Dailyhunt Logo
  • Light mode
    Follow system
    Dark mode
    • Play Story
    • App Story
ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯ ಪರಿಹಾರದ ಚೆಕ್ ವಿತರಣೆ

ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯ ಪರಿಹಾರದ ಚೆಕ್ ವಿತರಣೆ

ಹುಣಸಗಿ: 'ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ಭದ್ರತೆ ಒದಗಿಸುವ ಜನಪರ ಯೋಜನೆಯಾಗಿದೆ' ಎಂದು ಶಾಖಾ ವ್ಯವಸ್ಥಾಪಕ ಸಂಗಮೇಶ ನಾಯಕ ಹೇಳಿದರು.

ತಾಲ್ಲೂಕಿನ ಬಲಶೆಟ್ಟಿಹಾಳ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯಡಿ ಪರಿಹಾರದ ಚೆಕ್‌ಅನ್ನು ವಿತರಿಸಿ ಅವರು ಮಾತನಾಡಿದರು.

'ಬಲಶೆಟ್ಟಿಹಾಳ ಗ್ರಾಮದಲ್ಲಿ ಈಚೆಗೆ ನಿಧನ ಹೊಂದಿದ ವಿಮಾದಾರ ತಿಪ್ಪಣ್ಣ ಜೋಗಿನ ಅವರ ಪತ್ನಿ ಪರಮವ್ವ ಜೋಗಿನ ಅವರಿಗೆ ₹2 ಲಕ್ಷ ವಿಮಾ ಪಾವತಿಯಾಗಿದೆ' ಎಂದರು.

'ಕುಟುಂಬದ ಮುಖ್ಯಸ್ಥರ ಅಕಾಲಿಕ ಮರಣದ ಸಂದರ್ಭದಲ್ಲಿ ಕುಟುಂಬಕ್ಕೆ ಆರ್ಥಿಕ ನೆರವು ದೊರೆಯುವಂತೆ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಗ್ರಾಮೀಣ ಭಾಗದ ಜನರು ಇಂತಹ ವಿಮಾ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು' ಎಂದರು.

ಶಿಕ್ಷಕ ವ್ಹಿ.ಎಂ. ಬೆಳ್ಳುಬ್ಬಿ ಮಾತನಾಡಿ,'ಬಡ ಮಧ್ಯಮ ವರ್ಗದ ಕುಟುಂಬಗಳಿಗೆ ವಿಮಾ ಯೋಜನೆಗಳು ಸಂಕಷ್ಟದ ಸಮಯದಲ್ಲಿ ಆಸರೆಯಾಗುತ್ತವೆ. ಬ್ಯಾಂಕ್‌ನ ಗ್ರಾಹಕರು ವಿಮಾ ಯೋಜನೆಯ ಕಂತು ಪಾವತಿಸಬೇಕು' ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ತಿಪ್ಪಣ್ಣಗೌಡ ಬಿರಾದಾರ, ಶಿವಾನಂದ ಹಿರೇಮಠ, ರವಿ ಕುಲಕರ್ಣಿ ಕಾಮನಟಗಿ, ಬ್ಯಾಂಕ್ ಸಿಬ್ಬಂದಿ ಮನೋಜ ಜಾಧವ ಹಾಗೂ ಗ್ರಾಮಸ್ಥರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-30-1706612577

Dailyhunt
Disclaimer: This content has not been generated, created or edited by Dailyhunt. Publisher: Prajavani