Dailyhunt Logo
  • Light mode
    Follow system
    Dark mode
    • Play Story
    • App Story
ರಾವಣನ ಅಬ್ಬರ, ರಾಮನ ತ್ಯಾಗ, ಸೀತೆಯ ಪ್ರೀತಿ... ನಿರೀಕ್ಷೆ ಹೆಚ್ಚಿಸಿದ ಟ್ರೇಲರ್

ರಾವಣನ ಅಬ್ಬರ, ರಾಮನ ತ್ಯಾಗ, ಸೀತೆಯ ಪ್ರೀತಿ... ನಿರೀಕ್ಷೆ ಹೆಚ್ಚಿಸಿದ ಟ್ರೇಲರ್

ಯಶ್‌ ಅವರನ್ನು ನೋಡಿದ ಎಕ್ಸ್‌ ಬಳಕೆದಾರರೊಬ್ಬರು 'ಅಬ್ಬಾ, 'ರಾಮಾಯಣ'ದಲ್ಲಿ ರಾವಣನ ಪಾತ್ರದಲ್ಲಿ ಯಶ್ ಅಬ್ಬರಿಸಲಿದ್ದಾರೆ. ಅವರ ಈ ಅಭಿನಯವು ಟೀಕಾಕಾರರ ಬಾಯಿ ಮುಚ್ಚಿಸುವುದಲ್ಲದೆ, ಸಾಮಾನ್ಯರನ್ನೂ ಅಭಿಮಾನಿಗಳನ್ನಾಗಿ ಪರಿವರ್ತಿಸಲಿದೆ' ಎಂದಿದ್ದಾರೆ.

ಗಡಸು ಧ್ವನಿಯಲ್ಲಿ, ವಿಭಿನ್ನ ಶೈಲಿಯಲ್ಲಿ ಯಶ್ ಡೈಲಾಗ್ ಹೇಳುವ ರೀತಿ, ವೇಷಭೂಷಣಕ್ಕೆ ಪ್ರೇಕ್ಷಕರು ಮಾರುಹೋಗಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಯಶ್ ನಟನೆಯ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸೀತಾ ಮಾತೆಯಾಗಿ ನಟಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿ ಸೀತಾಮಾತೆಗೆ ಗುಂಗುರು ಕೂದಲು ಇರುತ್ತದೆಯೇ ಎನ್ನುವ ಕಮೆಂಟ್‌ಗಳು ಕೇಳಿ ಬಂದಿದ್ದವು. ಆದರೆ ಸೀತೆಯಾಗಿ ಬಂದ ಸಾಯಿ ಪಲ್ಲವಿ ಕಂಡು ನೆಟ್ಟಿಗರು ಬೆರಗಾಗಿದ್ದಾರೆ.

ಸಾಯಿ ಪಲ್ಲವಿ 'ದೇವತೆಯಂತೆ ಕಾಣಿಸುತ್ತಿದ್ದಾರೆ. ಯಾರು ಹೇಳಿದ್ದು, ಸಾಯಿ ಪಲ್ಲವಿ ಸೀತೆಯ ಪಾತ್ರಕ್ಕೆ ಸರಿಹೊಂದುವುದಿಲ್ಲವೆಂದು' ಎನ್ನುವ ರೀತಿಯಲ್ಲಿ ಮೆಚ್ಚುಗೆಯ ಕಮೆಂಟ್‌ಗಳನ್ನು ನೀಡುತ್ತಿದ್ದಾರೆ.

ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಣಬೀರ್ ಕಪೂರ್, ಶೂರ್ಪನಖಿಯಾಗಿ ರಕುಲ್ ಪ್ರೀತ್‌ ಸಿಂಗ್‌ ನೆಟ್ಟಿಗರ ಮನಗೆದ್ದಿದ್ದಾರೆ. ಶೂರ್ಪನಖಿ ಪಾತ್ರ ಮಾಡಿದ್ದರೂ ರಕುಲ್‌ ಸೌಂದರ್ಯ ಇಮ್ಮಡಿಯಾಗಿದೆ ಎಂದೂ ಹೇಳಿದ್ದಾರೆ.

ರಾವಣನ ಅಬ್ಬರದ ನಡುವೆ ರಾಮನ ಮೃದು ಧ್ವನಿ, ಸೀತೆಯ ಸುಕೋಮಲ ಪ್ರೀತಿ, ಶೂರ್ಪನಖಿಯ ಮೋಹ ಜತೆಗೆ ಟ್ರೇಲರ್‌ನುದ್ದಕ್ಕೂ ಕೇಳಿಸುವ ಹಿನ್ನೆಲೆ ಸಂಗೀತ ರಾಮಾಯಣ ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani