Dailyhunt Logo
  • Light mode
    Follow system
    Dark mode
    • Play Story
    • App Story
ಪಶ್ಚಿಮ ಏಷ್ಯಾದ ಸಂಘರ್ಷ: ತಾಯ್ನಾಡಿಗೆ ಮರಳುತ್ತಿರುವ 1,171 ಭಾರತೀಯರು

ಪಶ್ಚಿಮ ಏಷ್ಯಾದ ಸಂಘರ್ಷ: ತಾಯ್ನಾಡಿಗೆ ಮರಳುತ್ತಿರುವ 1,171 ಭಾರತೀಯರು

ವದೆಹಲಿ: ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಇರಾನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳ ಪೈಕಿ 1,171 ಜನರು ಅರ್ಮೇನಿಯಾ ಮತ್ತು ಅಜರ್‌ಬೈಜಾನ್‌ ಭೂ ಗಡಿ ದಾಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಬುಧವಾರ ತಿಳಿಸಿದೆ.

'ಟೆಹರಾನ್‌ನಲ್ಲಿರುವ ನಮ್ಮ ರಾಯಭಾರ ಕಚೇರಿಯು 818 ವಿದ್ಯಾರ್ಥಿಗಳು ಸೇರಿದಂತೆ 1,171 ಭಾರತೀಯ ಪ್ರಜೆಗಳು ಭೂ ಗಡಿ ಮೂಲಕ ಇರಾನ್‌ನಿಂದ ನಿರ್ಗಮಿಸಲು ಅನುಕೂಲ ಮಾಡಿಕೊಟ್ಟಿದೆ.

ಅಲ್ಲಿಂದ ನಮ್ಮ ಪ್ರಜೆಗಳು ಭಾರತಕ್ಕೆ ಮರಳುತ್ತಿದ್ದಾರೆ' ಎಂದು ಎಂಇಎ ವಕ್ತಾರ ರಣಧೀರ್‌ ಜೈಸ್ವಾಲ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅರ್ಮೇನಿಯಾ ಭೂ ಗಡಿಯನ್ನು 977 ಹಾಗೂ ಅಜರ್‌ಬೈಜಾನ್‌ ಅನ್ನು 194 ಜನರು ದಾಟಿದ್ದಾರೆ ಎಂದು ಅವರು ವಿವರಿಸಿದರು.

ಯುಎಇ ಅಲ್ಲಿ ಮಂಗಳವಾರ ನಡೆದ ದಾಳಿಗಳಲ್ಲಿ ಮೂವರು ಭಾರತೀಯರು ಗಾಯಗೊಂಡಿದ್ದಾರೆ ಎಂದೂ ಎಂಇಎ ಹೇಳಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani