Dailyhunt Logo
  • Light mode
    Follow system
    Dark mode
    • Play Story
    • App Story
ರಥೋತ್ಸವಕ್ಕೆ ಅಡ್ಡಿ ಆತಂಕ; ಭದ್ರತೆಗೆ ದಲಿತ ಸಂಘಟನೆ ಆಗ್ರಹ

ರಥೋತ್ಸವಕ್ಕೆ ಅಡ್ಡಿ ಆತಂಕ; ಭದ್ರತೆಗೆ ದಲಿತ ಸಂಘಟನೆ ಆಗ್ರಹ

ದಗ: 'ಇಲ್ಲಿನ ವೀರೇಶ್ವರ ಪುಣ್ಯಾಶ್ರಮ ಹಾಗೂ ದುರ್ಗಾದೇವಿ ರಥೋತ್ಸವಕ್ಕೆ ಅಡ್ಡಿಪಡಿಸುವ ಆತಂಕವಿದ್ದು, ಪೊಲೀಸರು ಸೂಕ್ತ ಭದ್ರತೆ ಒದಗಿಸಬೇಕು' ಎಂದು ದಲಿತ ಸಂಘಟನೆಯ ರಮೇಶ ಚಲವಾದಿ ಆಗ್ರಹಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ರಾಜು ಖಾನಪ್ಪನವರ ರಥೋತ್ಸವಕ್ಕೆ ಅಡ್ಡಿಪಡಿಸುವ ಹೇಳಿಕೆ ನೀಡಿದ್ದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ.

ಪೊಲೀಸರು ಕಾನೂನು-ಸುವ್ಯವಸ್ಥೆ ಕಾಪಾಡಬೇಕು' ಎಂದರು.

'ವೀರೇಶ್ವರ ಪುಣ್ಯಾಶ್ರಮವು ಜಾತ್ಯಾತೀತ ಮಠವಾಗಿದೆ. ಅಲ್ಲಿ ಅವ್ಯವಹಾರ ನಡೆದಿದ್ದರೆ, ಸಮಗ್ರ ತನಿಖೆ ನಡೆಯಲಿ. ಅದರ ಹೊರತಾಗಿ, ರಥ ಎಳೆಯಲು ಅಡ್ಡಿಪಡಿಸುವ ಹೇಳಿಕೆ ನೀಡಿದ್ದಕ್ಕೆ ರಾಜು ಖಾನಪ್ಪನವರ ವಿರುದ್ಧ ಕಾನುನು ಕ್ರಮ ಜರುಗಿಸಬೇಕು' ಎಂದು ಕೋರಿದರು. ಲೋಹಿತ್ ಚಲವಾದಿ, ಅನಿಲ್ ಕುಮಾರ್ ಪೂಜಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-23-144863102

Dailyhunt
Disclaimer: This content has not been generated, created or edited by Dailyhunt. Publisher: Prajavani