Dailyhunt Logo
  • Light mode
    Follow system
    Dark mode
    • Play Story
    • App Story
ರಾಕೆಟ್‌ ತಯಾರಿಕೆ: ಆಸ್ಟ್ರೋಬೇಸ್‌ನಿಂದ ₹500 ಕೋಟಿ ಹೂಡಿಕೆ

ರಾಕೆಟ್‌ ತಯಾರಿಕೆ: ಆಸ್ಟ್ರೋಬೇಸ್‌ನಿಂದ ₹500 ಕೋಟಿ ಹೂಡಿಕೆ

ಬೆಂಗಳೂರು: 'ಬಾಹ್ಯಾಕಾಶ ವಿಜ್ಞಾನ ಕ್ಷೇತ್ರಕ್ಕೆ ಬೇಕಾಗುವ ಆಧುನಿಕ ರಾಕೆಟ್ ಮತ್ತು ಉಡಾವಣಾ ವಾಹನಗಳನ್ನು ತಯಾರಿಸುವ ಬೆಂಗಳೂರು ಮೂಲದ ಆಸ್ಟ್ರೋಬೇಸ್ ಕಂಪನಿಯು ಆದಿನಾರಾಯಣ ಹೊಸಹಳ್ಳಿಯಲ್ಲಿ ₹500 ಕೋಟಿ ಹೂಡಿಕೆ ಮಾಡಲಿದೆ' ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

'ಕೃಷಿ ವಲಯಕ್ಕೆ ಬೇಕಾಗುವ ಅಗತ್ಯ ವಸ್ತುಗಳನ್ನು ಉತ್ಪಾದಿಸುವ ನೆದರ್ಲೆಂಡ್ ಮೂಲದ ಬೇಯರ್ ಕಂಪನಿಯು ₹200 ಕೋಟಿ ಹೂಡಿಕೆ ಮಾಡಿ, ಜಿಸಿಸಿ ಕೇಂದ್ರ ಸ್ಥಾಪಿಸಲಿದೆ' ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

'ಆಸ್ಟ್ರೋಬೇಸ್ ಕಂಪನಿಯು ಆದಿನಾರಾಯಣ ಹೊಸಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 10 ಎಕರೆ ಜಾಗದಲ್ಲಿ ತಯಾರಿಕಾ ಘಟಕವನ್ನು ಅಭಿವೃದ್ಧಿ ಪಡಿಸಲಿದ್ದು, ವರ್ಷಕ್ಕೆ 40 ರಾಕೆಟ್ ಎಂಜಿನ್‌ಗಳನ್ನು ತಯಾರಿಸಲಿದೆ. ಇಸ್ರೊದ ಮಾಜಿ ವಿಜ್ಞಾನಿಗಳು ಈ ಕಂಪನಿಯನ್ನು ನಡೆಸುತ್ತಿದ್ದಾರೆ' ಎಂದು ವಿವರಿಸಿದ್ದಾರೆ.

'ಕಂಪನಿಯು ಸದ್ಯಕ್ಕೆ ವರ್ಷಕ್ಕೆ 8ರಿಂದ 26 ಟನ್ ಭಾರವನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ಯುವಂತಹ ಸ್ವದೇಶಿ 'ಎವರೆಸ್ಟ್' ಎನ್ನುವ ಎಂಜಿನ್ ತಯಾರಿಸಿದೆ. ಉಡಾವಣಾ ವಾಹನಗಳಿಗೆ ಜಾಗತಿಕ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಈ ಯೋಜನೆ ಸ್ವಾಗತಾರ್ಹವಾಗಿದೆ. ಇದರಿಂದ 1,250 ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ' ಎಂದಿದ್ದಾರೆ.

'ಹೂಡಿಕೆ ಆಕರ್ಷಿಸಲೆಂದು ಇತ್ತೀಚೆಗೆ ನೆದರ್ಲೆಂಡ್‌ಗೆ ಭೇಟಿ ನೀಡಿದ್ದಾಗ ಬೇಯರ್ ಕಂಪನಿಯ ಮುಖ್ಯಸ್ಥರನ್ನು ಭೇಟಿ ಮಾಡಲಾಗಿತ್ತು. ರಸಗೊಬ್ಬರ, ಕೀಟನಾಶಕ ಮತ್ತು ಶಿಲೀಂಧ್ರನಾಶಕ ಮುಂತಾದವುಗಳನ್ನು ಉತ್ಪಾದಿಸುವ ಈ ಕಂಪನಿಯು ಬೆಂಗಳೂರಿನಲ್ಲಿ ತನ್ನ ಜಿಸಿಸಿ ಕೇಂದ್ರವನ್ನು ನಿರ್ಮಿಸಲು ತೀರ್ಮಾನಿಸಿದೆ. ಇದರಿಂದ 220 ಉದ್ಯೋಗಗಳು ಸೃಷ್ಟಿಯಾಗಲಿವೆ' ಎಂದು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani