Dailyhunt Logo
  • Light mode
    Follow system
    Dark mode
    • Play Story
    • App Story
ಪುಷ್ಪಕ ವಿಮಾನಕ್ಕೆ ವಿಜ್ಞಾನದ ಸ್ಪರ್ಶ

ಪುಷ್ಪಕ ವಿಮಾನಕ್ಕೆ ವಿಜ್ಞಾನದ ಸ್ಪರ್ಶ

ರಣ್‌ಬೀರ್‌ ಕಪೂರ್‌ ಅಭಿನಯದ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾ ನವೆಂಬರ್‌ 5ರಂದು ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಪುಷ್ಪಕ ವಿಮಾನದ ವಿನ್ಯಾಸದ ಕುರಿತು ನಿರ್ದೇಶಕ ನಿತೇಶ್‌ ತಿವಾರಿ ಮಾತನಾಡಿದ್ದಾರೆ.

'ಸಿನಿಮಾದಲ್ಲಿ ಬಳಸಿರುವ ತಾವರೆ ಹೂವಿನ ವಿನ್ಯಾಸದ ಪುಷ್ಪಕ ವಿಮಾನಕ್ಕಾಗಿ 40ರಿಂದ 50 ವಿನ್ಯಾಸಗಳನ್ನು ಪರಿಶೀಲಿಸಿದ್ದೆವು.

ಸೀತೆಯ ಅಪಹರಣದ ಸಂದರ್ಭದಲ್ಲಿ ರಾವಣ ಮತ್ತು ಜಟಾಯು ನಡುವಿನ ಯುದ್ಧದ ದೃಶ್ಯವನ್ನೂ ಇದೇ ವಿಮಾನದ ವಿನ್ಯಾಸವನ್ನು ಆಧರಿಸಿ ರೂಪಿಸಲಾಗಿದೆ. ಪುಷ್ಪಕ ವಿಮಾನವನ್ನು ಕೇವಲ ಹಾರುವ ರಥವಾಗಿ ನೋಡುವ ಬದಲು, ಅದರ ಹಿಂದಿನ ವಿಜ್ಞಾನಕ್ಕೆ ಆದ್ಯತೆ ನೀಡಿದ್ದೇವೆ. ಆ ಕಾಲದಲ್ಲಿ ನಡೆದ ಘಟನೆಗಳ ಹಿಂದೆಯೂ ವಿಜ್ಞಾನವಿತ್ತು ಎಂಬುದನ್ನು ನಾವು ನಂಬುತ್ತೇವೆ' ಎಂದು ಅವರು ಹೇಳಿದ್ದಾರೆ.

ನಮಿತ್‌ ಮಲ್ಹೋತ್ರಾ ಅವರ ಪ್ರೈಮ್‌ ಫೋಕಸ್‌ ಸ್ಟುಡಿಯೋಸ್‌ ಮತ್ತು ಯಶ್‌ ಅವರ ಮಾನ್‌ಸ್ಟರ್‌ ಮೈಂಡ್‌ ಕ್ರಿಯೇಷನ್ಸ್‌ ಜಂಟಿಯಾಗಿ ಚಿತ್ರವನ್ನು ನಿರ್ಮಿಸಿವೆ. ಚಿತ್ರದಲ್ಲಿ ಯಶ್‌ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ವಿಎಫ್‌ಎಕ್ಸ್‌ ಸಂಸ್ಥೆ ಡಿಎನ್‌ಇಜಿ ಚಿತ್ರದ ತಾಂತ್ರಿಕ ಕೆಲಸಗಳಲ್ಲಿ ಕೈಜೋಡಿಸಿದೆ. ಶ್ರೀಧರ್‌ ರಾಘವನ್‌ ಚಿತ್ರಕಥೆ ಬರೆದಿದ್ದು, ಹ್ಯಾನ್ಸ್‌ ಜಿಮ್ಮರ್‌ ಮತ್ತು ಎ.ಆರ್‌. ರೆಹಮಾನ್‌ ಸಂಗೀತ ಸಂಯೋಜಿಸಿದ್ದಾರೆ.v

ಇಲಾನ್‌ ಮಸ್ಕ್‌ ಇತ್ತೀಚೆಗೆ ಹಾರುವ ಕಾರನ್ನು ನಿರ್ಮಿಸಿದರು. ಆದರೆ ಭಾರತದಲ್ಲಿ ಐದು ಸಾವಿರ ವರ್ಷಗಳ ಹಿಂದೆಯೇ ಹಾರುವ ರಥ 'ಪುಷ್ಪಕ ವಿಮಾನ' ಇತ್ತು

ರಣ್‌ಬೀರ್‌ ಕಪೂರ್‌, ನಟ

261104-51-2104812782

Dailyhunt
Disclaimer: This content has not been generated, created or edited by Dailyhunt. Publisher: Prajavani