ಕರಾವಳಿ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಆದಂತಹ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿರುವ ನಟ ಮಿತ್ರ ಈ ಗಲಾಟೆ ಆಗಿರುವ ವಿಷಯ ಪ್ರಜ್ವಲ್‌ಗೆ ಗೊತ್ತಿರುವ ಸಾಧ್ಯತೆ ಕಡಿಮೆ ಇದೆ. ಈ ಗಲಾಟೆಗೂ ಹಾಗೂ ಪ್ರಜ್ವಲ್‌ಗೂ ಸಂಬಂಧವಿಲ್ಲ ಎಂದರು.
ಹಾಗೆ ಚಿತ್ರದಲ್ಲಿ ಪ್ರಜ್ವಲ್ ಧ್ವನಿ ಇಲ್ಲ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸದ ಅವರು ಪಾತ್ರಕ್ಕೂ ಅವರ ಧ್ವನಿಗೂ ಹೊಂದಿಕೆಯಾಗುತ್ತಿಲ್ಲ ಎನ್ನುವ ಕಾರಣಕ್ಕೇ ಬೇರೆಯವರಿಂದ ಡಬ್ ಮಾಡಿಸಿದ್ದಾರೆ ಎಂದು ನಿರ್ದೇಶಕರು ಹೇಳಿದರು.

