Dailyhunt Logo
  • Light mode
    Follow system
    Dark mode
    • Play Story
    • App Story
ರವಿಕೃಷ್ಣ ರೆಡ್ಡಿ ಹೇಳಿಕೆಗೆ ಶಾಂತಾ ಅಶೋಕ್‌ಕ ಖಂಡನೆ

ರವಿಕೃಷ್ಣ ರೆಡ್ಡಿ ಹೇಳಿಕೆಗೆ ಶಾಂತಾ ಅಶೋಕ್‌ಕ ಖಂಡನೆ

ಸಿರಿಗೆರೆ: ಸುಪ್ರಿಂಕೋರ್ಟ್‌ ರದ್ದುಪಡಿಸಿರುವ 2021ರ ತಂಡದ ಕೆ.ಎ.ಎಸ್.‌ ಅಧಿಕಾರಿಗಳ ನೇಮಕಾತಿ ಕುರಿತಂತೆ ಕೆ.ಆರ್.‌ಎಸ್.‌ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಸಿರಿಗೆರೆಯ ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ನೀಡಿರುವ ಹೇಳಿಕೆಯನ್ನು ರಾಜ್ಯ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶಾಂತಾ ಅಶೋಕ್‌ಕ ಖಂಡಿಸಿದ್ದಾರೆ.

ನೇಮಕಾತಿಗೆ ಸರ್ಕಾರ ರೂಪಿಸಿದ ಕಾಯ್ದೆ ವಿಚಾರವಾಗಿ ಕಾನೂನು ಸಚಿವ ಮಾಧುಸ್ವಾಮಿ ಹಾಗೂ ತರಳಬಾಳು ಶ್ರೀಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ರವಿಕೃಷ್ಣರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದರು.

'ಮಠದಲ್ಲಿ ನಡೆಯುವ ಸದ್ಧರ್ಮ ನ್ಯಾಯಪೀಠಕ್ಕೆ ತೊಂದರೆಗೆ ಒಳಗಾಗಿದ್ದ ಅಧಿಕಾರಿಗಳು ಅಹವಾಲು ಸಲ್ಲಿಸಿ ನೆರವಿಗೆ ಮೊರೆ ಇಟ್ಟಿದ್ದಾರೆ. ಅಧಿಕಾರಿಗಳ ಆಲಿಸಿದ ಶ್ರೀಗಳು ಆಗಿನ ಕಾನೂನು ಸಚಿವರೊಡನೆ ಚರ್ಚಿಸಿ ಅವರ ಸಮಸ್ಯೆಗೆ ಪರಿಹಾರ ಹುಡುಕಲು ಯತ್ನಿಸಿದ್ದಾರೆ. ಇದರಲ್ಲಿ ಮಂಪರು ಪರೀಕ್ಷೆ ಒಳಪಡಿಸುವಂತದ್ದು ಏನಿದೆ' ಎಂದು ಪ್ರಶ್ನಿಸಿದ್ದಾರೆ.

261104-44-38216833

Dailyhunt
Disclaimer: This content has not been generated, created or edited by Dailyhunt. Publisher: Prajavani