Dailyhunt Logo
  • Light mode
    Follow system
    Dark mode
    • Play Story
    • App Story
ರಾಜಮನೆತನ‌ದಿಂದ ಮಿಡ್‌ನೈಟ್ ಕಲ್ಚರ್‌ವರೆಗೆ.. 'ಹೈದರಾಬಾದಿ ಬಿರಿಯಾನಿ' ಘಮದ ಕಥೆ

ರಾಜಮನೆತನ‌ದಿಂದ ಮಿಡ್‌ನೈಟ್ ಕಲ್ಚರ್‌ವರೆಗೆ.. 'ಹೈದರಾಬಾದಿ ಬಿರಿಯಾನಿ' ಘಮದ ಕಥೆ

ಹೈದರಾಬಾದ್ ಎಂದ ತಕ್ಷಣ ನೆನಪಾಗುವುದು ಮುತ್ತುಗಳು, ಜತೆಗೆ ಹೈದರಾಬಾದ್ ಬಿರಿಯಾನಿ..

ಹೌದು.. ಬಿರಿಯಾನಿ ಕೇವಲ ಒಂದು ಖಾದ್ಯವಲ್ಲ, ಅದು ಕೋಟ್ಯಂತರ ಭಾರತೀಯರ ಭಾವನೆ. ದೇಶದ ವಿವಿಧ ಪ್ರದೇಶಗಳಲ್ಲಿ ತರಹೇವಾರಿ ಬಿರಿಯಾನಿ ತಯಾರಿಸುತ್ತಿದ್ದರೂ, ದೇಶದ ಈ ನಗರ ಬಿರಿಯಾನಿಗೆಂದೇ ಪ್ರಸಿದ್ಧಿ ಪಡೆದಿದೆ.

'ಹೈದರಾಬಾದ್‌'-ಭಾರತದ ಬಿರಿಯಾನಿ ರಾಜಧಾನಿ

ಲಖನೌ ಬಿರಿಯಾನಿಯಿಂದ ಹಿಡಿದು ನಮ್ಮ ಕರ್ನಾಟಕದ ದೊನ್ನೆ ಬಿರಿಯಾನಿಯವರೆಗೆ....ಭಾರತದಲ್ಲಿ ನೂರಾರು ವೈವಿಧ್ಯಗಳಿದ್ದರೂ, ಆಹಾರ ಪ್ರೇಮಿಗಳು ಹೆಮ್ಮೆಯಿಂದ 'ಭಾರತದ ಬಿರಿಯಾನಿ ರಾಜಧಾನಿ' ಎಂದು ಕರೆಯುವುದು ಮಾತ್ರ 'ಹೈದರಾಬಾದ್' ನಗರವನ್ನು. ರಾಜವಂಶದ ಇತಿಹಾಸ ಮತ್ತು ವಿಶಿಷ್ಟ ಅಡುಗೆ ಶೈಲಿಯಿಂದಾಗಿ ಹೈದರಾಬಾದ್ ದೇಶದ ಅತ್ಯಂತ ಜನಪ್ರಿಯ ಬಿರಿಯಾನಿ ತಾಣವಾಗಿ ಹೊರಹೊಮ್ಮಿದೆ.

ಬಿರಿಯಾನಿಯ ಉಗಮ

ಬಿರಿಯಾನಿ ಮೂಲತಃ ಪರ್ಷಿಯನ್ (ಇರಾನ್) ಅಡುಗೆ ಶೈಲಿಯಿಂದ ಬಂದಿದ್ದು. ಮೊಘಲರ ಮೂಲಕ ಭಾರತವನ್ನು ಪ್ರವೇಶಿಸಿತು ಎಂದು ನಂಬಲಾಗಿದೆ. ಕಾಲಾನಂತರದಲ್ಲಿ, ಇದು ಭಾರತೀಯ ಮಸಾಲೆಗಳೊಂದಿಗೆ ಬೆರೆತು ಪ್ರಾದೇಶಿಕ ಬದಲಾವಣೆಗೆ ಒಳಗಾಯಿತು. ಹೈದರಾಬಾದ್‌ನಲ್ಲಿ, ನಿಜಾಮರು ಸ್ಥಳೀಯ ಮತ್ತು ಮೊಘಲ್‌ ಶೈಲಿಗಳನ್ನು ಮಿಶ್ರಣ ಮಾಡಿ ಜಗತ್ಪ್ರಸಿದ್ಧ 'ಹೈದರಾಬಾದಿ ಬಿರಿಯಾನಿ'ಯನ್ನು ಅಭಿವೃದ್ಧಿಪಡಿಸಿದರು ಎನ್ನಲಾಗಿದೆ.

ನಿಜಾಮರ ಅವಧಿಯಲ್ಲಿ ಪ್ರಸಿದ್ಧಿ

ನಿಜಾಮರ ಆಡಳಿತದ ಅವಧಿಯಲ್ಲಿ ಹೈದರಾಬಾದ್ ಬಿರಿಯಾನಿ ಪ್ರಸಿದ್ಧಿ ಪಡೆಯಿತು. ರಾಜಮನೆತನದ ಪಾಕಸಾಲೆಯಲ್ಲಿ ಈ ವಿಶಿಷ್ಟ ಖಾದ್ಯಗಳನ್ನು ತಯಾರಿಸಲು, ಮಸಾಲೆ ಪದಾರ್ಥ, ಅಕ್ಕಿ ಮತ್ತು ಮಾಂಸ ಸೇರಿ ಹೊಸ ಪ್ರಯೋಗ ನಡೆಸಿದರು. ಇದು ಮೊಘಲ್‌ ಮತ್ತು ಸ್ಥಳೀಯ ರುಚಿಗಳನ್ನು ಒಳಗೊಂಡ ಹೈದರಾಬಾದಿ ಬಿರಿಯಾನಿಯ ತಯಾರಿಕೆಗೆ ಕಾರಣವಾಯಿತು.

ಮಿಡ್‌ನೈಟ್ ಬಿರಿಯಾನಿ ಕಲ್ಚರ್

ಹೈದರಾಬಾದ್‌ನ ಗಲ್ಲಿಗಳಲ್ಲಿ ನಡೆದುಕೊಂಡು ಹೋದರೆ ಸಾಕು, ದಮ್ ಬಿರಿಯಾನಿಯ ಘಮ ಮೂಗಿಗೆ ಬಡಿಯುತ್ತದೆ. ಇಲ್ಲಿನ ವಿಶೇಷವೆಂದರೆ 'ಮಿಡ್‌ನೈಟ್ ಬಿರಿಯಾನಿ ಕಲ್ಚರ್'. ಮುಂಜಾನೆಯಿಂದ ಹಿಡಿದು ಮಧ್ಯರಾತ್ರಿಯವರೆಗೂ ಇಲ್ಲಿನ ಹೋಟೆಲ್‌ಗಳಲ್ಲಿ ಬಿಸಿಬಿಸಿ ಬಿರಿಯಾನಿ ಲಭ್ಯವಿದ್ದು, ಹಸಿವನ್ನು ತಣಿಸುತ್ತದೆ.

'ದಮ್' ಬಿರಿಯಾನಿ

ಹೈದರಾಬಾದಿ ಬಿರಿಯಾನಿ ವಿಶಿಷ್ಟವಾಗಿರಲು ಕಾರಣ ಅದನ್ನು ತಯಾರಿಸುವ ವಿಧಾನ. ಅಕ್ಕಿ ಮತ್ತು ಮಸಾಲೆ ಹಚ್ಚಿದ ಮಾಂಸವನ್ನು ಒಟ್ಟಿಗೆ ಒಂದು ಮುಚ್ಚಿದ ಪಾತ್ರೆಯಲ್ಲಿ ಬೇಯಿಸಲಾಗುತ್ತದೆ. ಇದರಿಂದ ಮಾಂಸದ ರಸ ಮತ್ತು ಮಸಾಲೆ ಅನ್ನದೊಂದಿಗೆ ಸಂಪೂರ್ಣವಾಗಿ ಬೆರೆತುಕೊಳ್ಳುತ್ತದೆ. ಅಲ್ಲದೇ ಕೇಸರಿ, ಕರಿದ ಈರುಳ್ಳಿ ಇದರ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಚಾರ್‌ಮಿನಾರ್‌ನಿಂದ ಹೈಟೆಕ್ ಸಿಟಿವರೆಗೆ..

ಹಳೇ ನಗರದ ಚಾರ್‌ಮಿನಾರ್ ಗಲ್ಲಿಗಳಿಂದ ಹಿಡಿದು ಇಂದಿನ ಆಧುನಿಕ ಹೈಟೆಕ್ ಸಿಟಿ, ಬಂಜಾರಾ ಹಿಲ್ಸ್‌ವರೆಗೂ ಹೈದರಾಬಾದ್‌ ಜನರ ನೆಚ್ಚಿನ ಖಾದ್ಯ ಬಿರಿಯಾನಿ. ರಂಜಾನ್ ತಿಂಗಳಲ್ಲಂತೂ ಇಲ್ಲಿ ತಯಾರಾಗುವ ಬಿರಿಯಾನಿ ಸವಿಯುವುದೇ ಒಂದು ಅದ್ಭುತ ಅನುಭವ.

ವಿಧಗಳು ಬಗೆಗಳು

ಹೈದರಾಬಾದಿ ಬಿರಿಯಾನಿಯಿಂದ ಹಿಡಿದು ಮಲಬಾರ್ ಬಿರಿಯಾನಿಯವರೆಗೆ...ಭಾರತ ಮತ್ತು ದಕ್ಷಿಣ ಏಷ್ಯಾದಾದ್ಯಂತ ಹಲವು ಬಗೆಯಲ್ಲಿ ಬಿರಿಯಾನಿಯನ್ನು ತಯಾರಿಸಲಾಗುತ್ತದೆ. ಪ್ರತಿಯೊಂದೂ ತನ್ನದೇ ಆದ ರುಚಿ, ವಿಧಾನ ಮತ್ತು ಇತಿಹಾಸವನ್ನು ಹೊಂದಿದೆ. ಅವುಗಳಲ್ಲಿ ಪ್ರಮುಖವಾದವು ಹೀಗಿವೆ..

  • ಹೈದರಾಬಾದಿ ಬಿರಿಯಾನಿ

  • ಕೋಲ್ಕತ್ತ ಬಿರಿಯಾನಿ

  • ಮಲಬಾರ್ ಬಿರಿಯಾನಿ

  • ಸಿಂಧಿ ಬಿರಿಯಾನಿ

ದೇಶದ ಜನಪ್ರಿಯ ಬಿರಿಯಾನಿ

ಹೈದರಾಬಾದಿ ಬಿರಿಯಾನಿ ತನ್ನ ರುಚಿ ಮತ್ತು ವ್ಯಾಪಕ ಲಭ್ಯತೆಯಿಂದಾಗಿ ಭಾರತದಲ್ಲಿ ಅತ್ಯಂತ ಜನಪ್ರಿಯ ಬಿರಿಯಾನಿ ಎಂದು ಪರಿಗಣಿಸಲ್ಪಟ್ಟಿದೆ.

ರಾಜಮನೆತನದ ಹಿನ್ನೆಲೆ

ಆರಂಭದಲ್ಲಿ ಬಿರಿಯಾನಿಯನ್ನು ರಾಜರು ಮತ್ತು ನವಾಬರ ಅರಮನೆಗಳಲ್ಲಿ ಮಾತ್ರ ತಯಾರಿಸಲಾಗುತ್ತಿತ್ತು. ನಂತರ ಅದು ಸಾಮಾನ್ಯ ಜನರನ್ನು ತಲುಪಿತು.

ಅತಿ ಹೆಚ್ಚು ಆರ್ಡರ್ ಆಗುವ ಖಾದ್ಯ

ಭಾರತದ ಪ್ರಮುಖ ಫುಡ್ ಡೆಲಿವರಿ ಆಪ್‌ಗಳಲ್ಲಿ ಬಿರಿಯಾನಿ 'ಅತಿ ಹೆಚ್ಚು ಆರ್ಡರ್ ಆಗುವ ಖಾದ್ಯ'ವಾಗಿ ಮೊದಲ ಸ್ಥಾನದಲ್ಲಿದೆ.

ತರಕಾರಿಯಿಂದಲೂ ತಯಾರಿಕೆ

ಬಿರಿಯಾನಿಯನ್ನು ಕೇವಲ ಚಿಕನ್, ಮಟನ್ ಅಥವಾ ಮೀನಿನಿಂದ ಮಾತ್ರವಲ್ಲದೆ, ವಿವಿಧ ತರಕಾರಿಗಳು ಮತ್ತು ಪನೀರ್ ಬಳಸಿಯೂ ಅತ್ಯಂತ ರುಚಿಕರವಾಗಿ ತಯಾರಿಸಬಹುದು.

Dailyhunt
Disclaimer: This content has not been generated, created or edited by Dailyhunt. Publisher: Prajavani