Dailyhunt Logo
  • Light mode
    Follow system
    Dark mode
    • Play Story
    • App Story
ರೆಸಿಪಿ: ಬಾಯಲ್ಲಿ ನೀರೂರಿಸುವ ಹಲ್ವ‌ ವೈವಿಧ್ಯ

ರೆಸಿಪಿ: ಬಾಯಲ್ಲಿ ನೀರೂರಿಸುವ ಹಲ್ವ‌ ವೈವಿಧ್ಯ

ದಿಢೀರ್ ಆಗಿ ಮನೆಗೆ ಬರುವ ಅತಿಥಿಗಳಿಗೆ ಏನಾದರೂ ಸಿಹಿ ಮಾಡಬೇಕಲ್ಲ? ಹಲ್ವ ಮಾಡಿದರೆ ಹೇಗೆ? ಇದೋ ಇಲ್ಲಿವೆ ಬಗೆ ಬಗೆಯ ರೆಸಿಪಿ.

ಬಾದಾಮಿ ಹಲ್ವ‌

ಬೇಕಾಗುವ ಸಾಮಗ್ರಿ: ಗೋಧಿ ಅರ್ಧಕೆ .ಜಿ. ಹಾಲು ಅರ್ಧ ಲೀಟರ್, 1/4 ಕೆ.ಜಿ ತುಪ್ಪ ,3/4 ಕೆ.ಜಿ ಸಕ್ಕರೆ , 1/4 ಕೆ.ಜಿ ಬಾದಾಮಿಪುಡಿ , 20 ಬಾದಾಮಿ , 1/2 ಚಮಚ ಕೇಸರಿ ದಳ, 1 ಚಮಚ ಏಲಕ್ಕಿಪುಡಿ, 1/4 ಚಮಚ ಜಾಕಾಯಿಪುಡಿ.ತಯಾರಿಸುವ ವಿಧಾನ: ಆರಿಸಿದ ಶುದ್ಧ ಗೋಧಿಯನ್ನು 3 ದಿನ ನಿತ್ಯ ನೀರು ಬದಲಾಯಿಸುತ್ತ ನೆನೆಸಿಡಬೇಕು.ಕೇಸರಿ ದಳಗಳನ್ನು 2 ಚಮಚ ಬಿಸಿ ಹಾಲಿನಲ್ಲಿ 15 ನಿಮಿಷ ನೆನೆಸಿ ರುಬ್ಬಿರಿ.

ಈಗ ಗೋಧಿಯನ್ನು ಬಸಿದು ನೀರು ಬೆರೆಸದೇ ರುಬ್ಬಿ ಸೋಸಿಕೊಳ್ಳಿ.ಇದಕ್ಕೆ ಕೊಂಚ ಬಿಸಿನೀರು ಬೆರೆಸಿ ,ಕಲಸಿ ಬಂದ ಹಾಲನ್ನು 12 ಗಂಟೆ ಕಾಲ ಮುಚ್ಚಿಡಿ.ಮರುದಿನ ಹಾಲಿನ ಮೇಲೆ ಇರುವ ನೀರನ್ನು ಚೆಲ್ಲಿ ಉಳಿದ ಗಟ್ಟಿ ಮಿಶ್ರಣವನ್ನು ಬಟ್ಟೆಯಲ್ಲಿ ಕಟ್ಟಿ ಗೂಟಕ್ಕೆ ನೇತುಹಾಕಿ. ಪಾತ್ರೆಯಲ್ಲಿ ಸಕ್ಕರೆ ಹಾಗೂ ಹಾಲು ಕುದಿಸಿ ಪಾಕ ಸಿದ್ಧವಾಗಿರಲಿ.ಈಗ ಪಾಕಕ್ಕೆ ಗೋಧಿ ಹಾಲಿನ ಮಿಶ್ರಣವನ್ನು ಸೇರಿಸಿ ಸಣ್ಣ ಉರಿಯಲ್ಲಿ ತಿರುವುತ್ತಿರಿ. ಹಲ್ವ ಗಟ್ಟಿಯಾದ ನಂತರ ಬಾದಾಮಿಪುಡಿ, ಸ್ವಲ್ಪ ತುಪ್ಪ ಹಾಕಿ ಐದು ನಿಮಿಷ ಬಿಟ್ಟು ಏಲಕ್ಕಿ, ಜಾಕಾಯಿಪುಡಿ ,ಕೇಸರಿ ಸೇರಿಸಿ. ತುಪ್ಪ ಸವರಿದ ತಟ್ಟೆಗೆ ಸುರಿದು ಸಮವಾಗಿ ತಟ್ಟಿ ಅದರ ಮೇಲೆ ಬಾದಾಮಿ ಚೂರುಗಳನ್ನು ಉದುರಿಸಿ . ತಣ್ಣಗಾದ ನಂತರ ಬೇಕಾದ ಆಕಾರಕ್ಕೆ ತನ್ನಿ.

ಮಾವಿನ ಹಲ್ವ

ಬೇಕಾಗುವ ಸಾಮಗ್ರಿ: 5 ಚೆನ್ನಾಗಿ ಹಣ್ಣಾದ ಮಾವಿನಹಣ್ಣು ,6 ಚಮಚ ಸಕ್ಕರೆ, 1/4 ಲಿ.ಹಾಲು , 4 ಚಮಚ ತುಪ್ಪ , 1 ಚಮಚ ಏಲಕ್ಕಿಪುಡಿ , 20- 25 ಗೋಡಂಬಿ.ತಯಾರಿಸುವ ವಿಧಾನ: ಬಿಸಿ ಹಾಲಿನಲ್ಲಿ ಸಕ್ಕರೆ ಕರಗಿಸಿ ಅದಕ್ಕೆ ಮಾವಿನ ಹಣ್ಣನ್ನು ಕಿವುಚಿ ರಸವನ್ನು ಸೇರಿಸಿ. ಹಾಲು,ತುಪ್ಪ, ಗೋಡಂಬಿ, ಏಲಕ್ಕಿಪುಡಿ ಹಾಕಿ ಒಲೆಯ ಮೇಲೆ ಬೇಯಿಸಿ. ಹಲ್ವ ಹದವಾಗಿ ಬೆಂದ ನಂತರ ತುಪ್ಪ ಸವರಿದ ತಟ್ಟೆಗೆ ಹಾಕಿ ಬೇಕಾದ ಆಕಾರಕ್ಕೆ ಕತ್ತರಿಸಿ.

ಗೋಧಿ ಹಲ್ವ

ಬೇಕಾಗುವ ಸಾಮಗ್ರಿ: 100 ಗ್ರಾಂ ಗೋಧಿ,150 ಗ್ರಾಂ ಸಕ್ಕರೆ , 75 ಗ್ರಾಂ ತುಪ್ಪ , ತಲಾ 50 ಗ್ರಾಂ ಗೋಡಂಬಿ, ದ್ರಾಕ್ಷಿ, 4-5 ಕೇಸರಿ ದಳ, 1/2 ಚಮಚ ಏಲಕ್ಕಿ ಪುಡಿ , 2 ಚಮಚ ನಿಂಬೆರಸ , 1 ಚಿಟಿಕೆ ಕೇಸರಿ.ತಯಾರಿಸುವ ವಿಧಾನ: ಗೋಧಿಯನ್ನು ದಿನವಿಡೀ ನೆನೆಸಿಟ್ಟು ನುಣ್ಣಗೆ ರುಬ್ಬಿ, ಅದರ ಹಾಲನ್ನು ಸೋಸಿ ಅದನ್ನು ಒಂದು ಗಂಟೆ ಕಾಲ ಮುಚ್ಚಿಡಿ. ಒಲೆಯ ಮೇಲೆ ಕಾದ ತುಪ್ಪಕ್ಕೆ ದ್ರಾಕ್ಷಿ, ಗೋಡಂಬಿ ಹುರಿದು ತೆಗೆದಿಡಿ. ಅದೇ ತುಪ್ಪಕ್ಕೆ ನೀರು, ಸಕ್ಕರೆ ಬೆರೆಸಿ ಗಟ್ಟಿಪಾಕ ಮಾಡಿಕೊಳ್ಳಿ. ಈಗ ಗೋಧಿ ಹಾಲಿನ ಮೇಲಿನ ನೀರನ್ನು ಬಗ್ಗಿಸಿ ತೆಗೆದು ಉಳಿದ ಹಾಲನ್ನು ಕಲಕಿ ಸಕ್ಕರೆ ಪಾಕಕ್ಕೆ ಸುರಿದು ಅದು ಗಂಟಾಗದಂತೆ ಕಲಕುತ್ತಿರಿ.ಅದು ಗಟ್ಟಿಯಾದ ನಂತರ ಕೇಸರಿ, ನಿಂಬೆರಸ, ದ್ರಾಕ್ಷಿ, ಗೋಡಂಬಿ ಹಾಕಿ ಕಲಸಿ 5 ನಿಮಿಷ ಬೇಯಿಸಿ.ಹಲ್ವ ಪಾತ್ರೆಗೆ ಅಂಟದೇ ಬಿಟ್ಟ ನಂತರ ತಟ್ಟೆಗೆ ಹಾಕಿದರೆ ಗೋಧಿ ಹಲ್ವ ಸವಿಯಲು ಸಿದ್ಧ.

261031-51-978490934

Dailyhunt
Disclaimer: This content has not been generated, created or edited by Dailyhunt. Publisher: Prajavani