ಸುಬ್ರಹ್ಮಣ್ಯ: ಪಂಜ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 200 ವಿದ್ಯಾರ್ಥಿಗಳಿಗೆ ಮುಂಬೈನ ಓಂ ಶಕ್ತಿ ಮಹಿಳಾ ಸಂಸ್ಥೆ, ಪಂಜದ ದುರ್ಗಾ ಸೇವಾ ಸಂಘ ವತಿಯಿಂದ ನೋಟ್‌ಬುಕ್ ವಿತರಿಸಲಾಯಿತು.
ಈ ವೇಳೆ ಓಂಶಕ್ತಿ ಮಹಿಳಾ ಸಂಸ್ಥೆಯ ಗೌರವಾಧ್ಯಕ್ಷೆ ಚಿತ್ರ ರವಿರಾಜ ಶೆಟ್ಟಿ ಮಾತನಾಡಿ, ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕಾಗಿದೆ.
ಅದರಲ್ಲೂ ಗ್ರಾಮಾಂತರ ಪ್ರದೇಶದ ಕನ್ನಡ ಶಾಲೆಗಳು ವಿದ್ಯಾರ್ಥಿಗಳ ದಾಖಲಾತಿ ಕೊರತೆಯಿಂದ ಮುಚ್ಚುವ ಸ್ಥಿತಿಯಲ್ಲಿರುವುದು ಶೋಚನೀಯ. ಹಾಗಾಗಿ ಎಲ್ಲರೂ ಸೇರಿ ಕನ್ನಡ ಶಾಲೆಗಳನ್ನು ಉಳಿಸೋಣ ಎಂದರು.
ಪಂಜ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಲಿಗೋದರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ದುರ್ಗಾ ಸೇವಾ ಸಂಘ ಕೇಂದ್ರ ಅಧ್ಯಕ್ಷ ಪದ್ಮನಾಭ ರೈ, ಕಾರ್ಯದರ್ಶಿ ದೇವಿ ಪ್ರಸಾದ್ ರೈ ನಿರ್ದೇಶಕರಾದ ಬಾಲಕೃಷ್ಣ ರೈ, ಬಿರ್ಕಿ ಪ್ರಕಾಶ್ ಆಚಾರ್ಯ ಕೇನ್ಯಾ ರಾಧಾಕೃಷ್ಣ ನಾದೂರು, ಮುಂಬೈ ಓಂ ಶಕ್ತಿ ಮಹಿಳಾ ಸಂಸ್ಥೆಯ ಸದಸ್ಯರಾದ ಜಯಶ್ರೀ ಕೆ.ಶೆಟ್ಟಿ, ಉಷಾ ಆನಂದ ಶೆಟ್ಟಿ, ಗ್ರೀಷ್ಮಾ ಪಿ.ಶೆಟ್ಟಿ, ಸವಿತಾ ಎಸ್.ಶೆಟ್ಟಿ, ಎಸ್‌ಡಿಎಂಸಿ ಉಪಾಧ್ಯಕ್ಷೆ ಸೌಮ್ಯಶ್ರೀ ಸದಸ್ಯರಾದ ದಾಮೋದರ ನೆರಳ, ವೇದಾವತಿ, ಯಕ್ಷಿತ, ಧನ್ಯಶ್ರೀ ಉಪಸ್ಥಿತರಿದ್ದರು.
ಪಂಜ ಶಾಲಾ ಮುಖ್ಯಶಿಕ್ಷಕಿ ಲೀಲಾ ಕುಮಾರಿ ಟಿ ಸ್ವಾಗತಿಸಿದರು. ಶಿಕ್ಷಕಿ ಮಂಜುಳಾ ಅಭಿನಂದನ ಪತ್ರ ವಾಚಿಸಿದರು. ಮೋಹನ್ ಪ್ರಸಾದ್, ಚೇತನಾ, ವಿನುತ, ಸುಮಿತ್ರಾ, ದಿವ್ಯಶ್ರೀ, ಸಹಾಯಕಿಯರಾದ ನಮಿತಾ, ಲಿಖಿತಾ, ಮಂಜುಳಾ ಹಾಜರಿದ್ದರು. ಶಿಕ್ಷಕ ಶಿವಾನಂದ ನಿರೂಪಿಸಿದರು.ಶಿಕ್ಷಕಿ ನೇತ್ರಾ ವಂದಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-29-1863647287

