Dailyhunt Logo
  • Light mode
    Follow system
    Dark mode
    • Play Story
    • App Story
ಪೂರ್ವ ರೈಲ್ವೆ ವಿಭಾಗ: ಡಿಸೆಂಬರ್‌ 2ರಿಂದ ಪ್ರಯಾಣಿಕರ ರೈಲ್ವೆ ಸೇವೆ ಆರಂಭ

ಪೂರ್ವ ರೈಲ್ವೆ ವಿಭಾಗ: ಡಿಸೆಂಬರ್‌ 2ರಿಂದ ಪ್ರಯಾಣಿಕರ ರೈಲ್ವೆ ಸೇವೆ ಆರಂಭ

ಕೋಲ್ಕತ್ತ: ಡಿಸೆಂಬರ್‌ 2ರಿಂದ 54 ರೈಲುಗಳೊಂದಿಗೆ ಪ್ರಯಾಣಿಕರ ರೈಲ್ವೆ ಸೇವೆಯನ್ನು ಪುನರಾರಂಭಿಸಲು ಪೂರ್ವ ರೈಲ್ವೆ ವಿಭಾಗ ನಿರ್ಧರಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು.

ಕೋವಿಡ್‌ನಿಂದಾಗಿ ಈ ವರ್ಷದ ಮಾರ್ಚ್‌ ತಿಂಗಳಲ್ಲಿ ಪ್ರಯಾಣಿಕರ ರೈಲ್ವೆ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಡಿಸೆಂಬರ್‌ 2ರಂದು ಪ್ರಯಾಣಿಕರ ರೈಲ್ವೆ ಸೇವೆಯನ್ನು ಪುನರಾರಂಭಿಸಲು ಪೂರ್ವ ರೈಲ್ವೆ ವಿಭಾಗ ಮುಂದಾಗಿದೆ.

ಹೌರಾ ವಿಭಾಗದಲ್ಲಿ 30 ರೈಲುಗಳು, ಅಸನ್ಸೋಲಾ ವಿಭಾಗದಲ್ಲಿ 22 ರೈಲುಗಳು ಮತ್ತು ಮಾಲ್ಡಾ ವಿಭಾಗದಲ್ಲಿ ಎರಡು ರೈಲುಗಳು ಸಂಚರಿಸಲಿವೆ ಎಂದು ಪೂರ್ವ ರೈಲ್ವೆ ವಿಭಾಗದ ವಕ್ತಾರರು ತಿಳಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Prajavani