Dailyhunt Logo
  • Light mode
    Follow system
    Dark mode
    • Play Story
    • App Story
ಒಂದು ದೇಶ, ಒಂದು ಚುನಾವಣೆ: ಸಮಿತಿ ಅವಧಿ ವಿಸ್ತರಣೆಗೆ ಲೋಕಸಭೆ ಅಸ್ತು

ಒಂದು ದೇಶ, ಒಂದು ಚುನಾವಣೆ: ಸಮಿತಿ ಅವಧಿ ವಿಸ್ತರಣೆಗೆ ಲೋಕಸಭೆ ಅಸ್ತು

ವದೆಹಲಿ: 'ಒಂದು ದೇಶ, ಒಂದು ಚುನಾವಣೆ' ಮಸೂದೆಯ ಪರಾಮರ್ಶೆಗಾಗಿ ರಚಿಸಿರುವ ಸಂಸತ್ತಿನ ಜಂಟಿ ಸದನ ಸಮಿತಿಯ ಅವಧಿಯನ್ನು ಚಳಿಗಾಲ ಅಧಿವೇಶನದ ಅಂತ್ಯದವರೆಗೂ ವಿಸ್ತರಿಸಲು ಲೋಕಸಭೆ ಅನುಮತಿ ನೀಡಿದೆ.

ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಉದ್ದೇಶಿತ 'ಸಂವಿಧಾನ (129ನೇ ತಿದ್ದುಪಡಿ) ಮಸೂದೆ-2024'ರ ಪರಾಮರ್ಶೆಯನ್ನು 41 ಸದಸ್ಯರ ಸಮಿತಿ ನಡೆಸುತ್ತಿದೆ.

ಸಮಿತಿ ಅಧ್ಯಕ್ಷ ಪಿ.ಪಿ.ಚೌಧರಿ ಅವರು ಚಳಿಗಾಲ ಅಧಿವೇಶನದ ಕೊನೆಯ ವಾರದ ಮೊದಲ ದಿನ ವರದಿಯನ್ನು ಸಲ್ಲಿಸಲು ಅವಧಿ ವಿಸ್ತರಿಸುವಂತೆ ಪ್ರಸ್ತಾವ ಸಲ್ಲಿಸಿದರು. ಇದಕ್ಕೆ ಲೋಕಸಭೆ ಅನುಮೋದನೆ ನೀಡಿತು.

ಸಮಿತಿಯು ದೇಶದಾದ್ಯಂತ ವಿವಿಧ ಕ್ಷೇತ್ರಗಳ ತಜ್ಞರನ್ನು ಸಂಪರ್ಕಿಸಿ 2029ರಲ್ಲಿ ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಕುರಿತು ಅಭಿಪ್ರಾಯ ಸಂಗ್ರಹಿಸುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani