Dailyhunt Logo
  • Light mode
    Follow system
    Dark mode
    • Play Story
    • App Story
ರವೀಂದ್ರ ಕಲಾ ಕ್ಷೇತ್ರ: ಜೂನ್ 13ರಂದು ಸಿಂಡ್ರೆಲಾ ನೃತ್ಯ ನಾಟಕ ಪ್ರದರ್ಶನ

ರವೀಂದ್ರ ಕಲಾ ಕ್ಷೇತ್ರ: ಜೂನ್ 13ರಂದು ಸಿಂಡ್ರೆಲಾ ನೃತ್ಯ ನಾಟಕ ಪ್ರದರ್ಶನ

ಬೆಂಗಳೂರು: ಪ್ರಭಾತ್‌ ಕಲಾವಿದರು ತಂಡದಿಂದ ಸಿಂಡ್ರೆಲಾ ನೃತ್ಯ ನಾಟಕ ಮರು ಪ್ರದರ್ಶನವನ್ನು ರವೀಂದ್ರ ಕಲಾ ಕ್ಷೇತ್ರದಲ್ಲಿ ಜೂನ್ 13ರ ಸಂಜೆ 7ಕ್ಕೆ ಹಮ್ಮಿಕೊಳ್ಳಲಾಗಿದೆ.

ಹರಿಕಥಾ ವಿದ್ವಾನ್‌ ಗೋಪಿನಾಥ ದಾಸರು 90 ವರ್ಷಗಳ ಹಿಂದೆ ಸ್ಥಾಪಿಸಿದ ಪ್ರಭಾತ್ ಕಲಾವಿದರು
ಸಂಸ್ಥೆಯು ಪ್ರಮುಖ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಒಂದಾಗಿದ್ದು, ನಿರಂತರ ಪ್ರಯೋಗದ ಮೂಲಕ ಗಮನ ಸೆಳೆದಿದೆ.

1978ರಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡ ಸಿಂಡ್ರೆಲಾ ರೂಪಕವು ಕರ್ನಾಟಕದ ಪ್ರಮುಖ ನೃತ್ಯ ನಾಟಕವಾಗಿದ್ದು, ಭಾರತದಾದ್ಯಂತ 1,000ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ.

ನೃತ್ಯ ನಾಟಕ ಪಾಶ್ಚಾತ್ಯ ಕಥೆ ಆಧರಿಸಿದ್ದರೂ, ನಮ್ಮ ಮಣ್ಣಿನ ಸೊಗಡಿಗೆ ತಕ್ಕಂತೆ ಭಾರತೀಯ ಪಾತ್ರ
ಅಳವಡಿಸಿಕೊಳ್ಳಲಾಗಿದೆ. ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಲು ಯುವಿಲೈಟ್ ಎಫೆಕ್ಟ್ಸ್, ಏರಿಯಲ್ ಆಕ್ಟ್, ಸುಧಾರಿತ 3ಡಿ ವಿಷ್ಯುಯಲ್ಸ್ ತಂತ್ರಜ್ಞಾನ ಬಳಸಲಾಗಿದೆ. ‌

ಮೈಸೂರು ಅನಂತ ಸ್ವಾಮಿ ಸಂಯೋಜಿಸಿದ ಸಂಗೀತಕ್ಕೆ ಪ್ರವೀಣ್ ಡಿ.ರಾವ್ ಮರುಜೀವ ನೀಡಿದ್ದಾರೆ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಧ್ವನಿಯೂ ಈ ರೂಪಕಕ್ಕೆ ಇದೆ ಎಂದು ಪ್ರಕಟಣೆ ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani