ಚಿಕ್ಕಮಗಳೂರು: ಮೈಸೂರು ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ರಾಜ ಮನೆತನದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಜಿಲ್ಲಾ ಅರಸು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್.ಮುಕುಂದರಾಜ್ ಅರಸ್ ಹೇಳಿದರು.
ಮೈಸೂರು ರಾಜಮನೆತನಕ್ಕೆ ಇತಿಹಾಸದೆ.
ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿದ್ದ ಅವಧಿ ಯಲ್ಲಿ ಅರಮನೆಯನ್ನು ಸರ್ಕಾರದ ವಶಕ್ಕೆ ಪಡೆಯಲು ಹುನ್ನಾರ ನಡೆಸಿದ್ದರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗಿಂತ ಹೆಚ್ಚಿನ ಕೆಲಸ ಕಾರ್ಯ ಗಳನ್ನು ನಮ್ಮ ತಂದೆ ರಾಜ್ಯಕ್ಕೆ ಮಾಡಿ ದ್ದಾರೆ ಎಂದು ಉದ್ಧಟತನ ಪ್ರದರ್ಶಿಸಿರುವ ಯತೀಂದ್ರ ಅವರ ಹೇಳಿಕೆ ಖಂಡನೀಯ ಎಂದರು.
ದಸರಾ ಸಂದರ್ಭದಲ್ಲಿ ಅರಮನೆಯಲ್ಲಿ ನಡೆದ ಕೆಲವು ಧಾರ್ಮಿಕ ಕಾರ್ಯಗಳಿಕೆ ಅಡ್ಡಿ ಉಂಟಾಗಿರುವುದನ್ನು ಮನಗಂಡು ರಾಜವಂಶಸ್ಥೆ ಪ್ರಮೋದಾ ದೇವಿಯ ಸರ್ಕಾರಕ್ಕೆ ಸಲಹೆ ನೀಡಿ ಪತ್ರ ಬರೆದಿದ್ದಾರೆ. ಸಲಹೆಗಳಿಗೆ ಗೌರವ ನೀಡದ ಯತೀಂದ್ರ ಸಿದ್ದರಾಮಯ್ಯ ಅವರು, ನಮ್ಮ ಸರ್ಕಾರಕ್ಕೆ ಸಲಹೆ ಕೊಡಲು ರಾಜ ಮನೆತನದವರ ಅವಶ್ಯಕತೆ ಇಲ್ಲ ಎಂದು ಹೇಳಿಕೆ ನೀಡಿರುವುದನ್ನು ಅರಸು ಸಮುದಾಯ ಖಂಡಿಸುತ್ತದೆ ಎಂದರು.
ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ನಡವಳಿಕೆ ಬದಲಾಯಿಸಿ ಕೊಳ್ಳಬೇಕು. ರಾಜ್ಯದ ಜನರ ಕ್ಷಮೆ ಕೇಳ ಬೇಕು. ಇಲ್ಲದೆ ಇದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘದ ಗೌರವಾಧ್ಯಕ್ಷ ಮಂಜುನಾಥ ರಾಜ್ ಅರಸ್, ಪ್ರಧಾನ ಕಾರ್ಯದರ್ಶಿ ಯಶೋದರಾಜ್ ಅರಸ್, ಮಾಜಿ ಅಧ್ಯಕ್ಷ ಜನಕರಾಜ್ ಅರಸ್, ಲೋಕೇಶ್, ಮೋಹನ್, ಆನಂದ ರಾಜ್ ಅರಸ್ ಇದ್ದರು.
261104-126-1230353176

