ಇಸ್ಲಾಮಾಬಾದ್ (ಪಿಟಿಐ): ಇಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ರಾಷ್ಟ್ರೀಯ ಸಂಯೋಜಕರ ಮೂರು ದಿನಗಳ ಸಭೆಯಲ್ಲಿ ಭಾರತ ಸೇರಿದಂತೆ ಹಲವು ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಮುಂದಿನ ವರ್ಷದ ಶೃಂಗಭೆಯ ಮುಖ್ಯಸ್ಥರನ್ನು ಆಯ್ಕೆ ಮಾಡುವ ಸಂಬಂಧ ಸೋಮವಾರದಿಂದಲೇ ಇಸ್ಲಾಮಾಬಾದ್‌ನಲ್ಲಿ ಸಭೆ ಆರಂಭಗೊಂಡಿದೆ.
ಭಾರತ, ಚೀನಾ, ಇರಾನ್, ಪಾಕಿಸ್ತಾನ, ರಷ್ಯಾ, ಕಜಕಸ್ತಾನ, ತಜಿಕಿಸ್ತಾನ, ಉಜ್ಬೇಕಿಸ್ತಾನ, ಕಿರ್ಗಿಸ್ತಾನ, ಬೆಲಾರೂಸ್ ಎಸ್‌ಸಿಒ ಸದಸ್ಯ ರಾಷ್ಟ್ರಗಳಾಗಿವೆ.
ಭಾರತದ ರಾಷ್ಟ್ರೀಯ ಸಂಯೋಜಕ ಅಲೋಕ್ ಡಿಮ್ರಿ ನೇತೃತ್ವದ ತಂಡ ಎಸ್‌ಸಿಒ ಸಭೆಯಲ್ಲಿ ಭಾಗಿಯಾಗಿದೆ.

