Dailyhunt Logo
  • Light mode
    Follow system
    Dark mode
    • Play Story
    • App Story
ಪ್ರಧಾನ್ ಆಯ್ತು ಮುಂದಿನ ರಾಜೀನಾಮೆ ಇವರದ್ದೇ... ಹರಿದಾಡಿದ ಮೀಮ್‌ಗಳು

ಪ್ರಧಾನ್ ಆಯ್ತು ಮುಂದಿನ ರಾಜೀನಾಮೆ ಇವರದ್ದೇ... ಹರಿದಾಡಿದ ಮೀಮ್‌ಗಳು

ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ದೇಶದಾದ್ಯಂತ ವಿದ್ಯಾರ್ಥಿಗಳು ನಡೆಸುತ್ತಿದ್ದ ಹೋರಾಟಕ್ಕೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪ್ರಧಾನ್ ರಾಜೀನಾಮೆಯನ್ನು ವಿದ್ಯಾರ್ಥಿಗಳು ಸಂಭ್ರಮಿಸಿದ್ದು, ಜಂತರ್ ಮಂತರ್‌ನಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಕ್ರೋಚ್ ಜನತಾ ಪಕ್ಷದ ನಾಯಕ ಅಭಿಜಿತ್ ದೀಪ್ಕೆ, 'ಇದು ಚಳವಳಿಗೆ ಸಿಕ್ಕ ಗೆಲುವು' ಎಂದಿದ್ದಾರೆ.

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸುದ್ದಿ ಹೊರಬೀಳುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ತರಹೇವಾರಿ ಮೀಮ್ಸ್‌ಗಳು ಹರಿದಾಡುತ್ತಿವೆ. ಧರ್ಮೇಂದ್ರ ಪ್ರಧಾನ್ ಆಯ್ತು ಮುಂದೆ ರಾಜೀನಾಮೆ ನೀಡುವವರು ನಿತಿನ್‌ ಗಡ್ಕರಿ ಎಂದು ಫೋಟೊ ಹಂಚಿಕೊಂಡು ಟ್ರೋಲ್ ಮಾಡಲಾಗುತ್ತಿದೆ.

ಪ್ರಧಾನ್ ರಾಜೀನಾಮೆ ನೀಡಿದ ನಂತರ ವಿದ್ಯಾರ್ಥಿಗಳ ಸಂಭ್ರಮಾಚರಣೆ ಎನ್ನುವುದಕ್ಕೆ 'ಜೆನ್‌ ಝೀಗಳು ಈಗ' ಎಂದು ಮೀಮ್ ಹರಿಬಿಡಲಾಗಿದೆ

ಇದನ್ನೇ ಲೆಕ್ಕದ ರೂಪದಲ್ಲೂ ಟ್ರೋಲ್ ಮಾಡಿರುವ ನೆಟ್ಟಿಗರು, 'ಧರ್ಮೇಂದ್ರ ಪ್ರಧಾನ್ ಅವರು 25ರಂದು ರಾಜೀನಾಮೆ ನೀಡಿದರು 2 + 5 = 7 ಮತ್ತು 2026ರ 7ನೇ ತಿಂಗಳಲ್ಲಿ' ಎಂದಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani