ಮೈಸೂರು: ಇಲ್ಲಿನ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಜಿಎಸ್‌ಟಿ ಆಯುಕ್ತಾಲಯದಿಂದ 'ಜಿಎಸ್‌ಟಿ ದಿನ-2026ರ ಪ್ರಯುಕ್ತ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ.
ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪಿ.ಧನುಷ್, ಎನ್.ಎಸ್.
ಪ್ರಿಯಾಂಕಾ, ಎಂ.ಆರ್. ಪ್ರಣತಿ ಪ್ರಬಂಧ ಸ್ಪರ್ಧೆಯಲ್ಲಿ ಕ್ರಮವಾಗಿ ಮೊದಲ ಮೂರು ಬಹುಮಾನ ಗಳಿಸಿದ್ದಾರೆ.
ಘೋಷವಾಕ್ಯ ಬರವಣಿಗೆ ಸ್ಪರ್ಧೆಯಲ್ಲಿ ಎಂ.ವಿದ್ಯಾಶ್ರೀ (ಪ್ರಥಮ), ಎಂ.ಮೇಘನಾ (ದ್ವಿತೀಯ) ಹಾಗೂ ಎಂ.ಆರ್. ಪ್ರಣತಿ (ತೃತೀಯ) ಬಹುಮಾನ ಪಡೆದಿದ್ದಾರೆ.
ಅವರಿಗೆ ಬುಧವಾರ ಸಿದ್ಧಾರ್ಥನಗರದ ಜಿಎಸ್‌ಟಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.
ಅವರನ್ನು ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ, ಪ್ರಾಂಶುಪಾಲ ಎಂ.ಪ್ರಭು ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥ ಎನ್.ದಿಲೀಪ್ ಶನಿವಾರ ಅಭಿನಂದಿಸಿದರು.

