Sunday, 24 Jan, 11.55 am ಪ್ರಜಾವಾಣಿ

ರಾಷ್ಟ್ರೀಯ
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ!

ನವದೆಹಲಿ: ಹಣದುಬ್ಬರದ ಪರಿಣಾಮದಿಂದ ಜನರು ದಿನೇ ದಿನೇ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದರೆ, ಮೋದಿ ಸರ್ಕಾರ ತೆರಿಗೆ ಸಂಗ್ರಹದಲ್ಲಿ ನಿರತವಾಗಿದೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ದರ ತೀವ್ರ ಏರಿಕೆ ಕುರಿತಂತೆ ಅವರು ಕೇಂದ್ರದ ಧೋರಣೆಯನ್ನು ತರಾಟೆಗೆ ತೆಗೆದುಕೊಂಡರು.

ಪೆಟ್ರೋಲ್ ಮತ್ತು ಡೀಸೆಲ್ ದರ ಗರಿಷ್ಠ ಹಂತ ತಲುಪಿದ ಹಿಂದೆಯೇ ವಾಗ್ದಾಳಿ ನಡೆಸಿರುವ ಅವರು, ಮೋದಿ ಸರ್ಕಾರ 'ಜಿಡಿಪಿ'ಯಲ್ಲಿ ಅಂದರೆ ಗ್ಯಾಸ್‌, ಡೀಸೆಲ್, ಪೆಟ್ರೋಲ್ ದರ ಏರಿಕೆಯಲ್ಲಿ ಗಣನೀಯ ಸಾಧನೆ ಮಾಡಿದೆ ಎಂದು ಟ್ವೀಟ್‌ ಮಾಡಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್‌ ದರ ಶನಿವಾರ ಗರಿಷ್ಠ ಹಂತ ತಲುಪಿತ್ತು. ಪೆಟ್ರೋಲ್‌ ದೆಹಲಿಯಲ್ಲಿ ₹ 85.70 ಇದ್ದರೆ, ಮುಂಬೈನಲ್ಲಿ ₹ 92.28 ಆಗಿತ್ತು. ಡೀಸೆಲ್ ದರ ದೆಹಲಿಯಲ್ಲಿ ₹ 75.88 ಹಾಗೂ ಮುಂಬೈನಲ್ಲಿ ₹ 82.66ಕ್ಕೆ ತಲುಪಿತ್ತು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top