Wednesday, 03 Mar, 2.25 pm ಪ್ರಜಾವಾಣಿ

ರಾಷ್ಟ್ರೀಯ
ರಾಜಸ್ತಾನ: ತರಬೇತಿ ವೇಳೆ ಆಕಸ್ಮಿಕ ಸ್ಫೋಟ- ಬಿಎಸ್‌ಎಫ್‌ ಯೋಧ ಸಾವು

ಜೈಸಲ್ಮೇರ್: 'ರಾಜಸ್ಥಾನದ ಜೈಸಲ್ಮೇರ್‌ನ ಲಾಥಿ ಫೈರಿಂಗ್‌ ರೇಂಜ್‌ನಲ್ಲಿ ಬಂದೂಕು ತರಬೇತಿ ವೇಳೆ ಸಂಭವಿಸಿದ ಆಕಸ್ಮಿಕ ಸ್ಫೋಟದಿಂದಾಗಿ ಬಿಎಸ್‌ಎಫ್‌ ಯೋಧರೊಬ್ಬರು ಮೃತಪಟ್ಟಿದ್ದು, ನಾಲ್ವರಿಗೆ ಗಾಯಗಳಾಗಿವೆ' ಎಂದು ಪೊಲೀಸರು ಬುಧವಾರ ತಿಳಿಸಿದರು.

'ಮಂಗಳವಾರ ರಾತ್ರಿ ತರಬೇತಿ ವೇಳೆ ಬಂದೂಕಿನ ಮುಂದಿನ ಭಾಗ ಸ್ಫೋಟಗೊಂಡ ಕಾರಣ ಬಿಎಸ್‌ಎಫ್‌ನ ಐದು ಮಂದಿ ಗಾಯಗೊಂಡಿದ್ದರು. ಇದರಲ್ಲಿ ಮೂವರ ಪರಿಸ್ಥಿತಿ ಗಂಭೀರವಾಗಿತ್ತು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಸತೀಶ್‌ ಕುಮಾರ್‌(32) ಎಂಬುವರು ಮೃತಪಟ್ಟಿದ್ದರು. ಈ ಬಗ್ಗೆ ಅವರು ಕುಟುಂಬದವರಿಗೆ ತಿಳಿಸಲಾಗಿದೆ' ಎಂದು ಅವರು ಹೇಳಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top