Dailyhunt Logo
  • Light mode
    Follow system
    Dark mode
    • Play Story
    • App Story
ರೆಸಿಪಿ: ಮನೆಯಲ್ಲಿಯೇ ಹೀಗೆ ತಯಾರಿಸಿ ಗರಿಗರಿಯಾದ ಬದನೆಕಾಯಿ, ಬಿಟ್ರೂಟ್ ಚಿಪ್ಸ್

ರೆಸಿಪಿ: ಮನೆಯಲ್ಲಿಯೇ ಹೀಗೆ ತಯಾರಿಸಿ ಗರಿಗರಿಯಾದ ಬದನೆಕಾಯಿ, ಬಿಟ್ರೂಟ್ ಚಿಪ್ಸ್

ಳೆಗಾಲದ ಚುಮುಚುಮು ಮಳೆಯಲ್ಲಿ ರುಚಿಕರವಾದ ಚಿಪ್ಸ್ ಅಥವಾ ಖಾದ್ಯಗಳನ್ನು ಸೇವಿಸುವುದು ಸಾಮಾನ್ಯ. ಕೆಲವರಂತೂ ಬಾಲ್ಕನಿಯಲ್ಲಿ ಕುಳಿತು ಹಚ್ಚಹಸಿರಿನ ಪರಿಸರ ಹಾಗೂ ಮಳೆಯನ್ನು ಅನುಭವಿಸುತ್ತ ಗರಿಗರಿಯಾದ ಖಾದ್ಯಗಳನ್ನು ಸೇವಿಸುತ್ತಾರೆ. ಹೀಗಾಗಿ ಅಂಗಡಿಗಳಿಂದ ಚಿಪ್ಸ್ ತರುವ ಬದಲು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿಕೊಳ್ಳಬಹುದು.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


ರೆಸಿಪಿ: ಮನೆಯಲ್ಲಿಯೇ ಹೀಗೆ ತಯಾರಿಸಿ ಗರಿಗರಿಯಾದ ಬದನೆಕಾಯಿ, ಬಿಟ್ರೂಟ್ ಚಿಪ್ಸ್

ಒಂದು ಸಾಲಿನಲ್ಲಿಮನೆಯಲ್ಲೇ ಲಭ್ಯವಿರುವ ಬದನೆಕಾಯಿ ಮತ್ತು ಬಿಟ್ರೂಟ್ ಬಳಸಿ ಆರೋಗ್ಯಕರ ಹಾಗೂ ಗರಿಗರಿಯಾದ ಚಿಪ್ಸ್ ತಯಾರಿಸುವ ಸರಳ ವಿಧಾನವನ್ನು ಈ ಲೇಖನ ವಿವರಿಸುತ್ತದೆ.ಪ್ರತಿ ಹಂತದ ಮಾಹಿತಿ1ಆರೋಗ್ಯಕರ ತರಕಾರಿಗಳ ಆಯ್ಕೆಬದನೆಕಾಯಿ ಮತ್ತು ಬಿಟ್ರೂಟ್ ಆಯಂಟಿಆಕ್ಸಿಡೆಂಟ್‌ಗಳು, ವಿಟಮಿನ್‌ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದ್ದು, ಜೀರ್ಣಕ್ರಿಯೆ ಮತ್ತು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.2ತರಕಾರಿಗಳ ತಯಾರಿ ವಿಧಾನಮೊದಲು ಬದನೆಕಾಯಿ ಮತ್ತು ಬಿಟ್ರೂಟ್‌ಗಳನ್ನು ಸ್ವಚ್ಛಗೊಳಿಸಿ, ನೀರಿನಲ್ಲಿ ತೊಳೆದು ತೆಳುವಾದ ಸ್ಲೈಸ್‌ಗಳಾಗಿ ಹೆಚ್ಚಿಕೊಳ್ಳಬೇಕು.3ಮಸಾಲೆ ಮಿಶ್ರಣದ ಹಂತಈ ತುಂಡುಗಳಿಗೆ ಸ್ವಲ್ಪ ಆಲಿವ್ ಎಣ್ಣೆಯನ್ನು ಸೇರಿಸಿ, ಉಪ್ಪು ಮತ್ತು ಚಾಟ್ ಮಸಾಲವನ್ನು ಉದುರಿಸಿ ಎರಡು ನಿಮಿಷಗಳ ಕಾಲ ಹಾಗೆಯೇ ಬಿಡಬೇಕು.4ಬೇಯಿಸುವ ವಿವಿಧ ವಿಧಾನಗಳುಓವನ್, ಏರ್ ಫ್ರೈಯರ್ ಬಳಸಬಹುದು ಅಥವಾ ಸಿಹಿ ಬಣ್ಣ ಬರುವವರೆಗೆ ಬಾಣಲೆಯಲ್ಲಿ ಎಣ್ಣೆಯಲ್ಲಿ ಕರಿಯುವ ಮೂಲಕ ಚಿಪ್ಸ್ ತಯಾರಿಸಬಹುದು.ಪ್ರಮುಖ ಅಂಕಿಅಂಶಗಳು180°ಓವನ್ ಬೇಯಿಸುವ ತಾಪಮಾನ15 ರಿಂದ 20 ನಿಮಿಷಓವನ್ ಬೇಯಿಸುವ ಸಮಯ8 ರಿಂದ 10 ನಿಮಿಷಏರ್ ಫ್ರೈಯರ್ ಸಮಯಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಚಿಪ್ಸ್‌ ಅನ್ನು ಆಲೂಗೆಡ್ಡೆ, ಬಾಳೆಕಾಯಿ ಹಾಗೂ ಮರಗೆಣಸಿನಿಂದ ಮಾತ್ರವಲ್ಲದೆ, ಬದನೆಕಾಯಿ ಮತ್ತು ಬಿಟ್ರೂಟ್‌ನಿಂದಲೂ ತಯಾರಿಸಬಹುದು. ಈ ಎರಡು ತರಕಾರಿಗಳಲ್ಲಿ ಆಯಂಟಿಆಕ್ಸಿಡೆಂಟ್‌, ವಿಟಮಿನ್‌ ಹಾಗೂ ಖನಿಜಗಳು ಅಧಿಕವಾಗಿರುತ್ತದೆ. ಇವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಕಾರಿಯಾಗಿವೆ.

ಹಾಗಾದರೆ ಮನೆಯಲ್ಲಿಯೇ ಸುಲಭವಾಗಿ ಬದನೆಕಾಯಿ, ಬಿಟ್ರೂಟ್ ಚಿಪ್ಸ್ ತಯಾರಿಸುವ ಸುಲಭ ವಿಧಾನ ಇಲ್ಲಿದೆ.

ಬೇಕಾದ ಪದಾರ್ಥಗಳು

  • ಬದನೆಕಾಯಿ ಮತ್ತು ಬಿಟ್ರೂಟ್

  • ಉಪ್ಪು

  • ಚಾಟ್ ಮಸಾಲ

  • ಬೇಕಿಂಗ್ ಶೀಟ್

  • ಆಲಿವ್ ಎಣ್ಣೆ

  • ಅಡುಗೆ ಎಣ್ಣೆ

ತಯಾರಿಸುವ ವಿಧಾನ

  • ಮೊದಲು ಬದನೆಕಾಯಿ ಮತ್ತು ಬಿಟ್ರೂಟ್‌ ಅನ್ನು ಸ್ವಚ್ಛಗೊಳಿಸಿ, ನೀರಿನಲ್ಲಿ ತೊಳೆಯಿರಿ.

  • ಸ್ವಚ್ಛಗೊಳಿಸಿದ ಬದನೆಕಾಯಿ ಮತ್ತು ಬಿಟ್ರೂಟ್‌ಗಳನ್ನು ಸಣ್ಣದಾಗಿ ಸ್ಲೈಸ್‌ ರೀತಿಯಲ್ಲಿ ತೆಳುವಾದ ತುಂಡುಗಳಾಗಿ ಹೆಚ್ಚಿಕೊಳ್ಳಿ .

  • ಬಳಿಕ ತುಂಡುಗಳನ್ನು ಒಂದು ಪಾತ್ರೆ ಅಥವಾ ಬಟ್ಟಲಿಗೆ ಹಾಕಿ ಅದಕ್ಕೆ ಸ್ವಲ್ಪ ಆಲಿವ್ ಸೇರಿಸಿ ಮಿಶ್ರಣ ಮಾಡಿ.

  • ನಂತರ ತುಂಡುಗಳನ್ನು ಬೇಕಿಂಗ್ ಶೀಟ್ ಮೇಲೆ ಜೋಡಿಸಿ. ಅದರ ಮೇಲೆ ಉಪ್ಪು ಮತ್ತು ಮಿಶ್ರಣ ಮಾಡಿಕೊಂಡ ಚಾಟ್ ಮಸಾಲವನ್ನು ಉದುರಿಸಿ, 2 ನಿಮಿಷ ಬಿಡಿ.

  • ಓವನ್‌ನಲ್ಲಿ ಬೇಯಿಸುವುದಾದರೆ, ಬೇಕಿಂಗ್ ಟ್ರೇಗೆ ಆಲಿವ್‌ ಎಣ್ಣೆ ಸವರಿ, ಬದನೆಕಾಯಿ ಮತ್ತು ಬಿಟ್ರೂಟ್‌ ತುಂಡುಗಳನ್ನು ಒಂದರ ಪಕ್ಕ ಒಂದನ್ನು ಜೋಡಿಸಿ, 180° ಡಿಗ್ರಿಯಲ್ಲಿ 15 ರಿಂದ 20 ನಿಮಿಷಗಳ ಬೇಯಿಸಿ.

  • ಏರ್ ಫ್ರೈಯರ್‌ನಲ್ಲಾದರೆ, 180° ಡಿಗ್ರಿಯಲ್ಲಿ8 ರಿಂದ 10 ನಿಮಿಷಗಳ ಕಾಲ ಬೇಯಿಸಬಹುದು. ಬಾಣೆಲೆಯಲ್ಲಿ ಕರಿಯುವುದಾದರೆ, ಅಡುಗೆ ಎಣ್ಣೆ ಬಳಸಿ ಚಿನ್ನದ ಬಣ್ಣ ಬರುವವರೆಗೂ ಕರಿದರೆ, ಗರಿಗರಿಯಾದ ರುಚಿಕರವಾದ ಬದನೆಕಾಯಿ ಮತ್ತು ಬಿಟ್ರೂಟ್ ಚಿಪ್ಸ್‌ ಸಿದ್ಧವಾಗುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani