Dailyhunt Logo
  • Light mode
    Follow system
    Dark mode
    • Play Story
    • App Story
ರೇವಪಯ್ಯ ಮುತ್ಯಾನ ಜಾತ್ರೆ ನಾಳೆ ಹುಲಸೂರ ಮುಚಳಂಬ ಗ್ರಾಮದಲ್ಲಿ

ರೇವಪಯ್ಯ ಮುತ್ಯಾನ ಜಾತ್ರೆ ನಾಳೆ ಹುಲಸೂರ ಮುಚಳಂಬ ಗ್ರಾಮದಲ್ಲಿ

ಹುಲಸೂರ: 'ತಾಲ್ಲೂಕಿನ ಸುಕ್ಷೇತ್ರ ಮುಚಳಂಬ ಗ್ರಾಮದಲ್ಲಿ ರೇವಪಯ್ಯ ಮುತ್ಯಾನ ಜಾತ್ರೆ ಜುಲೈ 5ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿ ಯಾಗಿ ನಡೆಯಲಿದೆ' ಎಂದು ರೇವಪಯ್ಯ ಮಹಾಸ್ವಾಮಿ ದೇವಸ್ಥಾನ ಟ್ರಸ್ಟ್ ಮಂಡಳಿ ತಿಳಿಸಿದೆ.

'ಜಾತ್ರೆ ಅಂಗವಾಗಿ ಅಂದು ಬೆಳಿಗ್ಗೆ ರುದ್ರಾಭಿಷೇಕ, ಮಹಿಳೆಯರ ಪೂಜೆ ನಡೆಯಲಿದೆ.

ಭಕ್ತರಿಗೆ ಹೋಳಿಗೆ-ತುಪ್ಪದ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಜಾತ್ರೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು' ಎಂದು ಟ್ರಸ್ಟ್ ಮಂಡಳಿ ಅಧ್ಯಕ್ಷ ಚಂದ್ರಕಾಂತ ವಿಶ್ವನಾಥ ಮುರಗೆಪ್ಪ, ಉಪಾಧ್ಯಕ್ಷ ವಿಜಯಕುಮಾರ ಖಲಾಲೇ, ಕಾರ್ಯದರ್ಶಿ ರಾಜಶೇಖರ ಬಿರಾದಾರ ಹಾಗೂ ಸದಸ್ಯರಾದ ಚನ್ನವೀರಯ್ಯ ಹಿರೇಮಠ, ಬಾಬು ಬುದ್ದೆ, ಶಶಿಕಾಂತ ಗುರಣ್ಣಾ, ಶಿವಪುತ್ರ ಕರಬಶೇಟೆ, ತಿರಮುಖ ಜಡ್ಗೆ, ರಾಮಯ್ಯ ಮಠಪತಿ, ಮಹಾದೇವ ಅಲ್ದೇಪ್ಪ, ಶಾಂತಕುಮಾರ ಗುರಣ್ಣ, ಕಾವೇರಿ ಮುರಗೆಪ್ಪ, ದಯಾನಂದ ಪಾಟೀಲ ಸೇರಿದಂತೆ ಟ್ರಸ್ಟ್ ಮಂಡಳಿಯ ಪದಾಧಿಕಾರಿಗಳು ಮತ್ತು ಭಕ್ತರು ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-33-1448102136

Dailyhunt
Disclaimer: This content has not been generated, created or edited by Dailyhunt. Publisher: Prajavani