ಹುಬ್ಬಳ್ಳಿ: ಬೆಂಗಳೂರಿನ ಸಾಯಿ ಶೂಟಿಂಗ್ ರೇಂಜ್‌ನಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ 14ನೇ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಯ ಶೂಟರ್‌ಗಳು ತಲಾ ನಾಲ್ಕು ಚಿನ್ನ, ಬೆಳ್ಳಿ ಮತ್ತು ಐದು ಕಂಚಿನ ಪದಕ ಗಳಿಸಿದ್ದಾರೆ. ಸ್ಪರ್ಧೆಯಲ್ಲಿ 32 ಶೂಟಿಂಗ್ ಅಕಾಡೆಮಿಗಳ 1,600 ಶೂಟರ್‌ಗಳು ಭಾಗವಹಿಸಿದ್ದರು.
50 ಮೀಟರ್ 3 ಹಂತದ ಜೂನಿಯರ್ ವಿಭಾಗ ಹಾಗೂ ಯೂಥ್ ವಿಭಾಗದಲ್ಲಿ ನೀಲ್ ಅನಿರುದ್ಧ ಫಡ್ನವೀಸ್ ಕಂಚು ಗಳಿಸಿದ್ದಾರೆ. 10 ಮೀ. ಏರ್ ರೈಫಲ್ ಮಾಸ್ಟರ್‌ನಲ್ಲಿ ರಮೇಶ ದೊಡ್ಡಮನಿ ಚಿನ್ನದ ಪದಕ ಜಯಿಸಿದ್ದಾರೆ.
25 ಮೀ. ಸ್ಪೋರ್ಟ್ಸ್ ಪಿಸ್ತೂಲ್ ಮಾಸ್ಟರ್‌ನಲ್ಲಿ ಜಯಶ್ರೀ ಪಾಟೀಲ- ಚಿನ್ನ, 50 ಮೀ. ಫ್ರೀ ಪಿಸ್ತೂಲ್‌ನಲ್ಲಿ- ಬೆಳ್ಳಿ, ರವಿಚಂದ್ರ ಬಾಲೆಹೊಸೂರು ಅವರು 25 ಸ್ಟ್ಯಾಂಡರ್ಡ್ ಪಿಸ್ತೂಲ್ ಮಾಸ್ಟರ್‌ನಲ್ಲಿ ಚಿನ್ನ, 25 ಮೀ. ಸ್ಟ್ಯಾಂಡರ್ಡ್ ಸೀನಿಯರ್‌ನಲ್ಲಿ ಬೆಳ್ಳಿ, 25 ಮೀ. ಸೆಂಟರ್ ಫೈರ್ ಪಿಸ್ತೂಲ್ ಮಾಸ್ಟರ್‌ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ. ಮೊಹಮ್ಮದ್ ಅಜ್ಮಲ್ ಅವರು 25 ಮೀ. ಸೆಂಟರ್ ಫೈರ್ ಪಿಸ್ತೂಲ್ ಸೀನಿಯರ್‌ನಲ್ಲಿ ಬೆಳ್ಳಿ, 50 ಮೀ. ಫ್ರೀ ಪಿಸ್ತೂಲ್ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ತಂಡ ವಿಭಾಗ: 10 ಮೀ. ಏರ್ ಪಿಸ್ತೂಲ್ ಐಎಸ್‌ಎಸ್‌ಎಫ್ ಯೂಥ್‌ವಿಭಾಗದಲ್ಲಿ ಪೃಥ್ವಿರಾಜ್ ಬಾಲೆ ಹೊಸೂರು, ಮೃತ್ಯುಂಜಯ ಮಣಕವಾಡ, ಖುಷ್ ಪರಮಶೆಟ್ಟಿ ಅವರ ತಂಡ ಚಿನ್ನ, 10 ಮೀ. ಏರ್ ಪಿಸ್ತೂಲ್ ಎನ್‌ಆರ್ ಸೀನಿಯರ್ ವಿಭಾಗದಲ್ಲಿ ಸುಶಾಂತ್ ಕುಲ ಕರ್ಣಿ, ಸಾಗರ್, ಅಭಿಜಿತ್ ಮುಲ್ಕಿಗೌಡರ್ ಅವರ ತಂಡ ಬೆಳ್ಳಿ ಪದಕ ಗೆದ್ದಿದೆ.
10 ಮೀ. ಏರ್ ಪಿಸ್ತೂಲ್ ಎನ್.ಆರ್ ಮಾಸ್ಟರ್ ವಿಭಾಗದಲ್ಲಿ ಯೋಗೀಶ್ ಕಂಬ್ಳಿಮಠ, ಗಿರೀಶ ಹಾಲಬಾವಿ, ವೈ.ಟಿ. ರಾಜೇಂದ್ರ ಪ್ರಸಾದ್ ಅವರ ತಂಡ ಕಂಚಿನ ಪದಕ ಜಯಿಸಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-24-303780313

