ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ
ಪಶ್ಚಿಮ ಬಂಗಾಳ | ಜನರನ್ನು ಆತಂಕಕ್ಕೆ ನೂಕಿದ ಎಸ್‌ಐಆರ್: ಮತದಾನಕ್ಕಾಗಿ ಹೋರಾಟ...
ಒಂದು ಸಾಲಿನಲ್ಲಿಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಿಂದ ಲಕ್ಷಾಂತರ ಮಂದಿ ಹೆಸರು ಕಳೆದುಕೊಂಡಿದ್ದು, ಇದು ರಾಜ್ಯದಲ್ಲಿ ತೀವ್ರ ರಾಜಕೀಯ ಸಂಘರ್ಷ ಮತ್ತು ಆತಂಕಕ್ಕೆ ಕಾರಣವಾಗಿದೆ.ಪ್ರಮುಖ ಅಂಶಗಳು• ಮತದಾರರ ಪಟ್ಟಿ ಪರಿಷ್ಕರಣೆಚುನಾವಣಾ ಆಯೋಗವು 2025 ರ ನವೆಂಬರ್‌ನಿಂದ ಮತದಾರರ ಪಟ್ಟಿಯನ್ನು ಪರಿಷ್ಕರಿಸಿದ್ದು, ಈ ಪ್ರಕ್ರಿಯೆಯಲ್ಲಿ ಸುಮಾರು 91 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ.• ಸಾಮಾಜಿಕ ಹಾಗೂ ರಾಜಕೀಯ ಪರಿಣಾಮಮತದಾರರ ಪಟ್ಟಿಯಿಂದ ಹೆಸರು ಕಾಣೆಯಾದ ಕಾರಣ ಅನೇಕರು ಆತಂಕಕ್ಕೊಳಗಾಗಿದ್ದಾರೆ. ಅಧಿಕೃತ ದಾಖಲೆಗಳನ್ನು ಪಡೆಯಲು ಕಚೇರಿಗಳ ಮುಂದೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.• ಮಮತಾ ಬ್ಯಾನರ್ಜಿ ಆರೋಪಪರಿಷ್ಕರಣೆ ಪ್ರಕ್ರಿಯೆಯ ಒತ್ತಡ ಮತ್ತು ಅನಿಶ್ಚಿತತೆಯಿಂದ ರಾಜ್ಯದಲ್ಲಿ ಸುಮಾರು 220 ಜನರು ಮೃತಪಟ್ಟಿದ್ದಾರೆ ಎಂದು ಸಿಎಂ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.• ಚುನಾವಣಾ ಆಯೋಗದ ಸಮರ್ಥನೆನಕಲಿ ಮತದಾರರನ್ನು ತೆಗೆಯುವುದು ಮತ್ತು ಅರ್ಹರನ್ನು ಉಳಿಸಿಕೊಳ್ಳುವುದು ಕಾನೂನುಬದ್ಧ ಪ್ರಕ್ರಿಯೆ ಎಂದು ಆಯೋಗ ಸ್ಪಷ್ಟಪಡಿಸಿದ್ದು, ಸಾವುಗಳ ಕುರಿತ ಆರೋಪವನ್ನು ತಳ್ಳಿಹಾಕಿದೆ.• ಸಮುದಾಯಗಳ ಮೇಲಿನ ಪ್ರಭಾವಈ ಪ್ರಕ್ರಿಯೆಯಲ್ಲಿ ಅಲ್ಪಸಂಖ್ಯಾತರು ಹಾಗೂ ವಲಸಿಗ ಹಿಂದೂ ಮಾತುವಾ ಸಮುದಾಯದವರ ಹೆಸರುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಟ್ಟಿಯಿಂದ ಹೊರಬಿದ್ದಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.ಪ್ರಮುಖ ಅಂಕಿಅಂಶಗಳು91 ಲಕ್ಷಒಟ್ಟಾರೆ ತೆಗೆದುಹಾಕಲಾದ ಮತದಾರರ ಸಂಖ್ಯೆ57 ಲಕ್ಷಮಹಿಳಾ ಮತದಾರರ ಕಡಿತಶೇ. 8.3ಒಟ್ಟಾರೆ ತೆಗೆದುಹಾಕಲಾದ ಮತದಾರರ ಶೇಕಡಾವಾರು2025ರ ನವೆಂಬರ್ 4ಪರಿಷ್ಕರಣೆ ಆರಂಭದ ದಿನಾಂಕ220ಮಮತಾ ಬ್ಯಾನರ್ಜಿ ಆರೋಪಿತ ಸಾವುಗಳುಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ
'ನಿಮ್ಮಲ್ಲಿ ಎಷ್ಟು ಮಂದಿ ಮತದಾನದ ಹಕ್ಕನ್ನು ಕಳೆದುಕೊಂಡಿದ್ದೀರಿ?'.. ವೇದಿಕೆಯ ಮೇಲೆ ತಮ್ಮ ವಿಶಿಷ್ಟ ಶೈಲಿಯಲ್ಲಿ ಅತ್ತಿಂದಿತ್ತ ಹೆಜ್ಜೆ ಹಾಕುತ್ತಾ ಮಮತಾ ಬ್ಯಾನರ್ಜಿ ಕೇಳಿದರು. ಅಲ್ಲಿ ನೆರೆದಿದ್ದ ಜನಸಮೂಹದಲ್ಲಿ ಶೇ 60ಕ್ಕೂ ಅಧಿಕ ಮಂದಿ, ಅದರಲ್ಲಿ ಹೆಚ್ಚಿನ ಮಹಿಳೆಯರು ಕೈ ಎತ್ತಿದರು. ಇದನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ ಮಮತಾ, ಹಾಗಾದರೆ ಮತ ಹಾಕುವವರು ಯಾರು? ಎಂದು ಉದ್ಗರಿಸಿದರು.
ಮಾಲ್ಡಾದ ಎನಾಯತ್‌ಪುರದಲ್ಲಿ ನಡೆದ ತೃಣಮೂಲ ಕಾಂಗ್ರೆಸ್ ಸಮಾವೇಶದಲ್ಲಿ ಜರುಗಿದ ಈ ಘಟನೆ, ಎಸ್‌ಐಆರ್ ಜನಸಾಮಾನ್ಯರ ಮೇಲೆ ಎಂತಹ ಪರಿಣಾಮ ಬೀರಿದೆ ಎಂಬುದಕ್ಕೆ ಒಂದು ಉದಾಹರಣೆಯಾಗಿದೆ.
ಬಿರ್ಭೂಮ್ ಜಿಲ್ಲೆಯ ರಾಂಪುಹರ್ತ್‌ನಲ್ಲಿ ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಟ್ಟದ್ದನ್ನು ಪ್ರಶ್ನಿಸಿ ನೂರಾರು ಜನರು ನ್ಯಾಯಮಂಡಳಿಗೆ ಮನವಿ ಸಲ್ಲಿಸಲು ಕಚೇರಿಯ ಮುಂದೆ ಸಾಲುಗಟ್ಟಿ ನಿಂತಿದ್ದರು. ದಾಖಲೆಗಳನ್ನು ಒಂದು ಕಿಲೋಮೀಟರ್ ದೂರದ ಕಾಲೇಜಿನಲ್ಲಿ ಪಡೆಯಲಾಗುತ್ತಿದೆ ಎಂಬ ಸುದ್ದಿ ಇದ್ದಕ್ಕಿದ್ದಂತೆ ಹರಡಿತು. ಮೊದಲೇ ಹತಾಶರಾಗಿದ್ದ ಮಹಿಳೆಯರು ಮತ್ತು ಪುರುಷರು ಮತ್ತೆ ಅಲ್ಲಿಗೆ ಓಡಿದರು. ಕಾಲೇಜಿನ ಹೊರಗೆ ಜನಜಂಗುಳಿ ಉಂಟಾಯಿತು.
ಇನ್ನೂ ರಾಂಪುಹರ್ತ್‌ನಿಂದ 50 ಕಿಮೀ ದೂರದ ಸೂರಿಯ ಸ್ಥಿತಿ ಹೀಗೆ.. ಪರಿಷ್ಕರಣೆ ಪ್ರಾರಂಭವಾದಾಗಿನಿಂದ ಅವರು ಕೇಳಿದ ಎಲ್ಲಾ ದಾಖಲೆಗಳನ್ನು ನಾನು ಒಮ್ಮೆ ಅಲ್ಲ, ಮೂರು ಬಾರಿ ನೀಡಿದ್ದೇನೆ, ಆದರೂ ನನ್ನ ಹೆಸರು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ನಾಲ್ಕನೇ ಬಾರಿ ದಾಖಲೆಗಳನ್ನು ನೀಡಲು ಬೆಳಿಗ್ಗೆಯಿಂದಲೇ ಸಾಲಿನಲ್ಲಿ ನಿಂತಿದ್ದ ಮೀರಾ ದೋಲುಯಿ ಎಂಬುವವರು ಅಳಲು ತೋಡಿಕೊಂಡಿದ್ದಾರೆ. ಒಂದು ವೇಳೆ ಈಗಲೂ ನ್ಯಾಯಮಂಡಳಿ ನನ್ನ ಮನವಿಯನ್ನು ತಿರಸ್ಕರಿಸಿದರೆ, ನಾನು ಎಲ್ಲಿಗೆ ಹೋಗುತ್ತೇನೆಂದು ನನಗೆ ತಿಳಿದಿಲ್ಲಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟದ್ದನ್ನು ಪ್ರಶ್ನಿಸಿ ದಾಖಲೆಗಳನ್ನು ಸಲ್ಲಿಸಲು ತನುಜಾ ಬೀಬಿ ಎಂಬುವವರು, ದುಬ್ರಾಜ್‌ಪುರದಿಂದ ಸೂರಿಗೆ ಬಂದಿದ್ದರು. ದಾಖಲೆ ಸಲ್ಲಿಸಿದ ತಕ್ಷಣ ಅವರು ಪ್ರಜ್ಞೆ ತಪ್ಪಿ ಬಿದ್ದರು. ನಾವು ಸಾಲಿನಲ್ಲಿ ಕಾಯುತ್ತಿದ್ದಾಗಲೇ ನನ್ನ ಪತ್ನಿ ಅಸ್ವಸ್ಥಳಾದಳು ಎಂದು ಅವರ ಪತಿ ಮುಕಿಮ್ ಶೇಖ್ ಹೇಳಿದ್ದಾರೆ (ಇವರ ಹೆಸರನ್ನೂ ಪಟ್ಟಿಯಿಂದ ತೆಗೆದುಹಾಕಲಾಗಿದೆ). ಬಹಳ ಸಮಯದವರೆಗೆ ನಿಂತಿದ್ದರಿಂದ ಹೀಗಾಯಿತು. ಒಂದು ವೇಳೆ ಸಾವು ಸಾಲಿನಲ್ಲಿ ನಿಲ್ಲದೇ ಇದ್ದಲ್ಲಿ ಮತ್ತೊಂದು ದಿನ ದಿನ ಬರಬೇಕಾಗುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾದಿಯಾ ಜಿಲ್ಲೆಯ ಗರಪೋಟಾದ ಜೀಬನ್ ಕೃಷ್ಣ ಬಿಸ್ವಾಸ್ ಅವರು ಮುಂಜಾನೆ ತಮ್ಮ ಮಗಳು ಚಂಪಾ ಜೊತೆ ಮನೆಯಿಂದ ಹೊರಟಿದ್ದರು. ತಂದೆ-ಮಗಳಿಬ್ಬರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ನ್ಯಾಯಮಂಡಳಿಯ ಮುಂದೆ ಮನವಿ ಸಲ್ಲಿಸಿ ತಮ್ಮ ಮತದಾನದ ಹಕ್ಕನ್ನು ಮರಳಿ ಪಡೆಯಲು ಅವರು, ನಡೆದುಕೊಂಡು, ಆಟೋರಿಕ್ಷಾ ಹತ್ತಿ ಬಲಿಕ ರೈಲಿನಲ್ಲಿ ರಾಣಾಘಾಟ್ ತಲುಪಿದರು. ಅವರು ಮನವಿ ಸಲ್ಲಿಸುವ ಮೊದಲೇ ಜೀಬನ್ ಅವರಿಗೆ ಹೃದಯಾಘಾತವಾಯಿತು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. 68 ವರ್ಷದ ಇವರು ಕುಟುಂಬವನ್ನು ಸಾಕಿ ಸಲಹಲು ನಿರ್ಮಾಣ ಸ್ಥಳವೊಂದರಲ್ಲಿ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದರು. ತಮ್ಮ ಜೀವನದಲ್ಲಿ ಅನೇಕ ಚುನಾವಣೆಗಳಲ್ಲಿ ಮತ ಚಲಾಯಿಸಿದ್ದ ಅವರು, ಕೊನೆಗೆ ಆ ಹಕ್ಕು ಇಲ್ಲದೆಯೇ ಮೃತಪಟ್ಟರು.
ಇದು ಕೇವಲ ಅವರೊಬ್ಬರ ಕತೆಯಲ್ಲ. ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕಣ್ಮರೆಯಾಗಿರುವುದನ್ನು ಕಂಡು ಬೀರ್‌ಭೂಮ್‌ನ ನಲ್ಹಾಟಿಯಲ್ಲಿರುವ ಅನಾಹರ್ ಶೇಖ್ (32) ಎಂಬುವವರು ಕಳೆದ ವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಾಲ್ಡಾದ ಸಹಾಪುರದಲ್ಲಿ ಕಾಬಿಲ್ ಶೇಖ್ (37) ಕೂಡ ಆತ್ಮಹತ್ಯೆ ಶರಣಾಗಿದ್ದಾರೆ. ಕಳೆದ ಎರಡು ವಾರಗಳಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟ ಕಾರಣ ಸಂಬಂಧ ರಾಜ್ಯದಲ್ಲಿ ಇನ್ನೂ ನಾಲ್ಕು ಸಾವುಗಳು ವರದಿಯಾಗಿವೆ.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ಪಶ್ಚಿಮ ಬಂಗಾಳದಾದ್ಯಂತ ಸುಮಾರು 220 ಜೀವಗಳನ್ನು ಬಲಿ ಪಡೆದಿದೆ ಎಂದು ಮಮತಾ ಆರೋಪಿಸಿದ್ದಾರೆ. ಆದರೆ ಚುನಾವಣಾ ಆಯೋಗವು ಈ ಹೇಳಿಕೆಯನ್ನು ಅಲ್ಲಗಳೆದಿದೆ.
ಮಮತಾ ಬ್ಯಾನರ್ಜಿ ಸುಳ್ಳು ಹೇಳುತ್ತಿದ್ದಾರೆ ಮತ್ತು ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಕೆಲಸಕ್ಕೆ ಅಡ್ಡಿಪಡಿಸಲು ಸಹಜ ಸಾವುಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಚುನಾವಣಾ ಆಯೋಗವು 2025ರ ನವೆಂಬರ್ 4 ರಂದು ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಯನ್ನು ಪ್ರಾರಂಭಿಸಿತು. ಪರಿಷ್ಕರಣೆ ಆರಂಭವಾಗುವ ಮೊದಲು 7.66 ಕೋಟಿ ಇದ್ದ ಮತದಾರರ ಸಂಖ್ಯೆ, ಡಿಸೆಂಬರ್ 16 ರಂದು ಮೊದಲ ಹಂತದ ಮೊದಲ ಹಂತದ ಪರಿಷ್ಕರಣೆ ಮುಗಿಯುವಷ್ಟರಲ್ಲಿ 7.08 ಕೋಟಿಗೆ ಇಳಿಯಿತು. ಸುಮಾರು 58 ಲಕ್ಷ ಹೆಸರುಗಳನ್ನು ಮನೆ ಬಿಟ್ಟು ಹೋದವರು, ಸ್ಥಳಾಂತರಗೊಂಡವರು, ಮೃತಪಟ್ಟವರು ಮತ್ತು ನಕಲಿ ಮತದಾರರು ಎಂಬ ಕಾರಣ ನೀಡಿ ಎಂದು ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಪ್ರಮುಖ ಅಂಕಿಅಂಶಗಳುಸುಮಾರು 91 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ.
ಮತದಾರರ ಸಂಖ್ಯೆಯ ಇಳಿಕೆ: ಪರಿಷ್ಕರಣೆಯ ಮೊದಲು 7.66 ಕೋಟಿ ಇದ್ದ ಮತದಾರರ ಸಂಖ್ಯೆ, ಈಗ 6.77 ಕೋಟಿಗೆ ಕುಸಿದಿದೆ.
ಮಹಿಳಾ ಮತದಾರರ ಮೇಲೆ ಪರಿಣಾಮ: ತೆಗೆದುಹಾಕಲಾದವರಲ್ಲಿ ಸುಮಾರು 57 ಲಕ್ಷ ಮಂದಿ ಮಹಿಳೆಯರು.
2025ರ ಡಿಸೆಂಬರ್ 27ರಂದು ಪ್ರಾರಂಭವಾದ ಎರಡನೇ ಹಂತದಲ್ಲಿ, ಪರಿಶೀಲನೆಯಲ್ಲಿದ್ದ 1.67 ಕೋಟಿ ಮತದಾರರನ್ನು ವಿಚಾರಣೆಗೆ ಕರೆಯಲಾಯಿತು. ಇದರಲ್ಲಿ 1.36 ಕೋಟಿ ಮಂದಿಯನ್ನು ತಾರ್ಕಿಕ ವ್ಯತ್ಯಾಸಗಳಿಗಾಗಿ (logical discrepancies) ಗುರುತಿಸಲಾಗಿತ್ತು ಮತ್ತು 31 ಲಕ್ಷ ಮಂದಿಯ ವಿವರಗಳು 2002 ರ ಮತದಾರರ ಪಟ್ಟಿಯ ದಾಖಲೆಗಳೊಂದಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಗುರುತಿಸಲಾಗಿತ್ತು.
ಆಯೋಗವು ಫೆಬ್ರವರಿ 28 ರಂದು ಪ್ರಕ್ರಿಯೆಯ ಕೊನೆಯಲ್ಲಿ ಮತ್ತೊಂದು ಪಟ್ಟಿಯನ್ನು ಪ್ರಕಟಿಸಿತು. ಇದರಲ್ಲಿ ಒಟ್ಟಾರೆಯಾಗಿ ಸುಮಾರು 63.66 ಲಕ್ಷ ಮತದಾರರನ್ನು (ಅಂದರೆ ಸುಮಾರು ಶೇ. 8.3 ರಷ್ಟು ಮತದಾರರನ್ನು) ತೆಗೆದುಹಾಕಲಾಯಿತು.
ಏಪ್ರಿಲ್ 6 ಮತ್ತು 7 ರಂದು ಬಿಡುಗಡೆಯಾದ ಚುನಾವಣಾ ಆಯೋಗದ ಅಂಕಿಅಂಶಗಳು 'ನಿರ್ಣಯದ ಅಡಿ ' ವರ್ಗದಲ್ಲಿದ್ದ 27 ಲಕ್ಷಕ್ಕೂ ಹೆಚ್ಚು ಜನರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಹೇಳಿವೆ.
ಪರಿಣಾಮಗಳು
ಮತದಾರರ ಪಟ್ಟಿಯಲ್ಲಿತಮ್ಮ ಹೆಸರು ಕಣ್ಮರೆಯಾದ ಆಘಾತ ಮತ್ತು ಅದನ್ನು ಸರಿಪಡಿಸಲು ಅರ್ಜಿ ಸಲ್ಲಿಸುವ ವೇಳೆ ಸುಮಾರು 220 ಸಾವುಗಳು ಸಂಭವಿಸಿವೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಇದರಲ್ಲಿ ಹೃದಯಾಘಾತ ಮತ್ತು ಆತ್ಮಹತ್ಯೆಯ ಪ್ರಕರಣಗಳೂ ಸೇರಿವೆ.
ಗುರಿ ಮಾಡಲಾದ ಸಮುದಾಯಗಳು: ಕೋಲ್ಕತ್ತಾದ ಸಬರ್ ಸಂಸ್ಥೆಯ ಅಧ್ಯಯನದ ಪ್ರಕಾರ, ನಂದಿಗ್ರಾಮ ಮತ್ತು ಭವಾನಿಪುರದಂತಹ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತದಾರರ ಹೆಸರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆಗೆದುಹಾಕಲಾಗಿದೆ.
ರಾಜಕೀಯ ಸಂಘರ್ಷ
ಬಿಜೆಪಿ ಲಾಭಕ್ಕಾಗಿ ಚುನಾವಣಾ ಆಯೋಗವು ಈ ಕೆಲಸ ಮಾಡುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.
ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಮತ್ತು ನಕಲಿ ಮತದಾರರನ್ನು ತೆಗೆದುಹಾಕಲು ಇದು ಅಗತ್ಯವಾದ ಪ್ರಕ್ರಿಯೆ ಎಂದು ಬಿಜೆಪಿ ಹೇಳಿದೆ.
ಹಿಂದೂ ಮತ್ತು ಮಾತುವಾ ಸಮುದಾಯದ ಅಸಮಾಧಾನ
ವರದಿಯ ಪ್ರಕಾರ, ಮತದಾರರ ಪಟ್ಟಿಯಿಂದ ಕೈಬಿಡಲಾದ 91 ಲಕ್ಷ ಮತದಾರರಲ್ಲಿ 57 ಲಕ್ಷ ಹಿಂದೂಗಳು ಮತ್ತು 31 ಲಕ್ಷ ಮುಸ್ಲಿಮರು ಇದ್ದಾರೆ. ಬಾಂಗ್ಲಾದೇಶದಿಂದ ವಲಸೆ ಬಂದಿದ್ದ ಹಿಂದೂ ಮಾತುವಾ ಸಮುದಾಯದವರ ಹೆಸರುಗಳೂ ಕಣ್ಮರೆಯಾಗಿರುವುದು ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ.

