Dailyhunt Logo
  • Light mode
    Follow system
    Dark mode
    • Play Story
    • App Story
'ರಾಜ್ಯೋತ್ಸವ ಸಂಭ್ರಮಕ್ಕೆ ಸೀಮಿತವಾಗದಿರಲಿ'

'ರಾಜ್ಯೋತ್ಸವ ಸಂಭ್ರಮಕ್ಕೆ ಸೀಮಿತವಾಗದಿರಲಿ'

ಗದಗ: 'ಕನ್ನಡದ ಕಂಪನ್ನು ಜಗತ್ತಿನೆಲ್ಲೆಡೆ ಪಸರಿಸಬೇಕು. ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ ಮತ್ತು ಪರಂಪರೆ ಪ್ರತಿಬಿಂಬಿಸುವ ಕಾರ್ಯಕ್ರಮಗಳು ಪ್ರತಿದಿನ ನಡೆಯಬೇಕು' ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ಎಸ್.ಎಸ್. ಶಿರಹಟ್ಟಿ ಹೇಳಿದರು.

ನಗರದ ಸ್ವತಂತ್ರ ವಿತರಣಾ ಕೇಂದ್ರದಲ್ಲಿ ಗದಗ ಮನರಂಜನಾ ಕೂಟದ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಮತ್ತು ಸಂಗೀತ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

'ಪ್ರತಿಯೊಬ್ಬ ಕನ್ನಡಿಗರಲ್ಲಿ ನಾಡು-ನುಡಿಯ ಬಗ್ಗೆ ಅಭಿಮಾನ, ಗೌರವ ಮತ್ತು ಜಾಗೃತಿ ಮೂಡಿಸುವ ಮೂಲಕ ರಾಜ್ಯೋತ್ಸವ ಕನ್ನಡಮಯವಾಗಬೇಕು. ರಾಜ್ಯೋತ್ಸವವು ಸಂಭ್ರಮಾಚರಣೆಗೆ ಸೀಮಿತವಾಗದೆ, ಕನ್ನಡ ನಾಡಿನ ಇತಿಹಾಸ, ಸಾಹಿತ್ಯ, ಸಂಸ್ಕೃತಿ, ಕಲೆಗೆ ಅಪಾರ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸುವ ಅರ್ಥಪೂರ್ಣ ದಿನವಾಗಬೇಕು' ಎಂದರು.

'ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲೆ, ವಿಜ್ಞಾನ, ಶಿಕ್ಷಣ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅನನ್ಯ ಕೊಡುಗೆ ನೀಡಿದೆ. ದೇಶದ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕನ್ನಡಿಗರ ಸಾಧನೆಗಳನ್ನು ಗುರುತಿಸಿ, ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ' ಎಂದು ತಿಳಿಸಿದರು.

ಗದಗ ಉಪ‌ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ವಿನೋದಕುಮಾರ ಮೇದಾರ, ಐಪಿಪಿಬಿ‌ ವ್ಯವಸ್ಥಾಪಕ ಮಂಜುನಾಥ, ರೋಣ ಅಂಚೆ ನಿರೀಕ್ಷಕ ವೆಂಕಟೇಶರಡ್ಡಿ ಕೊಳ್ಳಿ, ಪ್ರಧಾನ ಅಂಚೆಪಾಲಕ ಏಕನಾಥ ಮೆಣನಸಿನಕಾಯಿ, ಸ್ವತಂತ್ರ ವಿತರರಣಾ ಕೇಂದ್ರ ಮೇಲ್ವಿಚಾರಕ ಡಿ.ಜಿ. ಮ್ಯಾಗೇರಿ ಮಾತನಾಡಿದರು.

ಶರಣಪ್ಪ ನಾಯ್ಕರ, ಸೌಮ್ಯ ಹುಯಿಲಗೋಳ , ವಿನೂತ ಕಪ್ಪತನವರ, ಕವಿತಾ ರಡ್ಡೆರ, ವಿರೇಶ ಅಂಗಡಿ, ಮೇಘನಾ ಕುಲಕರ್ಣಿ,ವಾಣಿ‌ ಯಳಗಂಟಿ, ಭೀಮಣ್ಣ ದೊಡ್ಡಮನಿ, ರವಿ ಜಾಧಚ, ವೀರನಗೌಡ, ವೆಂಕಟೇಶ ಆಕಳವಾಡಿ ಸೋಮು ಎಸ್. ಇದ್ದರು.

261104-23-2097117955

Dailyhunt
Disclaimer: This content has not been generated, created or edited by Dailyhunt. Publisher: Prajavani