. ಕರ್ನಾಟಕದಲ್ಲಿ ಮೈಸೂರು, ಹಾಸನ, ಕೊಡಗು, ಚಾಮರಾಜನಗರ, ಶಿವಮೊಗ್ಗ, ಬೆಳಗಾವಿ ಜಿಲ್ಲೆಗಳ ಕೆಲ ಭಾಗದಲ್ಲಿ ತಂಬಾಕನ್ನು ಐದು ದಶಕಗಳಿಂದ ಬೆಳೆಯಲಾಗುತ್ತಿದೆ.

ಕರ್ನಾಟಕದಲ್ಲಿ 66 ಸಾವಿರ ಹೆಕ್ಟೇರ್ ನಲ್ಲಿ ತಂಬಾಕು ಬೆಳೆಯಲಾಗುತ್ತಿದ್ದು. 2025-26ಕ್ಕೆ 87.97 ಮಿಲಿಯನ್ ಕೆಜಿ ತಂಬಾಕು ಬೆಳೆಯುವ ಗುರಿ ನಿಗದಿಪಡಿಸಲಾಗಿತ್ತು. ಆದರೆ, ಸುಮಾರು 100 ಮಿಲಿಯನ್ ಕೆಜಿ ತಂಬಾಕು ಉತ್ಪಾದನೆಯಾಗಿ ಉತ್ತಮ ಬೆಲೆಯೊಂದಿಗೆ ಮಾರಾಟವಾಗಿದೆ.

ಈ ವರ್ಷ 55 ಮಿಲಿಯನ್‌ ಕೆಜಿ ನಿಗದಿಯಾಗಿದ್ದು, ಮುಂದಿನ ತಿಂಗಳು ಇಲ್ಲಿ ಖರೀದಿ ಹಂಗಾಮು ಶುರುವಾಗಿ ಫೆಬ್ರವರಿ ವರೆಗೂ ಇರಲಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣಕ್ಕೆ 232 ಮಿಲಿಯನ್‌ ಕೆಜಿ ಗುರಿಯಿದ್ದು, ಮೂರು ತಿಂಗಳಿನಿಂದ ಖರೀದಿ ಶುರುವಾಗಿದೆ. ಈವರೆಗೂ 50 ಮಿಲಿಯನ್‌ ಕೆಜಿ ಖರೀದಿಯಾಗಿದ್ದು, ಇನ್ನೂ 180 ಮಿಲಿಯನ್‌ ಕೆಜಿ ಬಾಕಿ ಇದೆ. ಸದ್ಯ ಪ್ರತಿ ಕೆಜಿಗೆ ₹240ವರೆಗೂ ದರ ಸಿಗುವ ನಿರೀಕ್ಷೆಯಿದೆ.

ವಹಿವಾಟು ಅಧಿಕ

ಕರ್ನಾಟಕದಲ್ಲಿ ವಾರ್ಷಿಕವಾಗಿ ₹1200 ಕೋಟಿ ರಷ್ಟು ತಂಬಾಕು ವಹಿವಾಟು ನಡೆಯುತ್ತಿದೆ. ಆಂಧ್ರ ಹಾಗೂ ತೆಲಂಗಾಣದಲ್ಲಿ ಇದು ₹1500 ಕೋಟಿಗೂ ಅಧಿಕ. ಕರ್ನಾಟಕದಲ್ಲಿ ಅಧಿಕ ಹಾಗೂ ಅನಧಿಕೃತ ಬೆಳೆಗಾರರು ಸೇರಿ ಸುಮಾರು 60 ಸಾವಿರ ರೈತರು ತಂಬಾಕು ಬೆಳೆದರೆ, ನೆರೆಯ ರಾಜ್ಯಗಳಲ್ಲಿ ಸುಮಾರು 80 ಸಾವಿರ ರೈತರು ತಂಬಾಕು ಬೆಳೆಯುತ್ತಾರೆ.

ಕರ್ನಾಟಕದಲ್ಲಿ ವರ್ಜಿನಿಯಾ ತಂಬಾಕು ಹೆಚ್ಚು ಬೆಳೆಯಲಾಗುತ್ತಿದ್ದು, ಆಂಧ್ರದಲ್ಲೂ ಇದನ್ನೇ ಹೆಚ್ಚು ಬೆಳೆಯಲಾಗುತ್ತದೆ. ಆದರೆ, ಕರ್ನಾಟಕದಲ್ಲಿ ಬೆಳೆಯುವ ತಂಬಾಕು ಶ್ರೇಷ್ಠ ಗುಣಮಟ್ಟದ್ಧಾಗಿರುವುದರಿಂದ ರಫ್ತಿಗೆ ಬೇಡಿಕೆ ಹೆಚ್ಚು. ಇಲ್ಲಿನ ತಂಬಾಕಿಗೆ ಹೆಚ್ಚು ದರ ಮೊದಲಿನಿಂದಲೂ ಸಿಗುತ್ತಿದೆ.

ಆದರೆ ಜಿಂಬಾಬ್ವೆ, ಟಾಂಜಾನಿಯಾ, ಬ್ರೆಜಿಲ್ ಸಹಿತ ಹಲವು ದೇಶಗಳಿಗೆ ಹೆಚ್ಚು ತಂಬಾಕು ರಫ್ತಾಗುತ್ತದೆ. ಈ ವರ್ಷ ಆ ದೇಶಗಳಲ್ಲಿಯೇ ತಂಬಾಕು ಹೆಚ್ಚು ಉತ್ಪಾದನೆಯಾಗಿರುವುದರಿಂದ ಭಾರತದ ತಂಬಾಕಿಗೆ ಹೆಚ್ಚಿನ ಬೇಡಿಕೆ ಇಲ್ಲ. ಇದರಿಂದ ದರ ಕಡಿಮೆಯಾಗುವ ಆತಂಕ ಹೆಚ್ಚಿದೆ ಎನ್ನುವುದು ತಂಬಾಕು ಮಂಡಳಿ ಹಿರಿಯ ಅಧಿಕಾರಿಯೊಬ್ಬರು ನೀಡುವ ವಿವರಣೆ.

ತಂಬಾಕು ಕೃಷಿಯು ಫಲವತ್ತಾದ ಭೂಮಿ ಹಾನಿ ಮಾಡಿ ಆಹಾರ ಭದ್ರತೆಗೆ ಅಪಾಯ ಒಡ್ಡಲಿದೆ ಎನ್ನುವ ಕಾರಣ ನೀಡಿ ವಿಶ್ವ ಬ್ಯಾಂಕ್‌ ಎರಡು ದಶಕದ ಹಿಂದೆಯೇ ವಿಶ್ವದ 160ಕ್ಕೂ ಅಧಿಕ ದೇಶಗಳಲ್ಲಿ ತಂಬಾಕು ನಿಷೇಧಕ್ಕೆ ಅವಧಿ ನಿಗದಿ ಮಾಡಿತ್ತು. 2020ರವರೆಗೂ ತಂಬಾಕು ಬೆಳೆ ಕಡಿಮೆ ಮಾಡಿ ಪರ್ಯಾಯ ಬೆಳೆಗಳಿಗೆ ಒತ್ತು ನೀಡಬೇಕು ಎಂದು ಸೂಚಿಸಿತ್ತು. ಅದರಂತೆ ಕರ್ನಾಟಕದ ತಂಬಾಕು ಬೆಳೆಯುವ ಪ್ರದೇಶದಲ್ಲಿ ವನ ತೋಟಗಾರಿಕೆಗೆ ಒತ್ತು ನೀಡಲಾಗುತ್ತಿದೆ. ಆನಂತರ ನಿಷೇಧದ ಅವಧಿಯನ್ನು 2030ರವರೆಗೆ ವಿಸ್ತರಣೆ ಮಾಡಲಾಗಿತ್ತು. ಇನ್ನು ನಾಲ್ಕು ವರ್ಷ ಇರುವ ಹಾಗೆಯೇ ನಿಷೇಧ ಅವಧಿಯನ್ನು2040ರವರೆಗೆ ವಿಸ್ತರಣೆ ಮಾಡಿದೆ. ಇದರಿಂದ ತಂಬಾಕು ಕೃಷಿ ಇನ್ನೂ 14 ವರ್ಷ ಆಬಾಧಿತವಾಗಿರಲಿದೆ ಎಂದು ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಎಚ್.ಕೆ.ಗೋಪಾಲ್‌ ಹೇಳುತ್ತಾರೆ.ಬೆಳೆ ನಿಷೇಧ ಅವಧಿ 10 ವರ್ಷ ವಿಸ್ತರಣೆಎಚ್‌.ಕೆ.ಗೋಪಾಲ್‌, ಪ್ರಾದೇಶಿಕ ವ್ಯವಸ್ಥಾಪಕ ತಂಬಾಕು ಮಂಡಳಿ ಮೈಸೂರುಕರ್ನಾಟಕದಲ್ಲಿ ತಂಬಾಕಿನ ಕಚ್ಚಾ ವಸ್ತುವನ್ನು ಬೆಳೆಯಲು ನಮಗೆ ಅವಕಾಶವಿದೆ. ಐದಾರು ಜಿಲ್ಲೆಗಳಲ್ಲಿ ತಂಬಾಕು ಬೆಳೆಯಲಾಗುತ್ತಿದೆ. ಬೆಳೆ ವಿಚಾರ ನೇರವಾಗಿ ಕೇಂದ್ರ ಸರ್ಕಾರದ ಸುಪರ್ದಿಗೆ ಬರುವುದರಿಂದ ಎಲ್ಲಾ ನಿಯಂತ್ರಣವನ್ನು ಕೇಂದ್ರ ಸರ್ಕಾರವೇ ಮಾಡಲಿದೆ.
Dailyhunt
Disclaimer: This content has not been generated, created or edited by Dailyhunt. Publisher: Prajavani