ಮುಂಬೈ: ಮಹಿಳಾ ಮೀಸಲಾತಿ ಕುರಿತಂತೆ ಮಹಾರಾಷ್ಟ್ರ ಬಿಜೆಪಿಯು ಮುಂಬೈನಲ್ಲಿ ರ್‍ಯಾಲಿ ಹಮ್ಮಿಕೊಂಡಿದ್ದು, ರ್‍ಯಾಲಿಯಿಂದಾಗಿ ಟ್ರಾಫಿಕ್ ಜ್ಯಾಮ್ ಉಂಟಾಗಿತ್ತು. ಇದರಿಂದ ರೊಚ್ಚಿಗೆದ್ದ ಮಹಿಳೆ, ಸಚಿವರನ್ನು ನಿಲ್ಲಿಸಿ ಕಿಡಿಕಾರಿರುವ ಘಟನೆ ನಡೆದಿದೆ.
ಮಹಿಳೆ, ಸಚಿವರನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ಬಿಜೆಪಿ ಆಂದೋಲನದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಆಕ್ರೋಶಗೊಂಡ ಮಹಿಳೆ ಸಚಿವರನ್ನು ನಿಲ್ಲಿಸಿ, ನಿನ್ನಿಂದಲೇ ಟ್ರಾಫಿಕ್ ಜ್ಯಾಮ್ ಗೆಟ್‌ಔಟ್ ಎಂದು ಬೈದಿದ್ದಾರೆ.
ಮುಂಬೈನ ವೊರ್ಲಿ ಪ್ರದೇಶದಲ್ಲಿ ಸಚಿವ ಗಿರೀಶ್ ಮಹಾಜನ್ ನೇತೃತ್ವದಲ್ಲಿ ಮಂಗಳವಾರ ರ್‍ಯಾಲಿ ನಡೆಯುತ್ತಿತ್ತು. ವಿರೋಧ ಪಕ್ಷಗಳುಮೀಸಲಾತಿ ಮಸೂದೆಗೆ ವಿರೋಧಿಸುವುದು ಎಂಬುದನ್ನು ಜನರಿಗೆ ತಿಳಿಸಲು ಬಿಜೆಪಿ ಈ ರ್‍ಯಾಲಿ ಆಯೋಜಿಸಿತ್ತು.
ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
'ನಿನ್ನಿಂದ ಟ್ರಾಫಿಕ್ ಜ್ಯಾಮ್ ಗೆಟ್ ಔಟ್'ಎಂದು ಸಚಿವರ ವಿರುದ್ಧ ಕಿಡಿಕಾರಿದ ಮಹಿಳೆ
ಒಂದು ಸಾಲಿನಲ್ಲಿಮುಂಬೈನಲ್ಲಿ ಬಿಜೆಪಿ ರ್‍ಯಾಲಿಯಿಂದಾಗಿ ಉಂಟಾದ ಟ್ರಾಫಿಕ್ ಜ್ಯಾಮ್ ಬಗ್ಗೆ ಸಚಿವ ಗಿರೀಶ್ ಮಹಾಜನ್ ಅವರನ್ನು ಸಾರ್ವಜನಿಕ ಮಹಿಳೆಯೊಬ್ಬರು ತರಾಟೆಗೆ ತೆಗೆದುಕೊಂಡ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಪ್ರಮುಖ ಸಂಗತಿಗಳು• ರ್‍ಯಾಲಿಯಿಂದ ಉಂಟಾದ ಸಂಚಾರ ದಟ್ಟಣೆಮಹಿಳಾ ಮೀಸಲಾತಿ ಕುರಿತಾಗಿ ಮುಂಬೈನ ವೊರ್ಲಿ ಪ್ರದೇಶದಲ್ಲಿ ಬಿಜೆಪಿ ಆಯೋಜಿಸಿದ್ದ ರ್ಯಾಲಿಯಿಂದಾಗಿ ಸಾರ್ವಜನಿಕ ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು.• ಸಚಿವರ ವಿರುದ್ಧ ಮಹಿಳೆಯ ಆಕ್ರೋಶಟ್ರಾಫಿಕ್ ಸಮಸ್ಯೆ ಕಂಡು ಕೆರಳಿದ ಮಹಿಳೆಯೊಬ್ಬರು, ರ್‍ಯಾಲಿಯ ನೇತೃತ್ವ ವಹಿಸಿದ್ದ ಸಚಿವ ಗಿರೀಶ್ ಮಹಾಜನ್ ಅವರನ್ನು ತಡೆದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.• ರ್‍ಯಾಲಿ ಸ್ಥಳದ ಕುರಿತು ಪ್ರಶ್ನೆಸಂಚಾರಕ್ಕೆ ಅಡಚಣೆ ಮಾಡುವ ಬದಲು ರ್ಯಾಲಿಯನ್ನು ಹತ್ತಿರದ ತೆರೆದ ಮೈದಾನದಲ್ಲಿ ಏಕೆ ನಡೆಸಬಾರದು ಎಂದು ಸಚಿವರನ್ನು ಮಹಿಳೆ ಪ್ರಶ್ನಿಸಿದರು.• ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್ಸಚಿವರನ್ನು ಮಹಿಳೆ ತರಾಟೆಗೆ ತೆಗೆದುಕೊಳ್ಳುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಬಿಜೆಪಿ ಆಂದೋಲನದ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ.• ಕಾಂಗ್ರೆಸ್‌ನಿಂದ ಬಿಜೆಪಿ ಟೀಕೆಈ ಘಟನೆಯನ್ನು ಬಳಸಿಕೊಂಡ ಮಹಾರಾಷ್ಟ್ರ ಕಾಂಗ್ರೆಸ್, ರಾಜಕೀಯ ಲಾಭಕ್ಕಾಗಿ ಬಿಜೆಪಿ ಮಹಿಳಾ ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದೆ.ಪ್ರಮುಖ ಅಂಕಿಅಂಶಗಳುಮಂಗಳವಾರಘಟನೆ ನಡೆದ ದಿನಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
'ಗೆಟ್‌ಔಟ್ ಫ್ರಂ ಹಿಯರ್.. ನೀವು ಟ್ರಾಫಿಕ್ ಜಾಮ್ ಉಂಟುಮಾಡುತ್ತಿದ್ದೀರಿ'ಎಂದು ಮಹಿಳೆ ಜೋರಾಗಿ ಕೂಗಾಡಿದ್ದಾರೆ. ಈ ರೀತಿ ವಾಹನ ಸಂಚಾರಕ್ಕೆ ಅಡ್ಡಿಪಡಿಸುವ ಬದಲು ಹತ್ತಿರದ ತೆರೆದ ಮೈದಾನದಲ್ಲಿ ರ್‍ಯಾಲಿ ನಡೆಸಲು ಸಾಧ್ಯವಿಲ್ಲವೇ'ಎಂದು ತಿಳಿ ಹೇಳಿದ್ದಾರೆ.
ಮಹಿಳೆಯನ್ನು ಮಹಾಜನ್ ಸಮಾಧಾನಪಡಿಸಲು ಯತ್ನಿಸಿದ್ದಾರೆ. ಇದಕ್ಕೆ ಸೊಪ್ಪು ಹಾಕದ ಮಹಿಳೆ, ನಿಮಗೆ ಅರ್ಥವಾಗಲಿಲ್ಲವೇ? ನಿಮ್ಮಿಂದ ಏನು ತಪ್ಪಾಗಿದೆ? ನೂರಾರು ಜನರು ಕಾಯುತ್ತಿದ್ದಾರೆ ಎಂದು ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ಪೊಲೀಸ್ ಅಧಿಕಾರಿಯೊಬ್ಬರು ಮಧ್ಯಪ್ರವೇಶಿಸಿದಾಗ, ಮಾತನಾಡಲು ನಿರಾಕರಿಸಿದ ಮಹಿಳೆ ಯಾರೂ ತನ್ನೊಂದಿಗೆ ಮಾತನಾಡಬಾರದು ಎಂದು ಒತ್ತಾಯಿಸಿದ್ದಾರೆ.
ಬಳಿಕ, ಈ ವಿಡಿಯೊವನ್ನು ಹಂಚಿಕೊಂಡಿರುವ ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್, ಮಹಿಳಾ ಮೀಸಲಾತಿ ಕುರಿತು ಆಡಳಿತ ಪಕ್ಷದ ಅಭಿಯಾನವು ಅದರ ನಿಜವಾದ ಮುಖವನ್ನು ಬಹಿರಂಗಪಡಿಸಿದೆ ಎಂದು ಆರೋಪಿಸಿದ್ದಾರೆ.
ರಾಜಕೀಯ ಲಾಭಕ್ಕಾಗಿ ಬಿಜೆಪಿ ಮಹಿಳೆಯರನ್ನು ದಾರಿ ತಪ್ಪಿಸುತ್ತಿದೆ ಮತ್ತು ಸುಳ್ಳು ಸಂಕಥನವನ್ನು ಹರಡಲು ಮಹಿಳಾ ಮೀಸಲಾತಿ ವಿಷಯವನ್ನು ಒಂದು ಸಾಧನವಾಗಿ ಬಳಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

