ಫಿಫಾ ವಿಶ್ವಕಪ್ ಟೂರ್ನಿಯ '32ರ ಘಟ್ಟದ' ಪಂದ್ಯಗಳು ಮುಕ್ತಾಯವಾಗಿವೆ. ಹ್ಯೂಸ್ಟನ್ ಕ್ರೀಡಾಂಗಣದಲ್ಲಿ ಕೆನಡಾ - ಮೊರಾಕ್ಕೊ ಪಂದ್ಯವು ಇಂದು ರಾತ್ರಿ 10.30ಕ್ಕೆ ಆರಂಭವಾಗುವುದರೊಂದಿಗೆ '16ರ ಸುತ್ತಿನ' ಪಂದ್ಯಗಳಿಗೆ ಚಾಲನೆ ದೊರೆಯಲಿದೆ.
ದಿನಗಳುರುಳಿ ಉಪಾಂತ್ಯಕ್ಕೆ ಹತ್ತಿರವಾಗುತ್ತಿದ್ದಂತೆ, ಪ್ರತಿ ಪಂದ್ಯದಲ್ಲಿಯೂ ಹೋರಾಟದ ಕಾವು, ತೀವ್ರ ಪೈಪೋಟಿ ಹೆಚ್ಚಾಗುತ್ತಿದೆ.
ಪ್ರತಿ ತಂಡಗಳೂ ಛಲ ಬಿಡದೆ ಕೊನೆವರೆಗೂ ಹೋರಾಟ ನಡೆಸುತ್ತಿವೆ. ಈ ತಲೆಮಾರಿನ ಸೂಪರ್‌ಸ್ಟಾರ್‌ಗಳಾದ ಕ್ರಿಸ್ಟಿಯಾನೊ ರೊನಾಲ್ಡೊ ಅವರಿರುವ ಪೋರ್ಚುಗಲ್, ಲಯೊನೆಲ್ ಮೆಸ್ಸಿಯ ಅರ್ಜೆಂಟೀನಾ, ಕಿಲಿಯನ್ ಎಂಬಾಪೆ ಇರುವ ಫ್ರಾನ್ಸ್, ಎರ್ಲಿಂಗ್ ಹಾಲೆಂಡ್ ಅವರ ನಾರ್ವೆ, ಹ್ಯಾರಿ ಕೇನ್ ಅವನ್ನೊಳಗೊಂಡ ಇಂಗ್ಲೆಂಡ್ '16ರ' ಸುತ್ತಿನಲ್ಲಿ ಪೈಪೋಟಿ ನಡೆಸಲಿವೆ.
ಯಾರಿಗೆ ಯಾರು ಎದುರಾಳಿ?
ಕೆನಡಾ vs ಮೊರಾಕ್ಕೊ: ಜುಲೈ 4
ಪೆರುಗ್ವೆ vs ಫ್ರಾನ್ಸ್: ಜುಲೈ 5
ಬ್ರೆಜಿಲ್ vs ನಾರ್ವೆ: ಜುಲೈ 6
ಮೆಕ್ಸಿಕೊ vs ಇಂಗ್ಲೆಂಡ್: ಜುಲೈ 6
ಪೋರ್ಚುಗಲ್ vs ಸ್ಪೇನ್: ಜುಲೈ 7
ಯುಎಸ್‌ಎ vs ಬೆಲ್ಜಿಯಂ: ಜುಲೈ 7
ಅರ್ಜೆಂಟೀನಾ vs ಈಜಿಪ್ಟ್: ಜುಲೈ 7
ಸ್ವಿಟ್ಜರ್ಲೆಂಡ್ vs ಕೊಲೊಂಬಿಯಾ: ಜುಲೈ 8
ಫೈನಲ್ ಯಾವಾಗ?
ಜುಲೈ 10ರಂದು ಆರಂಭವಾಗಲಿರುವ ಕ್ವಾರ್ಟರ್‌ಫೈನಲ್ ಪಂದ್ಯಗಳು, ಜುಲೈ 12ರಂದು ಕೊನೆಗೊಳ್ಳಲಿವೆ. ಜುಲೈ 15 ಹಾಗೂ 16ರಂದು ಕ್ರಮವಾಗಿ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಉಪಾಂತ್ಯದಲ್ಲಿ ಸೋಲುವ ತಂಡಗಳು ಜುಲೈ 19ರಂದು ಮೂರನೇ ಸ್ಥಾನಕ್ಕಾಗಿ ಪೈಪೊಟಿ ನಡೆಸಲಿವೆ. ಮರುದಿನ (ಜುಲೈ 20) ನ್ಯೂಯಾರ್ಕ್‌ನಲ್ಲಿ ಫೈನಲ್ ನಡೆಯಲಿದೆ.
2022ರ ಆವೃತ್ತಿಯಲ್ಲಿ ಅರ್ಜೆಂಟೀನಾ ಚಾಂಪಿಯನ್ ಎನಿಸಿತ್ತು. ಫ್ರಾನ್ಸ್ ರನ್ನರ್ಸ್‌ಅಪ್ ಆದರೆ, ಕೊಯೇಷ್ಯಾ ಮೂರನೇ ಸ್ಥಾನ ಪಡೆದಿತ್ತು.

