Dailyhunt Logo
  • Light mode
    Follow system
    Dark mode
    • Play Story
    • App Story
ಪರಿಶುದ್ಧ ಪ್ರೀತಿ ನೀಡುವ ಮಹಿಳೆ 'ಜಯಮ್ಮ': ರಶ್ಮಿಕಾ ಮಂದಣ್ಣ ಭಾವುಕ ಪೋಸ್ಟ್

ಪರಿಶುದ್ಧ ಪ್ರೀತಿ ನೀಡುವ ಮಹಿಳೆ 'ಜಯಮ್ಮ': ರಶ್ಮಿಕಾ ಮಂದಣ್ಣ ಭಾವುಕ ಪೋಸ್ಟ್

ಜಯಮ್ಮ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಶ್ಮಿಕಾ, ಸಿನಿಮಾ ಮತ್ತು ತಮ್ಮ ಪಾತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

'ಜಯಮ್ಮ. ಪರಿಶುದ್ಧವಾದ ಪ್ರೀತಿಯನ್ನು ನೀಡುವ ಮಹಿಳೆ.
ತಮ್ಮ ಜನರಿಗಾಗಿ ಧ್ವನಿ ಎತ್ತುವುದು, ಅವರನ್ನು ರಕ್ಷಿಸುವುದು, ತನ್ನೆಲ್ಲಾ ಶಕ್ತಿಯಿಂದ ಅವರನ್ನು ಪ್ರೀತಿಸುವುದೇ ಅವರ ವ್ಯಕ್ತಿತ್ವ' ಎಂದು ಬರೆದುಕೊಂಡಿದ್ದಾರೆ.

ಸಮುದಾಯಕ್ಕಿರುವ ಶಕ್ತಿ, ದೇವರ ಮೇಲಿನ ನಂಬಿಕೆ, ಕಷ್ಟದ ಸಮಯದಲ್ಲಿಯೂ ಸಣ್ಣ ಸಣ್ಣ ವಿಚಾರಗಳಲ್ಲಿ ಖುಷಿ ಹುಡುಕುವುದನ್ನು ಈ ಸಿನಿಮಾ ಕಲಿಸುತ್ತದೆ ಎಂದಿದ್ದಾರೆ.

'ಹೊರಗಿನ ಜನ ನಮ್ಮ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಬಂದಾಗ ನಾವೆಲ್ಲರೂ ಒಂದಾಗಿ ನಿಲ್ಲುವ ಬಗೆ ಮತ್ತು ಅಂತಹ ಸಂದರ್ಭದಲ್ಲಿ ನಾವು ಹೋರಾಡುತ್ತೇವೆ ಎನ್ನುವುದನ್ನು ಸಿನಿಮಾ ಎತ್ತಿ ತೋರಿಸುತ್ತದೆ' ಎಂದು ಹೇಳಿದ್ದಾರೆ.

ಚಿತ್ರಮಂದಿರಗಳಿಗೆ ತೆರಳಿ ಸಿನಿಮಾ ನೋಡಿ ಎಂದಿರುವ ರಶ್ಮಿಕಾ, ನಿರ್ದೇಶಕ ರಾಹುಲ್‌ ಅವರ ಬಗ್ಗೆಯೂ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

'ರಣಬಾಲಿ ಮತ್ತು ಜಯಮ್ಮಳನ್ನು ಚಿತ್ರಮಂದಿರಗಳಲ್ಲಿ ನೋಡಿ ಆನಂದಿಸುವ ಪರಿಯೇ ಬೇರೆ' ಎಂದಿದ್ದಾರೆ.

'ಈ ಸಿನಿಮಾವನ್ನು ಮತ್ತು ಜಯಮ್ಮಳನ್ನು ಇಷ್ಟಪಡುವುದನ್ನು ಕಂಡು, ಪದಗಳಲ್ಲಿ ವಿವರಿಸಲಾಗದಷ್ಟು ಸಂತೋಷವಾಗುತ್ತಿದೆ' ಎಂದು ರಶ್ಮಿಕಾ ಹರ್ಷ ವ್ಯಕ್ತಪಡಿಸಿದ್ದಾರೆ.

'ಈ ಸಿನಿಮಾವನ್ನು ಪೂರ್ಣಗೊಳಿಸಲು ಇಡೀ ತಂಡವೇ ಅತ್ಯಂತ ಸುಂದರವಾಗಿ ಒಗ್ಗೂಡಿ ಬಂದಿದೆ ಇದಕ್ಕಾಗಿ ಧನ್ಯವಾದ' ಎಂದಿದ್ದಾರೆ.

ವಿಜಯ್ ದೇವರಕೊಂಡ ಅವರ ಬಗ್ಗೆ ಬರೆದುಕೊಂಡಿರುವ ಅವರು, 'ನಾನು ನಿಮ್ಮ ಅಭಿಮಾನಿ ಎಂದು ನಿಮಗೆ ಮೊದಲೇ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ ಮತ್ತು ಮುಂದೆಯೂ ನಿಮ್ಮ ಕೆಲಸದ ಅಭಿಮಾನಿಯಾಗಿಯೇ ಇರುತ್ತೇನೆ' ಎಂದಿದ್ದಾರೆ.

ವಿಜಯ್ ಅವರ ಕೆಲಸ ಬಗ್ಗೆಯೂ ಹೇಳಿರುವ ರಶ್ಮಿಕಾ, 'ನಿಮ್ಮನ್ನು, ನಿಮ್ಮ ಪರಿಶ್ರಮವನ್ನು ಮೆಚ್ಚಿಕೊಳ್ಳುತ್ತಿರುವುದನ್ನು ನೋಡಿ ನನಗೆ ಸಂತೋಷ, ನೆಮ್ಮದಿ ಸಿಗುತ್ತಿದೆ' ಎಂದಿದ್ದಾರೆ.

'ಒಬ್ಬ ಮಹಿಳೆಯಾಗಿರುವುದರ ನಿಜವಾದ ಅರ್ಥವೇನು ಎಂಬುದರ ಕುರಿತು ಜಯಮ್ಮ ಪಾತ್ರ ಕಲಿಸಿದೆ' ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani