Dailyhunt Logo
  • Light mode
    Follow system
    Dark mode
    • Play Story
    • App Story
ರೆಸಿಪಿ: 5 ನಿಮಿಷದಲ್ಲೇ ತಯಾರಿಸಿ ನಾಲಿಗೆಗೆ ರುಚಿ ಕೊಡುವ ಬೆಳ್ಳುಳ್ಳಿ ಖಾರದ ಅನ್ನ

ರೆಸಿಪಿ: 5 ನಿಮಿಷದಲ್ಲೇ ತಯಾರಿಸಿ ನಾಲಿಗೆಗೆ ರುಚಿ ಕೊಡುವ ಬೆಳ್ಳುಳ್ಳಿ ಖಾರದ ಅನ್ನ

ಬ್ಯಾಚುಲರ್ಸ್, ಪಿಜಿಯಲ್ಲಿರುವ ಯುವತಿಯರು, ತಾಯಂದಿರು ತಮ್ಮ ಮಕ್ಕಳ ಊಟದ ಡಬ್ಬಿಗೆ ಈ ಬೆಳ್ಳುಳ್ಳಿ ಖಾರದ ಅನ್ನವನ್ನು ಮಾಡಿಕೊಳ್ಳಬಹುದು. ಇದನ್ನು ಕೇವಲ 5 ನಿಮಿಷದಲ್ಲೇ ತಯಾರಿಸಬಹುದು.

ಬೇಕಾಗಿರುವ ಸಾಮಗ್ರಿಗಳು

ಅಡುಗೆ ಎಣ್ಣೆ- 4 ಚಮಚ

ಬೆಳ್ಳುಳ್ಳಿ- 10ರಿಂದ 15

ಬ್ಯಾಡಗಿ ಮೆಣಸಿನಕಾಯಿ - 4

ಖಾರದ ಪುಡಿ - 2 ಚಮಚ

ಜೀರಿಗೆ - ಅರ್ಧ ಚಮಚ

ಉಪ್ಪು- ರುಚಿಗೆ ತಕ್ಕಷ್ಟು

ಕರಿಬೇವು- 10 ಎಲೆ

ಮಾಡುವ ವಿಧಾನ

ಮೊದಲು ಮಿಕ್ಸಿ ಜಾರಿಗೆ ಬೆಳ್ಳುಳ್ಳಿ, ಬ್ಯಾಡಗಿ ಮೆಣಸಿನಕಾಯಿ, ಉಪ್ಪು, ಖಾರದ ಪುಡಿ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಬಳಿಕ ಒಂದು ಪಾತ್ರೆಯಲ್ಲಿ ಎಣ್ಣೆ, ಜೀರಿಗೆ, ಕರಿಬೇವು, ಬೆಳ್ಳುಳ್ಳಿ, ಬ್ಯಾಡಗಿ ಮೆಣಸಿನಕಾಯಿ ಹಾಕಿ ಹುರಿಯಿರಿ.

ಬಳಿಕ ಇದಕ್ಕೆ ತರಿತರಿಯಾಗಿ ರುಬ್ಬಿಟ್ಟುಕೊಂಡ ಬೆಳ್ಳುಳ್ಳಿ ಮಿಶ್ರಣವನ್ನು ಸೇರಿಸಿ, ಹಸಿ ವಾಸನೆ ಹೋಗುವವರೆಗೂ ಸಣ್ಣ ಉರಿಯಲ್ಲಿ ಹುರಿಯಿರಿ. ನಂತರ ಇದಕ್ಕೆ ಈಗಾಗಲೇ ಬೇಯಿಸಿದ ಅನ್ನವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿಯನ್ನು ಇದರ ಮೇಲೆ ಹಾಕಿ. ಈಗ ಬಿಸಿ ಬಿಸಿಯಾದ ಬೆಳ್ಳುಳ್ಳಿ ಖಾರದ ಅನ್ನ ಸವಿಯಲು ಸಿದ್ಧ.

Dailyhunt
Disclaimer: This content has not been generated, created or edited by Dailyhunt. Publisher: Prajavani