Dailyhunt Logo
  • Light mode
    Follow system
    Dark mode
    • Play Story
    • App Story
ಪಶ್ಚಿಮ ಬಂಗಾಳ: ಗೋಹತ್ಯೆ ತಡೆಗೆ ಮುಸ್ಲಿಮರ ಸಹಮತ, ಹಿಂದೂ ವ್ಯಾಪಾರಿಗಳಿಗೇಕೆ ಆತಂಕ?

ಪಶ್ಚಿಮ ಬಂಗಾಳ: ಗೋಹತ್ಯೆ ತಡೆಗೆ ಮುಸ್ಲಿಮರ ಸಹಮತ, ಹಿಂದೂ ವ್ಯಾಪಾರಿಗಳಿಗೇಕೆ ಆತಂಕ?

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಪಶ್ಚಿಮ ಬಂಗಾಳ: ಗೋ ಹತ್ಯೆ ತಡೆಗೆ ಮುಸ್ಲಿಮರ ಸಹಮತ, ಹಿಂದೂ ವ್ಯಾಪಾರಿಗಳಲ್ಲಿ ಆತಂಕ

ಒಂದು ಸಾಲಿನಲ್ಲಿಪಶ್ಚಿಮ ಬಂಗಾಳ ಸರ್ಕಾರ ಜಾರಿಗೆ ತಂದ ಹೊಸ ಗೋ ಹತ್ಯೆ ನಿಯಂತ್ರಣ ಮಾರ್ಗಸೂಚಿಗಳು ಧಾರ್ಮಿಕ ಮತ್ತು ವ್ಯಾಪಾರಿ ಸಮುದಾಯಗಳಲ್ಲಿ ಭಿನ್ನ ಪ್ರತಿಕ್ರಿಯೆ ಮತ್ತು ಆತಂಕಕ್ಕೆ ಕಾರಣವಾಗಿವೆ.

ಪ್ರಮುಖ ಅಂಶಗಳು• ಹೊಸ ಗೋಹತ್ಯೆ ನಿಯಂತ್ರಣ ಆದೇಶಪಶ್ಚಿಮ ಬಂಗಾಳ ಸರ್ಕಾರ ಮೇ 13ರಂದು ಹೊರಡಿಸಿದ ಮಾರ್ಗಸೂಚಿಯಂತೆ, ಪ್ರಾಣಿ ವಧೆಗೆ ಮುನ್ನ ಅಧಿಕಾರಿಗಳಿಂದ ದೃಢೀಕರಣ ಪತ್ರ ಪಡೆಯುವುದು ಮತ್ತು ವಯಸ್ಸಿನ ಮಿತಿ ಕಡ್ಡಾಯವಾಗಿದೆ.• ಮುಸ್ಲಿಂ ಸಮುದಾಯದ ಸಹಮತಮಸೀದಿಯ ಇಮಾಮ್‌ ಮೌಲಾನಾ ಶಫೀಕ್ ಖಾಸ್ಮಿ ಸೇರಿದಂತೆ ಹಲವು ಮುಸ್ಲಿಂ ನಾಯಕರು ಸರ್ಕಾರದ ನಿಲುವನ್ನು ಬೆಂಬಲಿಸಿ ಗೋ ಹತ್ಯೆ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.• ಹಿಂದೂ ವ್ಯಾಪಾರಿಗಳಲ್ಲಿ ಆತಂಕಹಸುಗಳ ಮಾರಾಟದ ಮೇಲೆ ಅವಲಂಬಿತವಾಗಿರುವ ಹಿಂದೂ ಸಮುದಾಯದ ವರ್ತಕರು ಮತ್ತು ಸಾಕಣೆದಾರರು, ಈ ನಿಯಮಗಳಿಂದಾಗಿ ವ್ಯಾಪಾರ ಕುಂಠಿತವಾಗಿ ಭಾರಿ ನಷ್ಟದ ಭೀತಿಯಲ್ಲಿದ್ದಾರೆ.• ಪಶುವೈದ್ಯರ ಕೊರತೆಯ ಬಿಕ್ಕಟ್ಟುಹಸುಗಳ ಫಿಟ್‌ನೆಸ್ ಪ್ರಮಾಣಪತ್ರ ನೀಡಲು ಸಾಕಷ್ಟು ಪಶುವೈದ್ಯರಿಲ್ಲದಿರುವುದು ಮತ್ತು ವೈಜ್ಞಾನಿಕ ವಯಸ್ಸಿನ ಮೌಲ್ಯಮಾಪನ ವ್ಯವಸ್ಥೆ ಇಲ್ಲದಿರುವುದು ರೈತರಿಗೆ ದೊಡ್ಡ ಸಮಸ್ಯೆಯಾಗಿದೆ.• ದನಗಳ ಜಾತ್ರೆಯಲ್ಲಿ ಭಾರಿ ಕುಸಿತನಿಯಮಗಳ ಕಠಿಣತೆಯಿಂದಾಗಿ ಖರೀದಿದಾರರು ಹಿಂದೇಟು ಹಾಕುತ್ತಿದ್ದು, ದಕ್ಷಿಣ 24 ಪರಗಣ ಜಿಲ್ಲೆಯ ಮಾರುಕಟ್ಟೆಯಲ್ಲಿ ಹಸುಗಳ ಮಾರಾಟ ಪ್ರತಿದಿನ ಎರಡು ಸಾವಿರದಿಂದ ಬೆರಳೆಣಿಕೆಗೆ ಇಳಿದಿದೆ.ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಬಕ್ರೀದ್‌ / ಈದ್‌ ಉಲ್‌ ಅದಾ ಸಂಭ್ರಮಾಚರಣೆಗೆ ಕೆಲವೇ ದಿನಗಳಿರುವಾಗ ಪಶ್ಚಿಮ ಬಂಗಾಳ ಸರ್ಕಾರ ಗೋಹತ್ಯೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಿದೆ. ಇದು ಅಚ್ಚರಿಯ ವಿದ್ಯಮಾನಗಳಿಗೆ ಕಾರಣವಾಗಿದೆ. ಮುಸ್ಲಿಂ ಸಂಘಟನೆಗಳಿಗೆ ಸೇರಿದ ಹಲವು ನಾಯಕರು, ಸರ್ಕಾರದ ನಿಲುವನ್ನು ಬೆಂಬಲಿಸಿ ಗೋ ಹತ್ಯೆ ಮಾಡುವುದಿಲ್ಲ ಎಂದು ಪ್ರತಿಜ್ಞೆ ಗೈದಿದ್ದರೆ, ಹಸು ವ್ಯಾಪಾರ ಮಾಡುವ ಹಿಂದೂ ಸಮದಾಯದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೆಲ್ಲ ಶುರುವಾಗಿದ್ದು, ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರ ಪ್ರಾಣಿ ವಧೆಗೆ ಸಂಬಂಧಿಸಿದಂತೆ ಮೇ 13ರಂದು ಮಾರ್ಗಸೂಚಿ ಬಿಡುಗಡೆ ಮಾಡಿದ ನಂತರ.

ಮಾರ್ಗಸೂಚಿಯಲ್ಲಿ ಏನಿದೆ?
'ಗೂಳಿ, ಎತ್ತು, ಹಸು, ಕರು, ಎಮ್ಮೆ ಮತ್ತು ಕೋಣಗಳನ್ನು ವಧೆ ಮಾಡುವ ಮೊದಲು ಅವು ವಧೆಗೆ ಯೋಗ್ಯವಾಗಿವೆ ಎಂಬುದಕ್ಕೆ ಅಧಿಕಾರಿಗಳಿಂದ ದೃಢೀಕರಣ ಪಡೆಯಬೇಕು. ಇಲ್ಲದಿದ್ದರೆ ಯಾರೂ ಪ್ರಾಣಿ ವಧೆ ಮಾಡುವಂತಿಲ್ಲ' ಎಂಬುದಾಗಿ ಸರ್ಕಾರ ಪ್ರಕಟಿಸಿದೆ. ಅಂದರೆ, ವಧೆ ಮಾಡುವ ಮುನ್ನ ಪ್ರಾಣಿಗಳ ವಯಸ್ಸು, ದೈಹಿಕ ಸ್ಥಿತಿಯ ಬಗ್ಗೆ 'ದೃಢೀಕರಣ ಪತ್ರ' ಪಡೆಯುವುದು ಕಡ್ಡಾಯ.‌

ಗೋವು 'ರಾಷ್ಟ್ರೀಯ ಪ್ರಾಣಿ'ಯಾಗಲಿ: ಬಕ್ರೀದ್‌ಗೂ ಮುನ್ನ ಮುಸ್ಲಿಂ ಸಂಘಟನೆಗಳ ಬೇಡಿಕೆಪ್ರಾಣಿವಧೆಗೆ ಹೊಸ ಮಾರ್ಗಸೂಚಿ ಹೊರಡಿಸಿದ ಬಂಗಾಳ ಸರ್ಕಾರ:ಇಲ್ಲಿದೆ ಸಂಪೂರ್ಣ ಮಾಹಿತಿ

ವಧೆ ಮಾಡುವ ಪ್ರಾಣಿ ವಯಸ್ಸು 14 ವರ್ಷಕ್ಕಿಂತ ಮೇಲ್ಪಟ್ಟಿರಬೇಕು ಮತ್ತು ಗಾಯ, ದೈಹಿಕ ವಿಕಲತೆ, ವಯಸ್ಸು ಅಥವಾ ಗುಣಪಡಿಸಲಾಗದ ಕಾಯಿಲೆಯಿಂದಾಗಿ ಶಾಶ್ವತವಾಗಿ ಅಶಕ್ತವಾಗಿದೆ ಎಂಬುದು ದೃಢಪಟ್ಟಿರಬೇಕು. ಹಾಗಿದ್ದರೆ ಮಾತ್ರವೇ ವಧೆಗೆ ಅವಕಾಶ ನೀಡಲಾಗುತ್ತದೆ.

ಜೊತೆಗೆ, ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ವಧೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ.

ಪಶ್ಚಿಮ ಬಂಗಾಳ ಪ್ರಾಣಿ ವಧೆ ನಿಯಂತ್ರಣ ಕಾಯ್ದೆ-1950ರ ಅನುಗುಣವಾಗಿವೆ. 2018 ಮತ್ತು 2022ರಲ್ಲಿ ಕಲ್ಕತ್ತ ಹೈಕೋರ್ಟ್ ನೀಡಿದ ಸರಣಿ ಆದೇಶದ ಹಿನ್ನೆಲೆಯಲ್ಲಿ ಮಾರ್ಗಸೂಚಿ ಚಾರಿಗೊಳಿಸಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

- ಮೌಲಾನಾ ಶಫೀಕ್‌ ಖಾಸ್ಮಿ, ಕೋಲ್ಕತ್ತದ ನಖೋಡಾ ಮಸೀದಿಯ ಇಮಾಮ್‌ಬಕ್ರಿದ್‌ ಸಂದರ್ಭದಲ್ಲಿ ಹಸುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರಿಗೆ ಮಾರಾಟ ಮಾಡುವವರು ಹಿಂದೂ ಸಹೋದರರೇ ಎಂಬುದು ದುರದೃಷ್ಟಕರ ಸಂಗತಿ. ಈ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಯುತ್ತದೆ. ಗೋ ಹತ್ಯೆ ನಿಲ್ಲಿಸಿದರೆ, ಮಾರಾಟ ಮಾಡುವವರಿಗೆ ತೊಂದರೆ ಎದುರಾಗಬಹುದು.

ಗೋ ಹತ್ಯೆ ನಿಂತರೆ ತೊಂದರೆ ಯಾರಿಗೆ?
ಸುವೇಂದು ಆಡಳಿತದ ಆದೇಶಕ್ಕೆ ಸಂಬಂಧಿಸಿದಂತೆ ನಖೋಡಾ ಮಸೀದಿಯ ಇಮಾಮ್‌ ಮೌಲಾನಾ ಶಫೀಕ್‌ ಖಾಸ್ಮಿ ಎಂಬವರು ಪ್ರತಿಕ್ರಿಯಿಸಿದ್ದಾರೆ. 'ಈದ್‌ ಉಲ್‌ ಅದಾ ಸಮಯದಲ್ಲಿ ಮುಸ್ಲಿಮರು ಗೋ ಹತ್ಯೆ ಮಾಡಬಾರದು. ಗೋ ಮಾಂಸ ತಿನ್ನುವುದನ್ನೇ ಬಿಡಬೇಕು ಎಂದು ಮನವಿ ಮಾಡುತ್ತೇನೆ. ಕೇಂದ್ರ ಸರ್ಕಾರವು ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿಲಿ' ಎಂದು ಆಗ್ರಹಿಸಿದ್ದಾರೆ.

ಸರ್ಕಾರದ ಮಾರ್ಗಸೂಚಿಯ ಬಗ್ಗೆ ಹಸುಗಳನ್ನು ಸಾಕುವವರು, ವರ್ತಕರು ಅಸಮಾಧಾನಗೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಹಿಂದೂಗಳು ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಹಾಲು ಕೊಡದ ಹಸುಗಳನ್ನು ಮಾರಾಟ ಮಾಡುವುದು ಸಾಮಾನ್ಯ ಸಂಗತಿ. ಹಸುಗಳ ಮಾಲೀಕರಲ್ಲಿ ಹೆಚ್ಚಿನವರು ಹಿಂದೂಗಳು. ಇಷ್ಟೇ ಅಲ್ಲ. ಹಬ್ಬದ ಸಂದರ್ಭದಲ್ಲಿ ಲಾಭ ಸಿಗಲಿದೆ ಎಂಬ ಆಸೆಯಿಂದ ಹಸು ಸಾಕಣೆಯಲ್ಲಿ ತೊಡಗಿದವರು, ಹಬ್ಬ ಸಮೀಪಿಸುತ್ತಿದ್ದಂತೆ ಖಾಸಗಿಯವರಿಂದ ಸಾಲ ಪಡೆದು ಹಸುಗಳ ಖರೀದಿಯಲ್ಲಿ ತೊಡಗಿಸಿಕೊಂಡವರೂ ಇದ್ದಾರೆ. ಅವರಿಲ್ಲೀಗ ಆತಂಕ ಸೃಷ್ಟಿಯಾಗಿದೆ ಎಂದು ʼಡಿಎನ್‌ಎʼ ವೆಬ್‌ಸೈಟ್‌ ವರದಿ ಮಾಡಿದೆ.

ಸರ್ಕಾರದ ಆದೇಶದ ಬಗ್ಗೆ ಮುಸ್ಲಿಮರಲ್ಲಿ ಕಳವಳವಿದೆ. ಹಾಗಾಗಿ, ಅವರು ಖರೀದಿಗೆ ಮುಂದಾಗುತ್ತಿಲ್ಲ. ಇದೇ ಕಾರಣದಿಂದ ದನಗಳ ಜಾತ್ರೆಗಳೂ ನೀರಸವಾಗಿವೆ. ಹೆಚ್ಚಿನ ಹಸುಗಳು ಮಾರಾಟವಾಗದೆ ಉಳಿದಿವೆ. ಇದರಿಂದಾಗಿ ಬೆಲೆಯೂ ಅನಿರೀಕ್ಷಿತ ಪ್ರಮಾಣದಲ್ಲಿ ಕುಸಿದಿದ್ದು, ಮಾಲೀಕರಲ್ಲಿ ಭಾರಿ ನಷ್ಟದ ಭೀತಿ ಸೃಷ್ಟಿಯಾಗಿದೆ.

ದಕ್ಷಿಣ 24 ಪರಗಣ ಜಿಲ್ಲೆಯ ಭಂಗಾರ್‌ನಲ್ಲಿರುವ ಪೋಲೆರ್ಹತ್‌ ಗೊರು ಹಾತ್‌ ಹಸು ಮಾರುಕಟ್ಟೆಯಲ್ಲಿ, ಪ್ರತಿದಿನ ಬೆರಳೆಣಿಕೆ ಹಸುಗಳಷ್ಟೇ ಮಾರಾಟವಾಗುತ್ತಿವೆ. ಸರ್ಕಾರದ ಅಧಿಸೂಚನೆಗೂ ಮುನ್ನ ಇಲ್ಲಿ ಸುಮಾರು ಎರಡು ಸಾವಿರದಷ್ಟು ಹಸುಗಳು ನಿತ್ಯ ಮಮಾರಾಟವಾಗುವುದು ಸಾಮಾನ್ಯವಾಗಿತ್ತು ಎನ್ನಲಾಗಿದೆ.

ವೈದ್ಯರ ಕೊರತೆಯಿಂದ ಬಿಕ್ಕಟ್ಟು ಮತ್ತಷ್ಟು ಜಟಿಲ
ಹಸುಗಳ ವಯಸ್ಸನ್ನು ನಿರ್ಧರಿಸಲು ವೈಜ್ಞಾನಿಕ ವ್ಯವಸ್ಥೆ ಜಾರಿಯಾಗಿಲ್ಲ. ಸದ್ಯಕ್ಕೆ ಅವುಗಳ ಹಲ್ಲುಗಳನ್ನು ಎಣಿಸಿ ವಯಸ್ಸನ್ನು ಅಂದಾಜಿಸಲಾಗುತ್ತಿದೆ. ಸರ್ಕಾರಿ ಪಶುವೈದ್ಯರ ಕೊರತೆಯಿರುವುದರಿಂದ ಫಿಟ್‌ನೆಸ್‌ ಪ್ರಮಾಣಪತ್ರ ಪಡೆಯುವುದು ರೈತರು ಮತ್ತು ವ್ಯಾಪಾರಿಗಳಿಗೆ ಸಾಹಸವೇ ಸರಿ. ಇದು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿದೆ. ಪರಿಣಾಮವಾಗಿ, ಸರ್ಕಾರದ ಆದೇಶದ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ.

ಇದರಿಂದಾಗಿ ಬಂಗಾಳ ಬಿಜೆಪಿಯೂ ಗೊಂದಲಕ್ಕೀಡಾಗಿದೆಯಾದರೂ,. ಪಕ್ಷದ ವಕ್ತಾರ ದೇವಜಿತ್‌ ಸರ್ಕಾರ್‌ ಅವರು ಸುವೇಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ʼಈ ಕಠಿಣ ಕಾನೂನುಗಳನ್ನು 1950ರಲ್ಲೇ ಜಾರಿಗೊಳಿಸಲಾಗಿತ್ತು. ಆಗ ಬಿಜೆಪಿ ಅಸ್ತಿತ್ವದಲ್ಲೇ ಇರಲಿಲ್ಲ. ಹಾಗಾಗಿ ಬಿಜೆಪಿಯಿಂದ ಕಾನೂನುಗಳ ಉಲ್ಲಂಘನೆ ಸಾಧ್ಯವೇ ಇಲ್ಲ. ಸರ್ಕಾರದ ನಿರ್ಧಾರದ ಬಗ್ಗೆ ಯಾರಲ್ಲಾದರೂ ಆಕ್ಷೇಪಣೆಗಳಿದ್ದರೆ, ನ್ಯಾಯಾಲಯದ ಮೊರೆ ಹೋಗಲಿʼ ಎಂದು ಹೇಳಿದ್ದಾರೆ.

- ದೇವಜಿತ್‌ ಸರ್ಕಾರ್‌, ಪಶ್ಚಿಮ ಬಂಗಾಳ ಬಿಜೆಪಿ ವಕ್ತಾರ ನಿಯಮಗಳನ್ನು ಸಡಿಲಿಸುವ ಕುರಿತು ಆಲೋಚಿಸಬಹುದು. ಆದರೆ, ಬಹುಜನರ ಅಭಿಪ್ರಾಯಕ್ಕೆ ವಿರುದ್ಧವಾಗಿ ನಡೆಯಲು ಸಾಧ್ಯವಿಲ್ಲ. ಹೆಚ್ಚಿನ ಭಾರತೀಯರು ಹಸುವನ್ನು ಮಾತೆ ಎಂದು ಪರಿಗಣಿಸುತ್ತಾರೆ. ಹಸುಗಳನ್ನು ಪೂಜಿಸುವ ಕೋಟ್ಯಂತರ ಜನರಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Prajavani