Dailyhunt
ಪ್ಯಾರಾ ಕ್ಲೈಂಬಿಂಗ್‌ನಲ್ಲಿ ಸಮರ್ಥನಂ ಕ್ರೀಡಾಪಟುಗಳು

ಪ್ಯಾರಾ ಕ್ಲೈಂಬಿಂಗ್‌ನಲ್ಲಿ ಸಮರ್ಥನಂ ಕ್ರೀಡಾಪಟುಗಳು

ಬೆಂಗಳೂರು: ರಷ್ಯಾದ ಮಾಸ್ಕೊದಲ್ಲಿ ಇದೇ 14ರಿಂದ 17ರ ವರೆಗೆ ನಡೆಯಲಿರುವ ಪ್ಯಾರಾ ಕ್ಲೈಂಬಿಂಗ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಸಮರ್ಥನಂ ಸಂಸ್ಥೆಯ ಮೂವರು ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.

ದೃಷ್ಟಿದೋಷವುಳ್ಳ ಮುರಳಿ, ಸುಜಾತ ಮತ್ತು ಸುನಿತಾ ಅವರು ಭಾರತವನ್ನು ಪ್ರತಿನಿಧಿಸಲಿದ್ದು ಸಮರ್ಥನಂ ಸಂಸ್ಥೆಯ ಕ್ರೀಡಾ ಸಂಯೋಜಕಿ ಶಿಖಾ ಅವರೊಂದಿಗೆ ಈ ಮೂವರು ತೆರಳುವರು.

ರೋಪಕ್ ಕ್ಲೈಂಬಿಂಗ್‌ನಲ್ಲಿ ಇವರು ಸ್ಪರ್ಧಿಸಲಿದ್ದು ಬೆಂಗಳೂರಿನಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿತ್ತು ಎಂದು ಪ್ರಕಟಣೆ ತಿಳಿಸಿದೆ.

'ದೃಷ್ಟಿದೋಷವುಳ್ಳವರು ಇದೇ ಮೊದಲ ಬಾರಿ ಪ್ಯಾರಾ ಕ್ಲೈಂಬಿಂಗ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ' ಎಂದು ಶಿಖಾ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani