Dailyhunt Logo
  • Light mode
    Follow system
    Dark mode
    • Play Story
    • App Story
'ನ್ಯಾಷನಲಿಸ್ಟ್‌ ಸಿಟಿಜನ್‌ ಪಕ್ಷ'ದ ಜತೆ ಟಿಎಂಸಿ ಬಂಡಾಯ ಬಣ ವಿಲೀನ

'ನ್ಯಾಷನಲಿಸ್ಟ್‌ ಸಿಟಿಜನ್‌ ಪಕ್ಷ'ದ ಜತೆ ಟಿಎಂಸಿ ಬಂಡಾಯ ಬಣ ವಿಲೀನ

ಕೋಲ್ಕತ್ತ: ಟಿಎಂಸಿ ಭಿನ್ನಮತೀಯ ಸಂಸದರು ತಮ್ಮ ಬಣವನ್ನು 'ನ್ಯಾಷನಲಿಸ್ಟ್‌ ಸಿಟಿಜನ್‌ ಪಕ್ಷ'ದೊಂದಿಗೆ (ಎನ್‌ಸಿಪಿ) ವಿಲೀನ ಮಾಡಿರುವುದಾಗಿ ಭಾನುವಾರ ಘೋಷಿಸಿದ್ದಾರೆ.

ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ, ಸದನದಲ್ಲಿ ಪ್ರ‌ತ್ಯೇಕ ಆಸನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ.

ಸ್ಪೀಕರ್ ಅವರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಬಂಡಾಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್‌, 'ಪ್ರತ್ಯೇಕ ಬಣಕ್ಕೆ ಮಾನ್ಯತೆ ನೀಡುವಂತೆ ಕೋರಿ ಮೂರನೇ ಎರಡರಷ್ಟು ಟಿಎಂಸಿ ಸಂಸದರು ಮನವಿಯನ್ನು ಸಲ್ಲಿಸಿದ್ದೇವೆ' ಎಂದು ಹೇಳಿದರು.

'ಬಂಡಾಯ ಸಂಸದರ ಗುಂಪನ್ನು ತ್ರಿಪುರಾದ ಪ್ರಾದೇಶಿಕ ಪಕ್ಷವಾದ 'ನ್ಯಾಷನಲಿಸ್ಟ್‌ ಸಿಟಿಜನ್‌ ಪಕ್ಷ'ದೊಂದಿಗೆ ವಿಲೀನ ಮಾಡಿದ್ದೇವೆ. ಯಾವುದು ನಿಜವಾದ ಟಿಎಂಸಿ ಎಂಬುದನ್ನು ನ್ಯಾಯಾಲಯವು ನಿರ್ಧರಿಸಲಿದೆ' ಎಂದು ಟಿಎಂಸಿಯ ಸಂಸದ ಸುದೀಪ್‌ ಬಂಡೋಪಾಧ್ಯಾಯ ಅವರು ತಿಳಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Prajavani