ಬೆಂಗಳೂರು: ಗಾಂಧಿ ಕುಟುಂಬಕ್ಕಾಗಿ ಚಪ್ಪಲಿ ಸವೆಸಿದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ಹೊಸ ಜವಾಬ್ದಾರಿ ನೀಡಿದೆ ಎಂದು ವ್ಯಂಗ್ಯವಾಡಿರುವ ಬಿಜೆಪಿ ಅದಕ್ಕೆ ಪೂರಕವಾದ ವಿಡಿಯೊವೊಂದನ್ನು ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.
ಪೆಗಾಸಸ್ ಗೂಢಾಚರ್ಯೆ ವಿರುದ್ಧ ವಿರೋಧ ಪಕ್ಷಗಳ ನಾಯಕರ ಜೊತೆಗೆ ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸಿದ ಪತ್ರಿಕಾಗೋಷ್ಠಿಯ ದೃಶ್ಯ ಅದಾಗಿದೆ.
ಈ ವಿಡಿಯೊವನ್ನು ಹಂಚಿಕೊಂಡಿರುವ ಬಿಜೆಪಿ, 'ಗಾಂಧಿ ಕುಟುಂಬಕ್ಕಾಗಿ ಚಪ್ಪಲಿ ಸವೆಸಿದ ಖರ್ಗೆ ಅವರಿಗೆ ಹೊಸ ಜವಾಬ್ದಾರಿ ಲಭಿಸಿದೆ. ರಾಹುಲ್‌ಗೆ ಖರ್ಗೆ ಪಾಠ ಹೇಳಿಕೊಡುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಗಾಂಧಿ ಕುಟುಂಬದ ಸೇವೆಯೇ ದೇಶ ಸೇವೆ,' ಎಂದು ಬಿಜೆಪಿ ಕುಹಕವಾಡಿದೆ.

