ಬೆಳಗಾವಿ: ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ರೈತರನ್ನು ಭೇಟಿಯಾಗಲು ಚನ್ನಮ್ಮನ ಕಿತ್ತೂರಿನತ್ತ ತೆರಳಿದರು.
ವಿಮಾನ ನಿಲ್ದಾಣದಲ್ಲಿ ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದ ಅವರು, 'ರೈತರ ಸಮಸ್ಯೆ ಆಲಿಸಲು ಬಗೆಹರಿಸಲು ಬಂದಿದ್ದೇನೆ' ಎಂದರು.
ಸಹಕಾರ ಸಚಿವ ಲಕ್ಷ್ಮಣ ಸವದಿ, ಶಾಸಕರಾದ ಅಶೋಕ ಪಟ್ಟಣ, ವಿನಯ ಕುಲಕರ್ಣಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ನಗರ ಪೊಲೀಸ್ ಕಮಿಷನರ್ ಪ್ರಕಾಶ ನಿಕ್ಕಂ ಇದ್ದರು.

